logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ink-slinger
ನಾಮವಾಚಕ
(ಹೀನಾರ್ಥಕ ಪ್ರಯೋಗ) ಲೇಖಕ (ವೃತ್ತಿಯವ); ಬರೆಹಗಾರ; ಶಾಯಿಚೆಲ್ಲುಗ.

ink-well
ನಾಮವಾಚಕ
ಮೇಜುಕುಡಿಕೆ; ಮಸಿಬಾನಿ; ಮಸಿಕುಳಿ; ಇಳಿಮೇಜಿನ ಕುಳಿಯಲ್ಲಿ ಜೋಡಿಸಿರುವ ಶಾಯಿಕುಡಿಕೆ.

inker
ನಾಮವಾಚಕ
  • ಶಾಯಿ ದೂರಲೇಖಕ; ವರ್ತಮಾನವನ್ನು ಶಾಯಿಯಲ್ಲಿ ಬರೆದಿಡುವ ದೂರಲೇಖಕ (ಟೆಲಿಗ್ರಾಹ್‍) ಸಲಕರಣೆ.
  • (ಮುದ್ರಣ ಮೊದಲಾದವುಗಳಲ್ಲಿ ಬಳಸುವ) ಶಾಯಿ ಉರುಳೆ; ಮಸಿದಿಂಡು; ಮಸಿಲೇಪಕ; ಮಸಿ (ಹಚ್ಚುವ) ಉರುಳೆ.

  • inkiness
    ನಾಮವಾಚಕ
    ಮಸಿಯಾಗಿರುವಿಕೆ; ಮಸಿಲಕ್ಷಣ; ಮಸಿಕಪ್ಪು; ಮಸಿಯಷ್ಟು ಕಪ್ಪಾಗಿರುವಿಕೆ.

    inkling
    ನಾಮವಾಚಕ
    ಸುಳಿವು; ಸೂಚನೆ; ಜಾಡು; ಸೂಕ್ಷ್ಮತಿಳಿವು; ಅನುಮಾನ; ಗುಮಾನಿ: get an inkling of what is going on ನಡೆಯುತ್ತಿರುವುದರ ಸುಳಿವು ಪಡೆ.

    inkstand
    ನಾಮವಾಚಕ
    (ಒಂದು ಯಾ ಹೆಚ್ಚು ದೌತಿಗಳನ್ನಿಡಲು ಸಾಮಾನ್ಯವಾಗಿ ಲೇಖನಿಯಾಸರೆ ಮೊದಲಾದವುಗಳೊಂದಿಗೆ ಇರುವ) ದೌತಿಮಣೆ; ಮಸಿಮಣೆ; ಶಾಯಿಪೀಠ; ಇಂಕ್‍ಸ್ಟ್ಯಾಂಡು.

    inky
    ಗುಣವಾಚಕ
  • ಮಸಿಯ; ಮಸಿಸಂಬಂಧದ.
  • ಮಸಿ ಬಳಸುವ; ಮಸಿಯಿಂದ ಬರೆದ.
  • ಗ್ರಾಂಥಿಕ; ಸಾಹಿತ್ಯಕ; ಗ್ರಂಥಗಳಿಗೆ ಸಂಬಂಧಿಸಿದ: libraries and inky dens ಗ್ರಂಥಾಲಯಗಳು ಮತ್ತು ಗ್ರಂಥಗಳ ಕೋಣೆಗಳು.
  • ಶಾಯಿಯಾದ; ಮಸಿಯಾದ: inky fingers ಮಸಿಯಾದ ಬೆರಳುಗಳು.
  • ಮಸಿಕಪ್ಪಿನ; ಕಗ್ಗಪ್ಪಿನ; ಮಸಿಯಷ್ಟು ಕಪ್ಪಾದ; ಬಹಳ ಕಪ್ಪಾದ; ಗಾಢ ಕತ್ತಲಿನ: inky night ಕಗ್ಗತ್ತಲಿನ ರಾತ್ರಿ.
  • ಮಸಿ ತೊಡೆದ; ಶಾಯಿ ಹಚ್ಚಿದ; ಮಸಿ ಬಳಿದ.

  • inlaid

    inland
    ನಾಮವಾಚಕ
    ಒಳನಾಡು; ಅಂತರ್ದೇಶ; ದೇಶದ ಒಳಭಾಗ; ಕರಾವಳಿಯಿಂದ ಯಾ ಗಡಿಯಿಂದ ದೂರವಿರುವ ಪ್ರದೇಶ.

    inland
    ಗುಣವಾಚಕ
  • ಒಳನಾಡಿನಲ್ಲಿರುವ; ಸಮುದ್ರಕ್ಕೆ ಯಾ ಎಲ್ಲೆಗೆ ಬಹುದೂರದಲ್ಲಿರುವ; ಅಂತರ್ದೇಶಿ.
  • ಒಳದೇಶದ; ಒಳನಾಡಿನ; ಅಂತರ್ದೇಶೀಯ; ದೇಶದ ಎಲ್ಲೆಯೊಳೆಗೆ ನಡೆಯುವ: inland trade ಒಳದೇಶದ ವ್ಯಾಪಾರ, ಅಂತರ್ದೇಶೀಯ ವ್ಯಾಪಾರ. inland duty ಒಳನಾಡಿನ (ವ್ಯಾಪಾರದ ಮೇಲಿನ) ಸುಂಕ; ಅಂತರ್ದೇಶಿಯ ಸುಂಕ. inland revenue (ತೆರಿಗೆ ಮತ್ತು ಒಳಸುಂಕಗಳೂ ಸೇರಿದ) ಒಳನಾಡಿನ ಉತ್ಪತ್ತಿ; ಅಂತರ್ದೇಶೀಯ ಉತ್ಪನ್ನ; ಒಳದೇಶದ ಆದಾಯ, ಹುಟ್ಟುವಳಿ.


  • logo