(ಗುಣ ಮೊದಲಾದವುಗಳ ವಿಷಯದಲ್ಲಿ) ಒಳಗೊಂಡಿರು; ಒಳಗಿರು; ಅಂತರ್ಗತವಾಗಿರು; ನೆಲಸಿರು; ಸೇರಿರು: the advantages that inhere in a democratic system ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಳಗೊಂಡಿರುವ ಅನುಕೂಲಗಳು.
(ಹಕ್ಕು ಮೊದಲಾದವುಗಳ ವಿಷಯದಲ್ಲಿ) (ವ್ಯಕ್ತಿ ಮೊದಲಾದವರಲ್ಲಿ) ಇರು; ನೆಲಸಿರು; ನಿವಿಷ್ಟವಾಗಿರು; ನಿಹಿತವಾಗು: the power inhering in the church ಚರ್ಚಿನಲ್ಲಿ ನೆಲಸಿರುವ ಅಧಿಕಾರ.
ಸಮವಾಯ ಸಂಬಂಧ; ಗುಣ ಮತ್ತು ದ್ರವ್ಯಗಳ ಯಾ ಗುಣ ಮತ್ತು ವ್ಯಕ್ತಿಗಳ ನಡುವಣ ಸಂಬಂಧ.
inherent
ಗುಣವಾಚಕ
ಮೂಲಸ್ವರೂಪದ; ಅಂತರ್ಗತ; ಅಂತರ್ನಿಷ್ಠ; ಯಾವುದೇ ವಸ್ತುವಿನಲ್ಲಿ ಸಹಜ ಶಾಶ್ವತ ಗುಣಲಕ್ಷಣವಾಗಿರುವ; (ಮುಖ್ಯವಾಗಿ ಅಗತ್ಯವಾದ ಯಾ ವಿಶಿಷ್ಟವಾದ) ಮೂಲಾಂಶವನ್ನು ಒಳಗೊಂಡ: inherent beauty ಅಂತರ್ನಿಹಿತ ಸೌಂದರ್ಯ.
(ವ್ಯಕ್ತಿ, ಹುದ್ದೆ, ಮೊದಲಾದವಲ್ಲಿ ಹಕ್ಕು ಬಾಧ್ಯತೆಯಾಗಿ) ನೆಲಸಿರುವ; ಅಧಿಷ್ಠಿತವಾಗಿರುವ; ಸೇರಿರುವ: the legislative authority was inherent in the general assembly ಶಾಸನ ರಚನೆಯ ಅಧಿಕಾರ ಸಾಮಾನ್ಯ ಸಭೆಯಲ್ಲಿ ನೆಲಸಿತ್ತು.
(ವ್ಯಕ್ತಿ, ಹುದ್ದೆ, ಮೊದಲಾದವಲ್ಲಿ ಹಕ್ಕು ಬಾಧ್ಯತೆಗಳಾಗಿ) ನೆಲಸಿರುವಂತೆ; ಸೇರಿರುವಂತೆ.
ಸಮವಾಯವಾಗಿ; ಸಮವಾಯ ಸಂಬಂಧದಿಂದ.
inherit
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
ಉತ್ತರಾಧಿಕಾರಿಯಾಗು.
(ಆಸ್ತಿ, ಅಂತಸ್ತು, ಬಿರುದು, ಮೊದಲಾದವುಗಳನ್ನು) ಪರಂಪರೆಯಾಗಿ, ಪಾರಂಪರ್ಯವಾಗಿ, ವಂಶಾನುಕ್ರಮವಾಗಿ, ಉತ್ತರಾಧಿಕಾರದಿಂದ – ಪಡೆ; ದಾಯಕವಾಗಿ ಪಡೆ: the eldest son will inherit the title ಹಿರಿಯ ಮಗ ಬಿರುದನ್ನು ವಂಶಾನುಕ್ರಮವಾಗಿ ಪಡೆಯುತ್ತಾನೆ.
(ಗುಣ, ಶೀಲಗಳನ್ನು) ಪೂರ್ವಜರಿಂದ, ಆನುವಂಶಿಕವಾಗಿ – ಪಡೆ: she inherited her mother’s good looks ಅವಳು ತನ್ನ ಚೆಲುವಾದ ರೂಪವನ್ನು ತನ್ನ ತಾಯಿಯಿಂದ ಪಡೆದಳು.
(ಯಾವುದನ್ನೋ) ಪಾರಂಪರ್ಯವಾಗಿ, ಪೂರ್ವಾಧಿಕಾರಿಯಿಂದ ಉತ್ತರಾಧಿಕಾರವಾಗಿ – ಪಡೆ: the problems which the new administration inherited from its predecessors ಹೊಸ ಆಡಳಿತವು ತನ್ನ ಹಿಂದಿನವರಿಂದ ಉತ್ತರಾಧಿಕಾರವಾಗಿ ಪಡೆದ ಸಮಸ್ಯೆಗಳು.