logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Caesarism
ನಾಮವಾಚಕ
  • ನಿರಂಕುಶ ಪ್ರಭುತ್ವ; ನಿರಂಕುಶಾಧಿಪತ್ಯ.
  • ಸಾಮ್ರಾಜ್ಯವಾದ; ಸಾರ್ವಭೌಮತ್ವ; ಸಾರ್ವಭೌಮ-ಅಧಿಕಾರ ಯಾ ವ್ಯವಸ್ಥೆ.

  • Caesarist
    ನಾಮವಾಚಕ
  • ನಿರಂಕುಶಪ್ರಭುತ್ವ ಪಕ್ಷಪಾತಿ; ನಿರಂಕುಶಪ್ರಭುತ್ವವಾದಿ; ಸರ್ವಾಧಿಪತ್ಯದ–ಹಿಂಬಾಲಕ, ಅನುಯಾಯಿ.
  • ಸಾಮ್ರಾಜ್ಯವಾದಿ; ಸಾರ್ವಭೌಮತ್ವವಾದಿ.

  • caesious
    ಗುಣವಾಚಕ
    (ಸಸ್ಯವಿಜ್ಞಾನ) ನೀಲಿಹಸಿರು ಯಾ ಬೂದುಹಸಿರು.

    caesium
    ನಾಮವಾಚಕ
    (ರಸಾಯನವಿಜ್ಞಾನ) ಸೀಸಿಯಂ; ಕ್ಷಾರ ಲೋಹಗಳ ಗುಂಪಿಗೆ ಸೇರಿದ, ಅವುಗಳಲ್ಲಿ ವಿದ್ಯುದ್ಧನದ ಗುಣದ, ಪರಮಾಣ್ವಂಕ 55, ಪರಮಾಣು ತೂಕ 133 ಉಳ್ಳ, ಮುಖ್ಯವಾಗಿ ಹೋಟೊ ವಿದ್ಯುತ್‍ಕೋಶಗಳಲ್ಲಿ ಬಳಸುವ, ಮೃದುವಾದ ಬಿಳಿ ಲೋಹಧಾತು, Cs.

    caespitose
    ಗುಣವಾಚಕ
    (ಸಸ್ಯವಿಜ್ಞಾನ) ತೆಂಡೆ; ಗುಚ್ಛಿ; ಕುಚ್ಚಿನಂಥ: ಹಿಂಡಿಲುಕಾಂಡಗಳಿರುವ; ಬೇರಿನಿಂದ ಮೇಲಕ್ಕೆ ಕಾಂಡಗಳು ಗುಂಪುಗುಂಪಾಗಿ ಹೆಣೆದುಕೊಂಡು—ಬರುವ, ಬೆಳೆಯುವ.

    caesura
    ನಾಮವಾಚಕ
  • (ಗ್ರೀಕ್‍ ಮತ್ತು ಲ್ಯಾಟಿನ್‍ ಛಂದಸ್ಸು) ಯತಿ; ವಿರಾಮ; ಪದ್ಯಪಂಕ್ತಿಯಲ್ಲಿ ಯಾ ಪಾದದಲ್ಲಿ ಎರಡು ಪದಗಳ ನಡುವೆ ಬರುವ ವಿರಾಮ.
  • (ಆಧುನಿಕ ಛಂದಸ್ಸು) ಪಾದದ ಯಾ ಪಂದ್ಯಪಂಕ್ತಿಯ ಮಧ್ಯಭಾಗದ ಹತ್ತಿರ ಬರುವ ವಿರಾಮ; ಮಧ್ಯವಿರಾಮ.

  • caesural
    ಗುಣವಾಚಕ
    ಯತಿಯ; ಪಂದ್ಯಪಂಕ್ತಿಯಲ್ಲಿ ಬರುವ ವಿರಾಮದ ಯಾ ಅದಕ್ಕೆ ಸಂಬಂಧಿಸಿದ.

    CAF
    ಸಂಕ್ಷಿಪ್ತ
    (ಅಮೆರಿಕನ್‍ ಪ್ರಯೋಗ) cost and freight.

    cafard
    ನಾಮವಾಚಕ
    ವಿಷಣ್ಣತೆ; ಖಿನ್ನತೆ; ನಿರುತ್ಸಾಹ, ಚಿಂತೆ ಮತ್ತು ನಿಷ್ಕಾರಣವಾದ ಭಯಗಳಿಂದ ಕೂಡಿದ ಒಂದು ಮನೋರೋಗ.

    cafe
    (ಹಾಸ್ಯ ಪ್ರಯೋಗ ಯಾ ಅಶಿಷ್ಟ) ಕ್ಯಾ(ಕೇ)ಹ್‍ ನಾಮವಾಚಕ
  • ಕೆಹೆ; ಕಾಹಿಯಂಗಡಿ; ಕಾಹಿ ಹೋಟೆಲು; ಕಾಹಿ ಮತ್ತು ಲಘು ಉಪಾಹಾರಗಳನ್ನು ಒದಗಿಸುವ ಚಿಕ್ಕ ಹೋಟೆಲು.
  • =restaurant.
  • (ಅಮೆರಿಕನ್‍ ಪ್ರಯೋಗ) ಬಾರು; ವೈನು, ಬಿಯರು ಮೊದಲಾದವುಗಳ ಅಂಗಡಿ.
  • =cabaret.


  • logo