logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

dancetty
ಗುಣವಾಚಕ
(ವಂಶಲಾಂಛನ ವಿದ್ಯೆ, ಗೆರೆಯ ವಿಷಯದಲ್ಲಿ) ಅಗಲವಾಗಿ, ಕಚ್ಚುಕಚ್ಚಾಗಿರುವ.

dancing-girl
ನಾಮವಾಚಕ
ನಾಟ್ಯಗಾರ್ತಿ; ನರ್ತಕಿ; ನೃತ್ಯವೃತ್ತಿಯವಳು.

dandelion
ನಾಮವಾಚಕ
(ಸಸ್ಯವಿಜ್ಞಾನ) ಕಾಡುಸೇವಂತಿಗೆ; ಹಳದಿ ಹೂಗಳನ್ನೂ ಹಲ್ಲುಹಲ್ಲಾಗಿರುವ ಅಗಲವಾದ ಎಲೆಗಳನ್ನೂ ಬಿಡುವ, ಟರ್ಯಾಕ್ಸಕಮ್‍ ಅಹಿಷಿನೇಲ್‍ ಕುಲದ ಸಂಕೀರ್ಣ ಪುಷ್ಪಿ(ಸಸ್ಯ).

dandelion coffee
ನಾಮವಾಚಕ
  • ಸೇವಂತಿಗೆಯ ಕಾಹಿ ಯಾ ಕಷಾಯ; ಒಣಗಿದ ಡ್ಯಾಂಡಿಲಿಯನ್‍ ಬೇರುಗಳಿಂದ ಮಾಡಿದ ಕಷಾಯ.
  • ಒಣಗಿದ ಡ್ಯಾಂಡಿಲಿಯನ್‍ ಬೇರುಗಳು.

  • dander
    ನಾಮವಾಚಕ ಪದಗುಚ್ಛ
    (ಆಡುಮಾತು) (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಸಿಟ್ಟು; ರೇಗು; ಸಿಡಿಮಿಡಿ; ಕೋಪ. get one’s dander up ರೇಗು; ರೇಗಿಸು.

    dander
    ಅಕರ್ಮಕ ಕ್ರಿಯಾಪದ
    (ಆಡುಮಾತು) (ಬ್ರಿಟಿಷ್‍ ಪ್ರಯೋಗ) ಅಡ್ಡಾಡು; ಅಲೆದಾಡು (ಮನಸ್ಸಿನ ವಿಷಯದಲ್ಲಿಸಹ).

    dandiacal
    ಗುಣವಾಚಕ
    ಸೊಗಸುಗಾರಿಕೆಯ; ಸೊಗಸುಗಾರತನದ; ಷೋಕಿಲಾಲಿಕೆಯ.

    Dandie Dinmont
    ನಾಮವಾಚಕ
    ಡ್ಯಾಂಡೀ ಡಿನ್‍ಮಂಟ್‍(ನಾಯಿ):
  • ಮೋಟುಗಾಲುಗಳು. ನೇತಾಡುವ ಕಿವಿಗಳು, ನೀಳದೇಹ, ಒರಟು ಚರ್ಮ ಇರುವ, ಮೊದಲಿಗೆ ಸ್ಕಾಟ್ಲಂಡಿನ ಗಡಿಪ್ರದೇಶಕ್ಕೆ ಸೇರಿದ ಟೆರಿಯರ್‍ ನಾಯಿತಳಿ.
  • ಈ ತಳಿಯ ನಾಯಿ.

  • dandification
    ನಾಮವಾಚಕ
    ಸೊಗಸುಗಾರತನ; ಸೊಗಸುಗಾರಿಕೆ; ಷೋಕಿಗಾರಿಕೆ; ಷೋಕಿಲಾಲತನ.

    dandify
    ಸಕರ್ಮಕ ಕ್ರಿಯಾಪದ
    ಷೋಕಿ ಮಾಡು; ಸೊಗಸುಗಾರಿಕೆ ಮಾಡು.


    logo