logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

dandle
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
(ಮಗುವನ್ನು)
  • (ಕಂಕುಳಲ್ಲಿ ಯಾ ತೊಡೆಯ ಮೇಲೆ) ಕುಲುಕಾಡಿಸು; ಎತ್ತಿ ಆಡಿಸು; ಕುಣಿಸು.
  • ಮುದ್ದಾಡು; ಲಾಲಿಸು; ಪ್ರೀತಿಸು.

  • dandruff
    ನಾಮವಾಚಕ
    ಹಗುರು; ತಲೆ ಹೊಟ್ಟು; ಚಿಬ್ಬು; ಸಿಬ್ಬು; ಹುರುಪು:
  • ತಲೆಯಿಂದ ಹುರುಪು ಹುರುಪಾಗಿ ಏಳುವ ಸತ್ತ ಚರ್ಮದ ಭಾಗ.
  • ತಲೆಯಲ್ಲಿ ಹೊಟ್ಟು ಇರುವ ಸ್ಥಿತಿ.

  • dandy
    ನಾಮವಾಚಕ
  • (ಮುಖ್ಯವಾಗಿ ಉಡುಪಿನಲ್ಲಿ) ಸೊಗಸುಗಾರ; ಷೋಕಿಲಾಲ; ಶೃಂಗಾರಶೇಖರ.
  • (ಆಡುಮಾತು) ಪರಮಾಯಿಷಿ (ವಸ್ತು); ಅತ್ಯುತ್ತಮವಾದದ್ದು; ಅತ್ಯುತ್ಕೃಷ್ಟ; ಶ್ರೇಷ್ಠ; ಮೊದಲ ದರ್ಜೆಯದು.
  • ವಿಶಿಷ್ಟ ರೀತಿಯಲ್ಲಿ ಅಳವಡಿಸಿದ ಒಂದು ಯಾ ಎರಡು ಕೊವೆಗಳುಳ್ಳ ಸಣ್ಣ ಹಡಗು.
  • ಸ್ಟಿಂಗ್‍ಗಾಡಿ; (ಸ್ಟಿಂಗ್‍ ಇರುವ) ಗೌಳಿಗರ ಬಂಡಿ, ಹಾಲಿನ ಗಾಡಿ.
  • ಗಾಡಿಪೀಪಾಯಿ; ರಸ್ತೆಗೆ ಡಾಂಬರು ಹಾಕುವಾಗ ಬಳಸುವ, ಚಕ್ರಗಳಿರುವ ಪೀಪಾಯಿ.

  • dandy
    ಗುಣವಾಚಕ
  • ಸೊಗಸುಗಾರತನದ; ಷೋಕಿಲಾಲತನದ; ಠಾಕುಠೀಕಾದ.
  • (ಆಡುಮಾತು) ಪರಮಾಯಿಷಿ; ಅತ್ಯುತ್ತಮ; ಶ್ರೇಷ್ಠ; ಅತ್ಯುತ್ಕೃಷ್ಟ; ಮೊದಲ ದರ್ಜೆಯ.

  • dandy
    ನಾಮವಾಚಕ
  • (ಭಾರತ) (ಹಿಮಾಲಯ ಪ್ರದೇಶದಲ್ಲಿ ಸಾಗಿಸಲು ಬಳಸುವ) ದೋಲಿ; ದಂಡಿಗೆ; ಮಂಚಲು.
  • ದಾಂಡಿ; ಗಂಗಾನದಿಯ ಅಂಬಿಗ.
  • (ಭಾರತ) ಪಲ್ಲಕ್ಕಿ.

  • dandy
    ನಾಮವಾಚಕ
    ಡೆಂಗೀ ಜ್ವರ; ಮೈಮೇಲೆ ಗುಳ್ಳೆಗಳನ್ನೆಬ್ಬಿಸಿ, ಕೀಲುಗಳಲ್ಲಿ ಬಹಳ ಯಾತನೆ ಉಂಟುಮಾಡುವ ಒಂದು ಜ್ವರ.

    dandy-brush
    ನಾಮವಾಚಕ
    ಖರಾರು; ಗೊರಪ; ಪ್ರಾಣಿಬ್ರಷ್ಷು; ಪ್ರಾಣಿಗಳನ್ನು, ಮುಖ್ಯವಾಗಿ ಕುದುರೆಗಳನ್ನು, ಸ್ವಚ್ಛಗೊಳಿಸಲು ಮತ್ತು ಮಾಲೀಸುಮಾಡಲು ಬಳಸುವ ಒರಟಾದ ಬ್ರಷ್ಷು ಯಾ ಕುಚ್ಚು ಮಟ್ಟೆ.

    dandy-roll
    ನಾಮವಾಚಕ
    = dandy-roller.

    dandy-roller
    ನಾಮವಾಚಕ
    ಡ್ಯಾಂಡಿರೋಲರ್‍; ಡ್ಯಾಂಡಿ ಉರುಳೆ; ಕಾಗದದ ತಯಾರಿಕೆಯಲ್ಲಿ ಪಲ್ಪನ್ನು ಗಟ್ಟಿಮಾಡಿ ನೀರುಗುರುತು ಹಾಕಲು ಬಳಸುವ ಸಾಧನ.

    dandyish
    ಗುಣವಾಚಕ
    (ನಡವಳಿಕೆ ಯಾ ತೋರಿಕೆಯಲ್ಲಿ) ಸೊಗಸುಗಾರತನ ಸೂಚಿಸುವ; ಷೋಕಿಯಂತೆ ತೋರುವ.


    logo