ಸಾಂತಿಕ್ ಆಮ್ಲ; ${\rm OCS}_2{\rm H}$ ಪರಮಾಣುಗುಚ್ಫವಿರುವ, ಸಾಮಾನ್ಯವಾಗಿ ಅಸ್ಥಿರವಾದ ಯಾವುದೇ ಕಾರ್ಬನಿಕ್ ಆಮ್ಲ.
Xanthippe
ನಾಮವಾಚಕ
ಚಂಡಿ; ಗಯ್ಯಾಳಿ ಹೆಂಡತಿ ಅಥವಾ ಸಿಡುಕಿನ ಹೆಂಗಸು (ಸಾಕ್ರೆಟೀಸನ ಹೆಂಡತಿಯ ಹೆಸರಿನಿಂದ).
xanthoma
ನಾಮವಾಚಕ
(ಬಹುವಚನ xanthomas ಅಥವಾ xanthomata ಉಚ್ಚಾರಣೆ ಸ್ಯಾನ್ತೋಮಟ). (ರೋಗಶಾಸ್ತ್ರ)
ಹಳದಿಮಚ್ಚೆ ರೋಗ; (ಕುತ್ತಿಗೆ ಮೊದಲಾದವುಗಳ ಮೇಲೆ) ಅಲ್ಲಲ್ಲಿ ಹಳದಿ ಕಲೆಗಳುಂಟಾಗುವ ಚರ್ಮರೋಗ.
ಅಂಥ ಕಲೆ, ಮಚ್ಚೆ.
xanthophyll
ನಾಮವಾಚಕ
ಪೀತದ್ರವ್ಯ; ಹಣ್ಣೆಲೆಹಳದಿ; ಪತ್ರಪೀತ; ಶರತ್ಕಾಲದ ಕೆಲವು ಎಲೆಗಳಲ್ಲಿ ಹಳದಿಬಣ್ಣವುಂಟು ಮಾಡುವ, ಆಮ್ಲಜನಕವನ್ನುಳ್ಳ, ಕ್ಲೋರೋಹಿಲ್ ಜೊತೆಗಿರುವ ಹಲವಾರು ಕೆರಟನಾಯ್ಡ್ (carotenoid)ಗಳಲ್ಲಿ ಒಂದು.
Xantippe
ನಾಮವಾಚಕ
= Xanthippe.
Xe
ಸಂಕೇತ
(ರಸಾಯನವಿಜ್ಞಾನ) xenon ಎಂಬ ಧಾತು.
xebec
ನಾಮವಾಚಕ
(ಮೆಡಿಟರೇನಿಯನ್ ಸಮುದ್ರದಲ್ಲಿ ಸಂಚರಿಸುವ) ಒಂದು ಬಗೆಯ, ಚಿಕ್ಕ ಮುಕ್ಕೂವೆ ಹಡಗು.