logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Abo
ನಾಮವಾಚಕ
(ಬಹುವಚನ Abos) (abos ಸಹ). (ಆಸ್ಟ್ರೇಲಿಯ ಅಶಿಷ್ಟ ಕೆಲವೊಮ್ಮೆ ಹೀನಾರ್ಥಕ ಪ್ರಯೋಗ) ಆದಿವಾಸಿ; ಮೂಲನಿವಾಸಿ.

Abo
ಗುಣವಾಚಕ
(abo ಸಹ) (ಆಸ್ಟ್ರೇಲಿಯ ಅಶಿಷ್ಟ) ಆದಿವಾಸಿಯ; ಮೂಲನಿವಾಸಿಗೆ ಸಂಬಂಧಿಸಿದ.

aboard
ಕ್ರಿಯಾವಿಶೇಷಣ ಪದಗುಚ್ಛ
  • (ಹಡಗು, ರೈಲು, ವಿಮಾನ, ಬಸ್ಸುಗಳಲ್ಲಿ) ಮೇಲೆ ಯಾ ಒಳಗೆ.
  • ಪಕ್ಕಕ್ಕೆ; ಪಕ್ಕದಲ್ಲಿ; ಪಕ್ಕಪಕ್ಕದಲ್ಲಿ; ಹತ್ತಿರ; ಸಮೀಪದಲ್ಲಿ.

  • aboard
    ಉಪಸರ್ಗ ಪದಗುಚ್ಛ
    ಮೇಲೆ; ಒಳಕ್ಕೆ: aboard a horse ಕುದುರೆಯ ಮೇಲೆ. aboard a ship ಹಡಗಿನ ಒಳಗೆ.fall aboard (ಇನ್ನೊಂದು ಹಡಗಿಗೆ) ಡಿಕ್ಕಿ ಹೊಡೆ.

    abode
    ನಾಮವಾಚಕ ಪದಗುಚ್ಛ
    make one’s abode ತನ್ನ ನಿವಾಸಸ್ಥಾನವನ್ನಾಗಿ ಮಾಡಿಕೊ.
  • ಬೀಡು; ಮನೆ; ನೆಲೆ; ವಸತಿ; ನಿವಾಸ.
  • ಇರುವುದು; ವಾಸ; ಮೊಕ್ಕಾಮು; ನಿವಾಸಸ್ಥಾನ.

  • abode
    ಕ್ರಿಯಾಪದ
    abide ಪದದ ಭೂತರೂಪ.

    aboil
    ಕ್ರಿಯಾವಿಶೇಷಣ
    ಕುದಿಯುತ್ತ.

    aboil
    ಗುಣವಾಚಕ
    ಕುದಿಯುವ; ಕುದಿಯುತ್ತಿರುವ.

    abolish
    ಸಕರ್ಮಕ ಕ್ರಿಯಾಪದ
    (ಪದ್ಧತಿ, ಸಂಪ್ರದಾಯ, ಮೊದಲಾದವನ್ನು) ತೆಗೆದುಹಾಕು; ರದ್ದು ಮಾಡು; ನಿಲ್ಲಿಸು; ಅಂತ್ಯಗೊಳಿಸು; ಕೊನೆಗಾಣಿಸು; ಅಳಿಸು; ನಾಶಮಾಡು.

    abolishable
    ಗುಣವಾಚಕ
    ರದ್ದು ಮಾಡಬಹುದಾದ; ಕೊನೆಗಾಣಿಸಬಹುದಾದ.


    logo