logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Caerns.
ಸಂಕ್ಷಿಪ್ತ
Caernarvonshire (ವೇಲ್ಸ್‍ನಲ್ಲಿ ಹಿಂದೆ ಇದ್ದ ಒಂದು ಜಿಲ್ಲೆ).

Caerphilly
ನಾಮವಾಚಕ
(ಒಂದು ಬಗೆಯ) ಬಿಳಿಯ ಮೆತು—ಚೀಸು, ಗಿಣ್ಣು.

Caesar
ನಾಮವಾಚಕ ನುಡಿಗಟ್ಟು
Caesar’s wife ನಿರ್ದುಷ್ಟ ವ್ಯಕ್ತಿ; ಅಪವಾದಕ್ಕೆ ಯಾ ಸಂಶಯಕ್ಕೆ ಎಡೆಗೊಡದಂತೆ ವರ್ತಿಸಬೇಕಾದ ವ್ಯಕ್ತಿ.
  • ಸೀಸರ್‍:
    1. (ಅಗಸ್ಟಸ್‍ನಿಂದ ಹೆಡ್ರಿಯನ್‍ವರಗಿನ, ಪ್ರಾಚೀನ ರೋಮಿನ) ಚಕ್ರವರ್ತಿಗಳ ಹೆಸರು.
    2. (ಸಡಿಲವಾಗಿ) ಭಾವೀ ರೋಮನ್‍ ಚಕ್ರವರ್ತಿ; ರೋಮನ್‍ ಚಕ್ರವರ್ತಿಯ ಉತ್ತರಾಧಿಕಾರಿ ಎಂದು ಪರಿಗಣಿತನಾದವನು.
    3. (ಶಿಷ್ಟ ಪ್ರಯೋಗ) (ಯಾವನೇ) ರೋಮನ್‍ಚಕ್ರವರ್ತಿ.
  • ನಿರಂಕುಶಪ್ರಭು; ಸರ್ವಾಧಿಕಾರಿ; ಎದುರಿಲ್ಲದ ದೊರೆ.
  • (ಧಾರ್ಮಿಕ ಶಕ್ತಿಗೆ ವಿರುದ್ಧವಾದ) ಲೌಕಿಕ ಶಕ್ತಿ; ಲೌಕಿಕ ಪ್ರಭುತ್ವ.
  • (ವೈದ್ಯಶಾಸ್ತ್ರ) (ಅಶಿಷ್ಟ) = Caesarean operation.
  • (ವೈದ್ಯಶಾಸ್ತ್ರ) (ಅಶಿಷ್ಟ) ಸಿಸೇರಿಯನ್‍ ಶಸ್ತ್ರಕ್ರಿಯೆಯ ಕೇಸು.

  • Caesarean
    ಗುಣವಾಚಕ
  • ಜೂಲಿಯಸ್‍ ಸೀಸರನ ಯಾ ರೋಮನ್‍ ಚಕ್ರವರ್ತಿಯ ಯಾ ಅವರಿಗೆ ಸಂಬಂಧಿಸಿದ.
  • ಸಾಮ್ರಾಜ್ಯದ; ಸಾರ್ವಭೌಮೀಯ; ಸಾರ್ವಭೌಮತ್ವದ.
  • ಸೀಸೇರಿಯನ್‍ ಶಸ್ತ್ರಕ್ರಿಯೆಗೆ ಸಂಬಂಧಿಸಿದ.

  • Caesarean
    ನಾಮವಾಚಕ
  • ಸೀಸರನ ಅನುಯಾಯಿ.
  • ನಿರಂಕುಶ—ವ್ಯವಸ್ಥೆಯ ಯಾ ಪ್ರಭುತ್ವದ ಹಿಂಬಾಲಕ, ಬೆಂಬಲಿಗ.
  • =Caesarean operation.

  • Caesarean birth
    ನಾಮವಾಚಕ
    ಸೀಳುಹೊಟ್ಟೆಹೆರಿಗೆ; ಸಿಸೇರಿಯನ್‍ ಹೆರಿಗೆ; ಹೊಟ್ಟೆ ಹಾಗೂ ಗರ್ಭಕೋಶಗಳನ್ನು ಸೀಳಿ ಕೂಸನ್ನು ಹೊರತೆಗೆಯುವಿಕೆ.

    Caesarean operation
    ನಾಮವಾಚಕ
    (ಹೊಟ್ಟೆ ಮತ್ತು ಗರ್ಭಕೋಶವನ್ನು ಸೀಳಿ ಕೂಸನ್ನು ಹೊರತೆಗೆವ) ಸಿಸೆರಿಯನ್‍ ಶಸ್ತ್ರಕ್ರಿಯೆ.

    Caesarean section
    ನಾಮವಾಚಕ
    =Caesarean operation.

    Caesarian
    ಗುಣವಾಚಕ
    =1Caesarean.

    Caesarian
    ಗುಣವಾಚಕ
    =2Caesarean.


    logo