logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

injudiciousness
ನಾಮವಾಚಕ
ಅವಿವೇಚನೆ; ವಿವೇಚನಾರಾಹಿತ್ಯ; ಅವಿವೇಕ; ಅಯುಕ್ತತೆ; ಅನುಚಿತತೆ.

Injun
ನಾಮವಾಚಕ
(ಆಡುಮಾತು ಯಾ ಅಮೆರಿಕದ ಪ್ರಾಂತೀಯ ಪ್ರಯೋಗ) ಅಮೆರಿಕದ ಇಂಡಿಯನ್‍ (ವ್ಯಕ್ತಿ).

injunct
ಸಕರ್ಮಕ ಕ್ರಿಯಾಪದ
(ಆಡುಮಾತು) ತಡೆಯಾಜ್ಞೆಯ ಮೂಲಕ – ನಿಷೇಧಿಸು, ಪ್ರತಿಬಂಧಿಸು, ತಡೆಮಾಡು, ತಡೆಹಾಕು, ಅಡ್ಡಿಮಾಡು: I shall have to injunct that little matter of yours ನಿನ್ನ ಆ ಸಣ್ಣ ವಿಷಯಕ್ಕೆ ನಾನು ತಡೆಹಾಕಬೇಕಾಗಿದೆ.

injunction
ನಾಮವಾಚಕ
  • ಅಧಿಕಾರ ಪೂರ್ವಕವಾದ – ವಾಗ್ದಂಡ, ಆಜ್ಞೆ, ಕಟ್ಟಳೆ, ಆಣತಿ, ಹುಕುಂ, ಆದೇಶ, ತಡೆಗಟ್ಟಳೆ: he laid an injunction of secrecy on me ರಹಸ್ಯವಾಗಿಡಬೇಕೆಂಬ ಕಟ್ಟಳೆಯನ್ನು ಅವನು ನನ್ನ ಮೇಲೆ ವಿಧಿಸಿದನು.
  • (ನ್ಯಾಯಶಾಸ್ತ್ರ) (ತಪ್ಪಿತ ಮಾಡದಂತೆ ವ್ಯಕ್ತಿಯನ್ನು ಪ್ರತಿಬಂಧಿಸುವ, ನಿರ್ಬಂಧಿಸುವ) ತಡೆಯಾಣತಿ; ತಡೆಯಪ್ಪಣೆ; ತಡೆಯಾಜ್ಞೆ; ಪ್ರತಿಬಂಧಕಾಜ್ಞೆ; ನಿಷೇಧಾದೇಶ: he procured an injunction to hinder me from felling timber in his land ಅವನ ಜಈನಿನಲ್ಲಿರುವ ಮರವನ್ನು ನಾನು ಕಡಿಯದಂತೆ ಮಾಡಲು ಅವನು ತಡೆಯಾಜ್ಞೆಯನ್ನು ತಂದನು.
  • (ನ್ಯಾಯಶಾಸ್ತ್ರ) (ನಷ್ಟ, ಹಾನಿಗಳಿಗೆ ಗುರಿಯಾದವನಿಗೆ ಅದನ್ನು ಕಟ್ಟಿಕೊಡಲು ಕಾನೂನುರೀತ್ಯಾ ವಿಧಿಸುವ) ಪರಿಹಾರಕ್ರಮ; ನಷ್ಟ ಪರಿಹಾರಾಜ್ಞೆ.

  • injure
    ಸಕರ್ಮಕ ಕ್ರಿಯಾಪದ
  • (ಇನ್ನೊಬ್ಬರಿಗೆ) ಅನ್ಯಾಯ ಮಾಡು; ಅಪರಾಧ ಮಾಡು; ಅಪಕಾರ ಮಾಡು; ಕೆಡುಕುಮಾಡು; ಕೇಡು ಮಾಡು: the wretch, guilty of such baseless crime injures himself ಅಂಥ ಹೀನ ಅಪರಾಧ ಮಾಡಿದ ಪಾಪಿ ತನಗೇ ಕೇಡು ತಂದುಕೊಳ್ಳುತ್ತಾನೆ.
  • ಗಾಯ ಮಾಡು; ನೋವು ಮಾಡು; ನೋಯಿಸು; ಬಾಧೆಕೊಡು.
  • ತೊಂದರೆ ಮಾಡು; ಅಪಾಯ ಮಾಡು; ಹಾನಿಮಾಡು; ನಷ್ಟಪಡಿಸು: this tax will injure all business ಈ ತೆರಿಗೆ ಎಲ್ಲಾ ವ್ಯಾಪಾರಕ್ಕೂ ಹಾನಿಮಾಡುತ್ತದೆ.

  • injured
    ಗುಣವಾಚಕ
  • ಅನ್ಯಾಯಕ್ಕೊಳಗಾದ; ಕೇಡಿಗೊಳಗಾದ; ಕೆಡುಕಿಗೆ ಗುರಿಯಾದ: clearing the reputation of the injured youth ಅನ್ಯಾಯಕ್ಕೊಳಗಾದ ಯುವಕನ ಒಳ್ಳೆಯ ಹೆಸರನ್ನು ಉಳಿಸಿ.
  • ಗಾಯಗೊಂಡ; ಪೆಟ್ಟುಬಿದ್ದ: injured hand ಗಾಯಗೊಂಡ ಕೈ.
  • ಘಾಸಿ ಹೊಂದಿದ; ನೋವುಗೊಂಡ; ನೊಂದ: in an injured voice ನೊಂದ ದನಿಯಲ್ಲಿ.

  • injurious
    ಗುಣವಾಚಕ
  • ಅನ್ಯಾಯದ; ಕೇಡುಮಾಡುವ; ಕೆಡುಕುಮಾಡುವ; ಅಪಚಾರವೆಸಗುವ: injurious behaviour ಅನ್ಯಾಯದ ವರ್ತನೆ.
  • (ಭಾಷೆಯ ವಿಷಯದಲ್ಲಿ) ಹೀನಯಿಸುವ; ಅವಮಾನಕರ; ತೆಗಳಿಕೆಯ; ದೂಷಣೆಯ; ನಿಂದೆಯ; ಜರೆತದ: speak not injurious words ತೆಗಳಿಕೆಯ ಮಾತುಗಳನ್ನು ಆಡಬೇಡ.
  • ಹಾನಿಕರ; ಅಪಾಯಕರ; ಕೆಡುಕುಮಾಡುವ: injurious eating habits ಕೆಡಕುಂಟು ಮಾಡುವ ತಿನ್ನುವ ಚಾಳಿಗಳು.

  • injuriously
    ಕ್ರಿಯಾವಿಶೇಷಣ
  • ಅನ್ಯಾಯದಿಂದ; ಕೇಡು ಮಾಡುವಂತೆ; ಅಪಚಾರವೆಸಗುವಂತೆ.
  • ಹಾನಿಕರವಾಗಿ; ಕೆಡಕುಂಟುಮಾಡುವಂತೆ.

  • injuriousness
    ನಾಮವಾಚಕ
    ಹಾನಿಕರತೆ; ಅಪಾಯಕಾರಿತ್ವ; ಕೆಡುಕು ಮಾಡುವಿಕೆ; ಕೇಡುಮಾಡುವ ಗುಣ.

    injury
    ನಾಮವಾಚಕ
  • ಅನ್ಯಾಯ; ಅಪಚಾರ; ಕೇಡು; ಅನ್ಯಾಯ – ಕಾರ್ಯ ಯಾ ವರ್ತನೆ: adding insult to injury ಅನ್ಯಾಯಕ್ಕೆ ಅವಮಾನವನ್ನು ಸೇರಿಸುವ; ಗಾಯದ ಮೇಲೆ ಬರೆ ಎಳೆಯುವ.
  • ಗಾಯ; ಪೆಟ್ಟು.
  • ಕೆಡುಕು; ಹಾನಿ; ನಷ್ಟ; ತೊಂದರೆ; ಬಾಧೆ; ಅಪಾಯ: to escape without injury ಹಾನಿಯಿಲ್ಲದೆ ತಪ್ಪಿಸಿಕೊಳ್ಳಲು.
  • (ಒಬ್ಬರ ಒಳ್ಳೆಯ ಹೆಸರು, ಮೊದಲಾದವುಗಳಿಗೆ) ಹಾನಿ; ಅಪಚಾರ; ಅವಮಾನ.


  • logo