logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inhomogeneous
ಗುಣವಾಚಕ
ಏಕರೂಪವಲ್ಲದ; ಅಸಮರೂಪದ; ಅಸಮಜಾತೀಯ; ಸಜಾತಿಯಲ್ಲದ; ಒಂದೇ – ತೆರನಲ್ಲದ, ಬಗೆಯಲ್ಲದ.

inhospitable
ಗುಣವಾಚಕ
  • ಅನಾದರಣೆಯ; ಸತ್ಕರಿಸದ; ಅಸತ್ಕಾರಶೀಲ; ಉಪಚಾರ ಮಾಡದ; ಆದರಣೆ ತೋರದ.
  • (ಪ್ರದೇಶ, ಕಡಲ ತೀರ, ಮೊದಲಾದವುಗಳ ವಿಷಯದಲ್ಲಿ) ರಕ್ಷಣೆ ನೀಡದ; ಆಶ್ರಯ ಕೊಡದ; ನಿರಾಶ್ರಯ: inhospitable mountain area ನಿರಾಶ್ರಯವಾದ ಬೆಟ್ಟಗಾಡು; ರಕ್ಷಣೆ ನೀಡದ ಬೆಟ್ಟಪ್ರದೇಶ.

  • inhospitableness
    ನಾಮವಾಚಕ
  • ಅನಾದರಣೆ; ಸತ್ಕರಿಸದಿರುವಿಕೆ; ಅಸತ್ಕಾರಶೀಲತೆ.
  • ಅರಕ್ಷಣೆ; ನಿರಾಶ್ರಯ; ರಕ್ಷಣೆ, ಆಶ್ರಯ – ನೀಡದಿರುವಿಕೆ.

  • inhospitably
    ಕ್ರಿಯಾವಿಶೇಷಣ
  • ಅನಾದರಣೆಯಿಂದ; ಆದರ ತೋರದೆ; ಉಪಚಾರ ಮಾಡದೆ; ಸತ್ಕರಿಸದೆ.
  • ರಕ್ಷಣೆ ನೀಡದಂತೆ; ನಿರಾಶ್ರಯವಾಗಿ; ಆಶ್ರಯ ಕೊಡದ ಹಾಗೆ.

  • inhospitality
    ನಾಮವಾಚಕ
    ಅನಾದರಣೆ; ಅಸತ್ಕಾರ; ಸತ್ಕರಿಸದಿರುವಿಕೆ; ಉಪಚಾರ ತೋರಿಸದಿರುವಿಕೆ.

    inhuman
    ಗುಣವಾಚಕ
  • (ವ್ಯಕ್ತಿ, ನಡತೆ, ಮೊದಲಾದವುಗಳ ವಿಷಯದಲ್ಲಿ) ಅಮಾನವೀಯ; ಅಮಾನುಷ; ಪಾಶವೀ; ನಿಷ್ಕರುಣ; ಕ್ರೂರ; ನಿರ್ದಯ; ರಾಕ್ಷಸೀಯ; ನೃಶಂಸ; ಪಶುಪ್ರಾಯವಾದ.
  • ಮಾನವೇತರ; ಮನುಷ್ಯಭಿನ್ನ; ಮಾನವ ಭಿನ್ನ; ಸಾಧಾರಣ ಮಾನವಮಾದರಿಗೆ ಸೇರದ: nature is rather inhuman and artificial in Paris ಪ್ಯಾರಿಸ್ಸಿನಲ್ಲಿ ನಿಸರ್ಗ ಸ್ವಲ್ಪಮಟ್ಟಿಗೆ ಮಾನವಭಿನ್ನವೂ ಕೃತಕವೂ ಆಗಿದೆ.

  • inhumane
    ಗುಣವಾಚಕ
    ದಯಾಹೀನ; ಕರುಣಾರಹಿತ; ಉಪಕಾರಬುದ್ಧಿಯಿಲ್ಲದ.

    inhumanely
    ಕ್ರಿಯಾವಿಶೇಷಣ
    ದಯಾಹೀನವಾಗಿ; ಉಪಕಾರ ಬುದ್ಧಿಯಿಲ್ಲದೆ.

    inhumanity
    ನಾಮವಾಚಕ
    ಅಮಾನುಷತೆ; ಅಮಾನವೀಯತೆ; ಪಾಶವೀಯತೆ; ಕ್ರೌರ್ಯ; ನಿರ್ದಯತೆ; ರಾಕ್ಷಸೀಯತೆ; ನೃಶಂಸತೆ.

    inhumanly
    ಕ್ರಿಯಾವಿಶೇಷಣ
    ಅಮಾನುಷವಾಗಿ; ಪಾಶವೀಯವಾಗಿ; ಕ್ರೂರವಾಗಿ; ನಿರ್ದಯವಾಗಿ; ರಾಕ್ಷಸೀಯವಾಗಿ; ಪಶುಪ್ರಾಯವಾಗಿ.


    logo