logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

zucchini
ನಾಮವಾಚಕ
(ಬಹುವಚನ ಅದೇ ಯಾ zucchinis). (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ & ಆಸ್ಟ್ರೇಲಿಯ) = courgette.

zugzwang
ನಾಮವಾಚಕ
(ಚದುರಂಗದ ಆಟ) ಕಡ್ಡಾಯ, ಅನಿವಾರ್ಯ – ಚಲನೆ; ತನ್ನ ಸರದಿ ಬಂದಾಗ, ತನಗೆ ಅದರಿಂದ ಅನನುಕೂಲವಾದರೂ, ಕಾಯಿಯನ್ನು ನಡೆಸಲೇಬೇಕಾದ ಅನಿವಾರ್ಯ ಪರಿಸ್ಥಿತಿ.

Zulu
ಗುಣವಾಚಕ
ಸೂಲೂಗಳ; ದಕ್ಷಿಣ ಆಹ್ರಿಕದ ಕರಿಯರ ಬಂಟು ಜನಾಂಗದ ಯಾ ಆ ಜನಾಂಗದ ಭಾಷೆಯ.

Zulu
ನಾಮವಾಚಕ
ಸೂಲೂ:
  • ಮೂಲತಃ ಸೂಲೂಲ್ಯಾಂಡ್‍ ಮತ್ತು ನೇಟಾಲ್‍ನಲ್ಲಿದ್ದ ದಕ್ಷಿಣ ಆಹ್ರಿಕದ ಕರಿಯ ಜನಾಂಗದ ವ್ಯಕ್ತಿ.
  • ಅವರ ಭಾಷೆ.

  • zwieback
    ನಾಮವಾಚಕ
    ಒಂದು ರೀತಿಯ ಬಿಸ್ಕತ್ತು; ತುಂಡುಗಳಾಗಿ ಹುರಿದ ಸಿಹಿ ರೊಟ್ಟಿ ಯಾ ‘ಕೇಕ್‍’.

    Zwinglian
    ಗುಣವಾಚಕ
    (ಸ್ವಿಟ್ಸರ್ಲಂಡ್‍ ಪ್ರಾಟೆಸ್ಟೆಂಟ್‍ ಧರ್ಮಸುಧಾರಕ) ಸಿಂಗ್ಲಿಯ (ಮರಣ 1531) ಯಾ ಆತನ ಸುಧಾರಣೆಗಳಿಗೆ ಸಂಬಂಧಿಸಿದ.

    Zwinglian
    ನಾಮವಾಚಕ
    ಸಿಂಗ್ಲಿಯ ಅನುಯಾಯಿ.

    zwitterion
    ನಾಮವಾಚಕ
    (ರಸಾಯನವಿಜ್ಞಾನ) ಸ್ವಿಟರ್‍ಅಯಾನು; ಪ್ರತ್ಯೇಕವಾದ ಧನಾವಿಷ್ಟ ಮತ್ತು ಋಣಾವಿಷ್ಟ ಪರಮಾಣುಗುಚ್ಫಗಳಿರುವ ಅಣು ಯಾ ಅಯಾನು.

    zygal
    ಗುಣವಾಚಕ
    (ಮಿದುಳಿನ ಬಿರಿತಗಳ ವಿಷಯದಲ್ಲಿ) H ಆಕಾರದ.

    zygo-
    ಸಮಾಸ ಪೂರ್ವಪದ
  • ಜೋಡಿ; ಯುಗ್ಮ; ಯುಗಳ.
  • ಸಂಯುಕ್ತ ಯಾ ಸಂಯೋಜಕ; ಕೂಡಿರುವ ಯಾ ಕೂಡಿಸುವ.


  • logo