logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tailing
ನಾಮವಾಚಕ
  • (ಸಾಮಾನ್ಯವಾಗಿ ಬಹುವಚನದಲ್ಲಿ) ದಪ್ಪ ಮರಳು; ಜರಡಿಯಲ್ಲಿ ಬೀಳದೆ ಉಳಿದ ದಪ್ಪ ಚೂರುಗಳು.
  • (ಧಾನ್ಯ, ಅದುರು, ಮೊದಲಾದವುಗಳ) ಚೂರುಪಾರು; ಉಳಿಕೆಪಳಿಕೆ; ಕಸಕಡ್ಡಿ; ಕಳಪೆಭಾಗ.
  • ಕೂರುತುದಿ; ಗೋಡೆಯಲ್ಲಿ ಒಳಸೇರಿಸಿದ ಇಟ್ಟಿಗೆಯ ಯಾ ಕಲ್ಲಿನ ಯಾ ತೊಲೆಯ ತುದಿ.

  • tailless
    ಗುಣವಾಚಕ
    ಬಾಲವಿಲ್ಲದ; ಬಾಲ ಕತ್ತರಿಸಿದ.

    tailor
    ನಾಮವಾಚಕ
    ದರ್ಜಿ; ಚಿಪ್ಪಿಗ; ವ್ಯಕ್ತಿಗಳ ಉಡುಪನ್ನು ಹೊಲಿಯುವವನು.

    tailor
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ದರ್ಜಿಯಾಗಿ ಕೆಲಸ ಮಾಡು, ದುಡಿ.
  • ಬಟ್ಟೆ ಹೊಲಿ; ಹೊಲಿಗೆ, ದರ್ಜಿ–ಕೆಲಸ ಮಾಡು; ಉಡುಪು ತಯಾರಿಸು.
    1. ವಿಶೇಷ ಉದ್ದೇಶಕ್ಕಾಗಿ–ತಯಾರಿಸು, ರಚಿಸು.
    2. ವಿಶೇಷ ಉದ್ದೇಶಕ್ಕೆ ತಕ್ಕಂತೆ–ಹೊಂದಿಸು, ಹೊಂದುವಂತೆ ಮಾಡು.

  • tailor's chair
    ನಾಮವಾಚಕ
    ದರ್ಜಿ ಕುರ್ಚಿ; (ದರ್ಜಿಯ ಹಾಗೆ ಪದ್ಮಾಸನ ಹಾಕಿ ಕೂರಲು ಅನುಕೂಲವಾದ) ಕಾಲಿಲ್ಲದ ಕುರ್ಚಿ.

    tailor's twist
    ನಾಮವಾಚಕ
    ದರ್ಜಿಗಳು ಬಳಸುವ ಗಟ್ಟಿ ರೇಷ್ಮೆ ದಾರ.

    tailor-bird
    ನಾಮವಾಚಕ
    ಗೀಜಗನ ಹಕ್ಕಿ; ದರ್ಜಿಹಕ್ಕಿ; ಚಿಪ್ಪಿಗ ಹಕ್ಕಿ; ಆರ್ತೊಮಸ್‍ ಕುಲದ, ಎಲೆಗಳನ್ನು ಒಟ್ಟಿಗೆ ಸೇರಿಸಿ ಹೊಲಿದು ಗೂಡುಕಟ್ಟುವ, ಏಷ್ಯಾ ಮೊದಲಾದ ದೇಶಗಳ ಚಿಕ್ಕ ಪಕ್ಷಿ.

    tailor-made
    ಗುಣವಾಚಕ
  • (ಸಾಮಾನ್ಯವಾಗಿ ಹೆಂಗಸರ ಉಡುಪಿನ ವಿಷಯದಲ್ಲಿ) ದರ್ಜಿ ಹೊಲಿದ; ಕೊಟ್ಟ ಅಳತೆಗೆ ಸರಿಯಾಗಿ, ಸರಿಯಾದ ಅಳತೆಗೆ ಹೊಲಿದ.
  • ಚೆನ್ನಾಗಿ ಹೊಂದಿಕೊಳ್ಳುವ; ಹೇಳಿ ಮಾಡಿಸಿದಂಥ: a job tailor-made for me ನನಗೆ ಹೇಳಿ ಮಾಡಿಸಿದಂಥ ಕೆಲಸ.

  • tailored
    ಗುಣವಾಚಕ
  • = tailor-made.
  • (ಉಡುಪಿನ ವಿಷಯದಲ್ಲಿ) ಚೆನ್ನಾಗಿ ಯಾ ಗುತ್ತನಾಗಿ ಹೊಲಿದ ಉಡುಪುಳ್ಳ: he was immaculately tailored ಅವನು ಚೆನ್ನಾಗಿ ಹೊಲಿದ ಉಡುಪು ತೊಟ್ಟಿದ್ದ, ಅವನು ಧರಿಸಿದ್ದ ಉಡುಪು ಚೆನ್ನಾಗಿ ಹೊಲಿದಿದ್ದಾಗಿತ್ತು.

  • tailoress
    ನಾಮವಾಚಕ
    ದರ್ಜಿಹೆಂಗಸು; ಚಿಪ್ಪಿಗಿತ್ತಿ.


    logo