ಆರಂಭ ಮಾಡುವ, ಮುಂತೊಡಗುವ – ಶಕ್ತಿ, ಹಕ್ಕು: have the initiative ಆರಂಭ ಶಕ್ತಿ, ಅಧಿಕಾರ ಪಡೆದಿರು.
(ಮುಖ್ಯವಾಗಿ ನಿಷೇಧಕ ಪದದೊಡನೆ ಯಾ ನಿಷೇಧಾರ್ಥ ಸೂಚಿಸುವಂಥ ಪದದೊಡನೆ) ಉದ್ಯಮಶೀಲತೆ; ಪ್ರವರ್ತನ ಶಕ್ತಿ; ಉಪಕ್ರಮ ಶಕ್ತಿ, ಸಾಮರ್ಥ್ಯ, ಸಾಹಸ; (ವಸ್ತು, ಉದ್ಯಮಗಳನ್ನು) ಪ್ರವರ್ತನಗೊಳಿಸುವ ಶಕ್ತಿ: he lacks initiative; he has little or no initiative ಅವನಲ್ಲಿ ಪ್ರವರ್ತನ ಸಾಮರ್ಥ್ಯವಿಲ್ಲ; ಅವನಲ್ಲಿ ಸಾಹಸ ಬುದ್ಧಿ ಕಡಿಮೆ.
(ಮುಖ್ಯವಾಗಿ ಸ್ವಿಟ್ಸರ್ಲಂಡ್ ಹಾಗೂ ಕೆಲವು ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿರುವಂತೆ) ಶಾಸನಹಕ್ಕು ಕಾನೂನು ಮಾಡುವ ಹಕ್ಕು; (ಶಾಸನಸಭೆಯ ಹೊರಗಿರುವ ಪ್ರಜೆಗಳು) ಹೊಸ ಶಾಸನವನ್ನು ರಚಿಸುವ ಹಕ್ಕು.
initiative
ಗುಣವಾಚಕ
ಆರಂಭಿಸುವ; ಆರಂಭದ; ಉಪಕ್ರಮದ; ಪೂರ್ವಭಾವಿಯಾದ; ಪ್ರವೇಶಗೊಳಿಸುವ: it was initiative to a higher progress ಅದು ಇನ್ನೂ ಉನ್ನತ ಪ್ರಗತಿಗೆ ಪೂರ್ವಭಾವಿಯಾಗಿತ್ತು.
inject
ಸಕರ್ಮಕ ಕ್ರಿಯಾಪದ
(ನಾಳ ಮೊದಲಾದವುಗಳ ಒಳಗೆ ಸ್ರವವನ್ನು, ಔಷಧವನ್ನು ಪಿಚಕಾರಿಯಿಂದ ಮಾಡುವಂತೆ) ಒಳಹೊಗಿಸು; ಒಳನುಗ್ಗಿಸು; ಚುಚ್ಚು.
(ಕೋಶ ಮೊದಲಾದವನ್ನು) ಚುಚ್ಚಿತುಂಬು, ಹೊಗಿಸು.
(ವ್ಯಕ್ತಿಗೆ) ಇಂಜೆಕ್ಷನ್ ಕೊಡು; ಚುಚ್ಚುಮದ್ದಿನ ಮೂಲಕ ಔಷಧಿ ಮೊದಲಾದವನ್ನು ಕೊಡು.
(ವಸ್ತು, ಗುಣ, ಮೊದಲಾದವನ್ನು ಯಾವುದಾದರೊಂದರ) ಒಳಕ್ಕೆ – ಇಡು, ಸೇರಿಸು, ತುಂಬು, ಕೊಡು: may I inject a note of realism? ನಾನೊಂದು ವಾಸ್ತವಿಕತೆಯ ಧ್ವನಿಯನ್ನು ಸೇರಿಸಲೆ?