logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

initial
ಗುಣವಾಚಕ
ಮೊದಲಿನ; ಶುರುವಿನ; ಆರಂಭದ; ಪ್ರಾರಂಭದ; ಪ್ರಾಥಮಿಕ; ಆದ್ಯ; ಮೊದಲಿನಲ್ಲಿಯ; ಮೊದಲಲ್ಲಿ ಬರುವ; ಮೊದಲು ಸಂಭವಿಸುವ ಯಾ ನಡೆಯುವ: initial stage ಆರಂಭದ ಹಂತ. initial expenses ಮೊದಲ ವೆಚ್ಚಗಳು. initial difficulties ಮೊದಲ ತೊಡಕುಗಳು.

initial
ನಾಮವಾಚಕ
  • ಮೊದಲಕ್ಷರ; ಆದ್ಯಕ್ಷರ.
  • (ಮುಖ್ಯವಾಗಿ ಬಹುವಚನದಲ್ಲಿ) ವ್ಯಕ್ತಿಯ ಹೆಸರಿನ ಮತ್ತು ಉಪನಾಮದ ಮೊದಲಕ್ಷರಗಳು.

  • initial
    ಸಕರ್ಮಕ ಕ್ರಿಯಾಪದ
    ಇನಿಷಿಯಲ್‍ ಹಾಕು; ಕಿರುಸಹಿ, ಛೋಟಾ ಸಹಿ – ಹಾಕು; ಹೆಸರಿನ ಮತ್ತು ಉಪನಾಮದ ಮೊದಲಕ್ಷರಗಳಿಂದ – ಗುರುತುಮಾಡು, ರುಜುಮಾಡು.

    initial consonant
    ನಾಮವಾಚಕ
    ಆದಿವ್ಯಂಜನ; ಪದದ ಮೊದಲ ವ್ಯಂಜನಾಕ್ಷರ.

    initial letter
    ನಾಮವಾಚಕ
    ಆದ್ಯಕ್ಷರ; (ಪದದ) ಮೊದಲಿನ ಅಕ್ಷರ.

    initial teaching alphabet
    ನಾಮವಾಚಕ
    ಇಂಗ್ಲಿಷ್‍ ಭಾಷೆಯನ್ನು ಕಲಿಯುವವರಿಗೆ ಅನುಕೂಲವಾಗುವಂತೆ (ಸರ್‍ ಜೇಮ್ಸ್‍ ಪಿಟ್‍ಮನ್‍ 1901 ರಲ್ಲಿ ರೂಪಿಸಿದ) ಆದ್ಯ ಬೋಧನ ವರ್ಣಮಾಲೆ; 44 ಅಕ್ಷರಗಳ ಧ್ವನಿವರ್ಣಮಾಲೆ (phonetic alphabet).

    initialism
    ನಾಮವಾಚಕ
    ಆದ್ಯಕ್ಷರ ಗುಚ್ಛ; ಒಂದು ಹೆಸರು, ಪದಗುಚ್ಛ, ಮೊದಲಾದವುಗಳ ಆದ್ಯಕ್ಷರಗಳ ತಂಡ (ಪ್ರತಿಯೊಂದು ಅಕ್ಷರವನ್ನು ಬೇರೆಬೇರೆಯಾಗಿ ಉಚ್ಚರಿಸಲಾಗುವುದು), ಉದಾಹರಣೆಗೆ BBC, AIR.

    initially
    ಕ್ರಿಯಾವಿಶೇಷಣ
    ಮೊದಲಿನಲ್ಲಿ; ಆದಿಯಲ್ಲಿ; ಆರಂಭದಲ್ಲಿ; ಪ್ರಾರಂಭದಲ್ಲಿ.

    initiate
    ಸಕರ್ಮಕ ಕ್ರಿಯಾಪದ
  • ಆರಂಭಿಸು; ಶುರುಮಾಡು; ಮೊದಲು ಮಾಡು; ಉಪಕ್ರಮಿಸು; ಪ್ರವರ್ತನಗೊಳಿಸು; ತೊಡಗಿಸು; ಹುಟ್ಟುಹಾಕು; ಜನ್ಮಕೊಡು: initiate a plan ಯೋಜನೆಯನ್ನು ಆರಂಭಿಸು.
  • (ಸಂಘ, ಪದವಿ, ಉದ್ೋಗ, ಮೊದಲಾದವಕ್ಕೆ ವ್ಯಕ್ತಿಯನ್ನು) ವಿಧಿವತ್ತಾಗಿ ಸೇರಿಸು; ಪ್ರವೇಶಗೊಳಿಸು: the club will initiate new members tomorrow ಸಂಘವು ನಾಳೆ ಹೊಸ ಸದಸ್ಯರನ್ನು ವಿಧಿವತ್ತಾಗಿ ಸೇರಿಸಿಕೊಳ್ಳುತ್ತದೆ.
  • (ರಹಸ್ಯ, ತತ್ತ್ವಶಾಸ್ತ್ರ, ಮೊದಲಾದವಕ್ಕೆ ವ್ಯಕ್ತಿಗೆ) ದೀಕ್ಷೆಕೊಡು; ಉಪದೇಶಕೊಡು.

  • initiate
    ಗುಣವಾಚಕ
  • ಪ್ರವೇಶ ಪಡೆದ.
  • ದೀಕ್ಷೆ ಪಡೆದ.


  • logo