logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

zany
ನಾಮವಾಚಕ
  • (ಚರಿತ್ರೆ) ಮುಖ್ಯ ನಕಲಿಗಾರನನ್ನು ಒಡ್ಡೊಡ್ಡಾಗಿ ಅನುಕರಿಸುವ ಉಪ ನಕಲಿಗಾರ.
  • ನಕಲಿ ಮನುಷ್ಯ; ತಮಾಷೆ ಮನುಷ್ಯ; ನಕಲಿಶ್ಯಾಮ.

  • zany
    ಗುಣವಾಚಕ
    ( ತರರೂಪ zanier, ತಮರೂಪ zaniest).
  • ನಕಲಿಯ; ತಮಾಷೆಯ.
  • ನಗೆಪಾಟಲಿನ; ಬೆಪ್ಪುರೀತಿಯ; ಹಾಸ್ಯಾಸ್ಪದವಾದ.

  • zap
    ಕ್ರಿಯಾಪದ ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    (ಭೂತರೂಪ & ಭೂತಕೃದಂತ zapped; ವರ್ತಮಾನ ಕೃದಂತ zapping). (ಅಶಿಷ್ಟ)
  • ಹೊಡೆ; ಹೊಡೆದು ಕೊಲ್ಲು.
  • ಆಕ್ರಮಣ ನಡೆಸು; ಘಾಸಿಯುಂಟು ಮಾಡು; ನಾಶಮಾಡು.
  • ಜೋರಾಗಿ ಹೊಡೆ: zapped the ball over the net ಬಲೆಯ ಮೇಲೆ ಜೋರಾಗಿ ಹೊಡೆದ.
  • ಭಾವಪರವಶವಾಗಿಸು.
  • (ಕಂಪ್ಯೂಟರ್‍) (ಪ್ರೋಗ್ರಾಂ ಒಂದರಲ್ಲಿ) ಒಂದು ಬಾಬನ್ನು ಯಾ ಐಟಂ ಅನ್ನು ಅಳಿಸಿಹಾಕು ಯಾ ಬದಲಿಸು.
  • ವೇಗವಾಗಿ ಮತ್ತು ಜೋರಾಗಿ ಚಲಿಸುವಂತೆ ಮಾಡು.

  • zapateado
    ನಾಮವಾಚಕ
    (ಬಹುವಚನ zapateados).
  • (ತಾಳಬದ್ಧವಾಗಿ ಕಾಲನ್ನು ನೆಲಕ್ಕೆ ಕುಟ್ಟುತ್ತಾ ನಡೆಸುವ) ಸ್ಪೇನಿನ ಜಿಪ್ಸಿ ನೃತ್ಯ.
  • ಹಾಗೆ ಕುಣಿಯುವ ತಂತ್ರ ಯಾ ಕ್ರಿಯೆ.

  • zappy
    ಗುಣವಾಚಕ
    ( ತರರೂಪ zappier, ತಮರೂಪ zappiest). (ಆಡುಮಾತು)
  • ವೀರ್ಯವತ್ತಾದ; ಉತ್ಸಾಹಪೂರ್ಣವಾದ.
  • ಆಕರ್ಷಕ; ಗಮನ ಸೆಳೆಯುವ.

  • ZAPU
    ಸಂಕ್ಷಿಪ್ತ
    Zimbabwe African People’s Union.

    zarape
    ನಾಮವಾಚಕ
    serape ಎಂಬುದರ ರೂಪಾಂತರ.

    Zarathustrian
    ಗುಣವಾಚಕ
    = 1Zoroastrian ಎಂಬುದರ ರೂಪಾಂತರ.

    Zarathustrian
    ನಾಮವಾಚಕ
    = 2Zoroastrian ಎಂಬುದರ ರೂಪಾಂತರ.

    zareba
    ನಾಮವಾಚಕ
    = zariba.


    logo