logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

backlist
ನಾಮವಾಚಕ
ಹಿಂಪಟ್ಟಿ; ಪ್ರಕಾಶಕರ, ಇನ್ನೂ ಮುದ್ರಣದಲ್ಲಿರುವ, ಪುಸ್ತಕಗಳ ಪಟ್ಟಿ.

backlog
ನಾಮವಾಚಕ
(ಸರಕು, ಕೆಲಸ, ವ್ಯವಹಾರ, ಮೊದಲಾದವುಗಳಲ್ಲಿ) ಉಳಿಕೆ; ಬಾಕಿ; ಸಿಲ್ಕು: a backlog of business orders ವ್ಯಾಪಾರದಲ್ಲಿ ಪೂರೈಸದ ಯಾ ಬಾಕಿ ಉಳಿದ ಬೇಡಿಕೆಗಳು.

backlog
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
(ಕೆಲಸ ಮೊದಲಾದವನ್ನು ಮಾಡದಿರುವುದರಿಂದ) ಉಳಿದಿರು; ಶೇಖರವಾಗು.
  • (ಸರಕು, ಕೆಲಸ, ವ್ಯವಹಾರ, ಮೊದಲಾದವುಗಳನ್ನು ಶೇಖರಿಸಿ) ಹಾಗೇ ಇಟ್ಟಿರು; ಉಳಿಸಿಟ್ಟಿರು.
  • (ಹಡಗಿನಲ್ಲಿ ಸರಕು ರವಾನಿಸಲು) ಕೋರಿಕೆ ನೋಂದಾಯಿಸು.

  • backmarker
    ನಾಮವಾಚಕ
    (ಸ್ಪರ್ಧೆ, ಪಂದ್ಯ, ಮೊದಲಾದವುಗಳಲ್ಲಿ) ರಿಯಾಯಿತಿಯಿಲ್ಲದ ಸ್ಪರ್ಧಿ; ಯಾವ ರಿಯಾಯಿತಿಯೂ ಇಲ್ಲದೆ ಭಾಗವಹಿಸುವ ವ್ಯಕ್ತಿ.

    backmost
    ಗುಣವಾಚಕ
    (ಸ್ಥಳ ಮೊದಲಾದವುಗಳ ವಿಷಯದಲ್ಲಿ) ಅತ್ಯಂತ ಹಿಂದಿನ; ಕಡು ಹಿಂದಣ; ಹತ್ತ ಹಿಂದಿರುವ.

    backpack
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ಬೆನ್ನುಹೊರೆ:
  • ಬೆನ್ನುಚೀಲ ಯಾ ಹಸುಬೆಯಲ್ಲಿ, ಬೆನ್ನಿನ ಮೇಲೆ ಒಯ್ಯುವ ಭಾರ, ಹೊರೆ.
  • ಬೆನ್ನಿನ ಮೇಲೆ ಹೊತ್ತಿರುವಂತೆಯೇ, ಕೆಲಸ ಮಾಡುವ ಯಾ ಮಾಡುವಂತೆ ನಿರ್ಮಿಸಿರುವ ಅಗ್ನಿಶಾಮಕ ಯಂತ್ರ ಮೊದಲಾದ ಸಲಕರಣೆ.

  • backpack
    ಸಕರ್ಮಕ ಕ್ರಿಯಾಪದ
    ( ಅಕರ್ಮಕ ಕ್ರಿಯಾಪದ ಸಹ) (ಅಮೆರಿಕನ್‍ ಪ್ರಯೋಗ) (ಆಹಾರ, ಹೊರೆ, ಸಲಕರಣೆ, ಮೊದಲಾದವುಗಳನ್ನು ಮುಖ್ಯವಾಗಿ ಪ್ರಯಾಣದಲ್ಲಿ) ಹೊತ್ತುಕೊಂಡು ಹೋಗು; ಹೊರು; ಒಯ್ಯು.

    backrest
    ನಾಮವಾಚಕ
    ಬೆನ್ನಾಧಾರ; ಬೆನ್ನಾಸರೆ; ಬೆನ್ನಿಗೆ ಯಾ ಹಿಂದುಗಡೆಗೆ ಆಧಾರವಾಗಿ ಬಳಸುವ ಯಾವುದೇ ಸಾಧನ.

    backset
    ನಾಮವಾಚಕ
  • ಮರಳುವಿಕೆ; ಹಿನ್ನಡೆ.
  • ತಡೆ; ಪ್ರತಿಬಂಧಕ.
  • (ನೀರಿನ) ಸುಳಿ; ಆವರ್ತ.
  • (ನೀರಿನ) ಎದುರು ಹೊನಲು; ಪ್ರತಿಪ್ರವಾಹ.

  • backsheesh
    ನಾಮವಾಚಕ
    = baksheesh.


    logo