logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

LACW
ಸಂಕ್ಷಿಪ್ತ
(ಬ್ರಿಟಿಷ್‍ ಪ್ರಯೋಗ) Leading Aircraft-woman.

lacy
ಗುಣವಾಚಕ
ಲೇಸ್‍ನಂಥ; ಕಸೂತಿ ಬಟ್ಟೆಯನ್ನು ಹೋಲುವ; ಲೇಸ್‍ ರಚನೆಯನ್ನು ಹೋಲುವ.

lad
ನಾಮವಾಚಕ
  • ಹುಡುಗ; ತರುಣ; ಹೈದ; ಮಾಣಿ; ಹರೆಯದವ.
  • ತರುಣ ಮಗ.
  • (ಮುಖ್ಯವಾಗಿ ಬಹುವಚನದಲ್ಲಿ) (ಆಡುಮಾತು)
    1. ವ್ಯಕ್ತಿ; ಆಸಾಮಿ; ಇಸಮು.
    2. (ಮುಖ್ಯವಾಗಿ ಕುಡಿತ, ಕೆಲಸ, ಮೊದಲಾದವುಗಳಲ್ಲಿನ) ಜತೆಗಾರ; ಸಂಗಾತಿ; ಗೆಳೆಯ: he’s one of the lads ಅವನು ಸಂಗಾತಿಗಳಲ್ಲಿ ಒಬ್ಬ.
  • (ಆಡುಮಾತು)
    1. ಕೆಚ್ಚಿನ, ಜೋರಿನ – ವ್ಯಕ್ತಿ.
    2. ಫಟಿಂಗ; ಠಕ್ಕ; ಪೋಕರಿ: he’s quite a lad ಅವನು ಶುದ್ಧ ಫಟಿಂಗ.
  • (ಬ್ರಿಟಿಷ್‍ ಪ್ರಯೋಗ) (ಯಾವುದೇ ವಯಸ್ಸಿನ) ಕಾಸ್ತಾರ; ಕುದುರೆಯಾಳು; ಕುದುರೆ ಚಾಕರ; ಕುದುರೆ ಲಾಯದವ.

  • ladanum
    ನಾಮವಾಚಕ
    (labdanum ಎಂದೂ ಪ್ರಯೋಗ) ಲ್ಯಾಡನಮ್‍; ‘ಸಿಸ್ಟಸ್‍’ ಕುಲದ ಸಸ್ಯಗಳಲ್ಲಿ ದೊರಕುವ, ಪರಿಮಳ ದ್ರವ್ಯಗಳ ತಯಾರಿಕೆಯಲ್ಲಿ ಬಳಸುವ ಒಂದು ಬಗೆಯ ಅಂಟು ರಾಳ.

    ladder
    ನಾಮವಾಚಕ ನುಡಿಗಟ್ಟು
  • (ಮರ ಯಾ ಲೋಹದ) ಏಣಿ; ನಿಚ್ಚಣಿಗೆ.
  • (ಬ್ರಿಟಿಷ್‍ ಪ್ರಯೋಗ) ಏಣಿ ತೆರಪು; ಕಾಲುಚೀಲ ಮೊದಲಾದವುಗಳ ಹೆಣಿಗೆ ಹಾಕುವಲ್ಲಿ ಅನೇಕ ಸಾಲುಗಳಲ್ಲಿ ಉದ್ದಕ್ಕೂ ಹೆಣಿಗೆ ತಪ್ಪಿ ಹೋಗುವುದರಿಂದ ಉಂಟಾಗುವ ಏಣಿಯಂತಹ ಖಾಲಿ ಜಾಗ.
  • ಏಣಿ; ಸೋಪಾನ; ಕ್ರಮಬದ್ಧ ಶ್ರೇಣಿಯ ವ್ಯವಸ್ಥೆ, ರಚನೆ.
  • (ರೂಪಕವಾಗಿ) ಸಾಧನ; ಲೋಕದಲ್ಲಿ ಮೇಲೇರಲು, ಉದ್ದೇಶ ಸಾಧಿಸಲು ಬಳಸುವ ಸಾಧನ, ಉಪಾಯ.

  • ladder
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    (ಬ್ರಿಟಿಷ್‍ ಪ್ರಯೋಗ) (ಕಾಲುಚೀಲ ಮೊದಲಾದವುಗಳಲ್ಲಿ, ಉದ್ದಕ್ಕೂ ಎಳೆ ತಪ್ಪಿಸಿ) ಏಣಿ ತೆರಪು ಮಾಡು. (ಬ್ರಿಟಿಷ್‍ ಪ್ರಯೋಗ) (ಕಾಲುಚೀಲ ಮೊದಲಾದವುಗಳ ಹೆಣಿಗೆಯಲ್ಲಿ ಉದ್ದಕ್ಕೂ ಎಳೆ ತಪ್ಪಿ ಹೋಗುವುದರಿಂದ) ಏಣಿ ತೆರಪು ಕಾಣಿಸು, ಉಂಟಾಗು.

    ladder tournament
    ನಾಮವಾಚಕ
    ಏಣಿ (ಕ್ರಿಡಾ) ಸ್ಪರ್ಧೆ; ಆಟಗಾರರ ಪಟ್ಟಿಯಲ್ಲಿನ ಪ್ರತಿಯೊಬ್ಬ ಸ್ಪರ್ಧಿಯೂ ತನ್ನ ಮೇಲಿರುವ ಸ್ಪರ್ಧಿಯನ್ನು ಸೋಲಿಸಿ ಮೇಲುಮೇಲಕ್ಕೆ ಹೋಗುವ ಕ್ರೀಡಾಸ್ಪರ್ಧೆ.

    ladder-back
    ನಾಮವಾಚಕ
    ಏಣಿಬೆನ್ನು ಕುರ್ಚಿ; ಏಣಿಯನ್ನು ಹೋಲುವ ಬೆನ್ನುಳ್ಳ, ನೆಟ್ಟಗಿರುವ ಕುರ್ಚಿ.

    ladder-dredge
    ನಾಮವಾಚಕ
    ಏಣಿಯೆತ್ತುಗ; ಸರಪಣಿಯ ಸುತ್ತ ಬಕೆಟ್ಟುಗಳನ್ನು ಅಳವಡಿಸಿದ, ನೀರೊಳಗಿಂದ ಪದಾರ್ಥಗಳನ್ನು ಎತ್ತುವ ಏಣಿಯಂಥ ಸಾಧನ.

    ladder-proof
    ಗುಣವಾಚಕ
    (ಕಾಲುಚೀಲ ಮೊದಲಾದವುಗಳಲ್ಲಿ) ಏಣಿತೆರಪು ಆಗದ, ಬೀಳದ.


    logo