logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Ecce Homo
ನಾಮವಾಚಕ
  • (ಇಸ್ರೇಲಿನ ರೋಮನ್‍ ಗವರ್ನರ್‍ ಆದ ಪೈಲೆಟ್‍ ಎಂಬುವನು ಮುಳ್ಳು ಕಿರೀಟವನ್ನು ಹಾಕಿದ ಏಸುವನ್ನು ಯೆಹೂದ್ಯರ ಮುಂದೆ ನಿಲ್ಲಿಸಿ ಹೇಳಿದ ಮಾತು) ಇಗೋ ನೋಡಿ, ನಿಮ್ಮ ಮನುಷ್ಯ.
  • ಮುಳ್ಳು ಕಿರೀಟ ಧರಿಸಿದ ಏಸುವಿನ ಚಿತ್ರ.

  • eccentric
    ಗುಣವಾಚಕ
  • (ತ್ತಗಳ ಮತ್ತು ಸಿಲಿಂಡರುಗಳ ವಿಷಯದಲ್ಲಿ) ಭಿನ್ನಕೇಂದ್ರಕ; ಭಿನ್ನಕೇಂದ್ರೀಯ; ಒಂದೇ ಕೇಂದ್ರವಿಲ್ಲದಿರುವ.
  • ವಿಕೇಂದ್ರಕ; ವಿಕೇಂದ್ರಿಯ; ಅಕ್ಷ ಮೊದಲಾದವು ಕೇಂದ್ರವನ್ನು ಬಿಟ್ಟು ಬೇರೆ ಕಡೆ ಇರುವ.
  • (ಕಕ್ಷೆಯ ವಿಷಯದಲ್ಲಿ) ವಿಕೇಂದ್ರಕ; ವಿಕೇಂದ್ರೀಯ; ತ್ತಾಕಾರವಲ್ಲದ.
  • (ಆಕಾಶಕಾಯಗಳ ವಿಷಯದಲ್ಲಿ) ವಿಕೇಂದ್ರಕ; ವಿಕೇಂದ್ರೀಯ; ತ್ತಾಕಾರವಲ್ಲದ ಕಕ್ಷೆಯಲ್ಲಿ ಸುತ್ತುತ್ತಿರುವ.
  • ಕ್ರಮವಲ್ಲದ; ಅನಿಯತ.
  • (ವ್ಯಕ್ತಿಯ ವಿಷಯದಲ್ಲಿ) ವಿಲಕ್ಷಣ; ವಿಚಿತ್ರ; ವಕ್ರ; ವಿಜಾತೀಯ.
  • (ನಡವಳಿಕೆ ಮೊದಲಾದವುಗಳ ವಿಷಯದಲ್ಲಿ) ವಿಲಕ್ಷಣ; ವಿಚಿತ್ರ; ಸಾಮಾನ್ಯ ರೀತಿಗೆ ಭಿನ್ನವಾಗಿರುವ.

  • eccentric
    ನಾಮವಾಚಕ
  • (ಯಂತ್ರಶಾಸ್ತ್ರ) ವಿಕೇಂದ್ರಕ; ಮುಖ್ಯವಾಗಿ ಹಬೆಯಂತ್ರದ ಜರುಗು ಕವಾಟದ ತ್ತಾಕಾರದ ಚಲನೆಯನ್ನು ಹಿಮ್ಮುಖ ಮುಮ್ಮುಖ ಚಲನೆಯಾಗಿ ಪರಿವರ್ತಿಸುವ ವಿಕೇಂದ್ರಕ ಸಾಧನ.
  • ವಕ್ರ; ತಿಕ್ಕಲ; ವಿಲಕ್ಷಣ ವ್ಯಕ್ತಿ, ಪುರುಷ; ವಿಚಿತ್ರ ಮನುಷ್ಯ.

  • eccentrically
    ಕ್ರಿಯಾವಿಶೇಷಣ
  • ಭಿನ್ನಕೇಂದ್ರೀಯವಾಗಿ; ಒಂದೇ ಕೇಂದ್ರವಿಲ್ಲದಿರುವಂತೆ.
  • ವಿಕೇಂದ್ರೀಯವಾಗಿ; ಅಕ್ಷವು ಕೇಂದ್ರ ಬಿಟ್ಟು ಬೇರೆಡೆ ಇರುವಂತೆ.
  • (ಕಕ್ಷೆ ಮೊದಲಾದವುಗಳ ವಿಷಯದಲ್ಲಿ) ವಿಕೇಂದ್ರೀಯವಾಗಿ; ತ್ತಾಕಾರವಲ್ಲದಂತೆ.
  • ಕ್ರಮವಿಲ್ಲದೆ; ಅನಿಯತವಾಗಿ.
  • ವಿಲಕ್ಷಣವಾಗಿ; ವಿಚಿತ್ರವಾಗಿ; ವಕ್ರವಾಗಿ.

  • eccentricity
    ನಾಮವಾಚಕ
  • ಭಿನ್ನಕೇಂದ್ರೀಯತೆ; ಒಂದೇ ಕೇಂದ್ರವಿಲ್ಲದಿರುವಿಕೆ.
  • ವಿಕೇಂದ್ರೀಯತೆ; ಅಕ್ಷವು ಕೇಂದ್ರ ಬಿಟ್ಟು ಬೇರೆ ಕಡೆ ಇರುವಿಕೆ.
  • (ಕಕ್ಷೆಯ ವಿಷಯದಲ್ಲಿ) ವಿಕೇಂದ್ರೀಯತೆ; ತ್ತಾಕಾರವಲ್ಲದಿರುವಿಕೆ.
  • (ಆಕಾಶಕಾಯಗಳ ವಿಷಯದಲ್ಲಿ) ವಿಕೇಂದ್ರೀಯತೆ; ತ್ತಾಕಾರವಲ್ಲದ ಕಕ್ಷೆಯಲ್ಲಿ ಸುತ್ತುತ್ತಿರುವಿಕೆ.
  • ಕ್ರಮರಾಹಿತ್ಯ; ಅನಿಯತತೆ.
  • (ನಡತೆಯ ವಿಷಯದಲ್ಲಿ) ವೈಲಕ್ಷಣ್ಯ; ವಿಚಿತ್ರತೆ; ವಕ್ರತೆ; ತಿಕ್ಕಲು.

  • Eccles
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ)= Eccles cake.

    Eccles cake
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) ಎಕೆಲ್ಸ್‍ ಕೇಕು; ಒಣ ದ್ರಾಕ್ಷಿ ಮೊದಲಾದವನ್ನು ತುಂಬಿದ, ದುಂಡು ಕೇಕು.

    Eccles.
    ಸಂಕ್ಷಿಪ್ತ
    Ecclesiastes (ಬೈಬಲಿನ ಹಳೆಯ ಒಡಂಬಡಿಕೆಯ ಒಂದು ಗ್ರಂಥ).

    ecclesia
    ನಾಮವಾಚಕ
    (ಗ್ರೀಕ್‍ ಚರಿತ್ರೆ) ಇಕ್ಲೀಸಿಯ; (ಮುಖ್ಯವಾಗಿ ಅತೆನ್ಸ್‍ ನಾಗರಿಕರ) ಸಾಮಾನ್ಯ ಸಭೆ.

    ecclesial
    ಗುಣವಾಚಕ
    ಚರ್ಚಿನ; ಚರ್ಚಿಗೆ ಸಂಬಂಧಿಸಿದ.


    logo