logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

u.c.
ಸಂಕ್ಷಿಪ್ತ
upper case.

UAE
ಸಂಕ್ಷಿಪ್ತ
United Arab Emirates.

ubiety
ನಾಮವಾಚಕ
ಸ್ಥಾನತ್ವ; ಒಂದು ಗೊತ್ತಾದ ಸ್ಥಳ ಯಾ ಸ್ಥಾನದಲ್ಲಿರುವುದು.

ubiquitarian
ಗುಣವಾಚಕ
(ದೇವತಾಶಾಸ್ತ್ರ) ಯೇಸು ಕ್ರಿಸ್ತನ ಸರ್ವತ್ರ ಅಸ್ತಿತ್ವಕ್ಕೆ ಸಂಬಂಧಿಸಿದ ಯಾ ಅದನ್ನು ನಂಬಉವ.

ubiquitarian
ನಾಮವಾಚಕ
(ದೇವತಾಶಾಸ್ತ್ರ) ಯೇಸು ಕ್ರಿಸ್ತನ ಸರ್ವತ್ರ ಅಸ್ತಿತ್ವದಲ್ಲಿ ಯಾ ಪ್ರತ್ಯಕ್ಷತೆಯಲ್ಲಿ ವಿಶ್ವಾಸಿ.

ubiquitarianism
ನಾಮವಾಚಕ
(ದೇವತಾಶಾಸ್ತ್ರ) ಯೇಸು ಕ್ರಿಸ್ತನ ಸರ್ವತ್ರ ಪ್ರತ್ಯಕ್ಷತೆಯಲ್ಲಿ ಶ್ರದ್ಧೆ, ವಿಶ್ವಾಸ.

ubiquitous
ಗುಣವಾಚಕ
  • ಸರ್ವಗ; ಸರ್ವತ್ರ; ಎಲ್ಲೆಡೆ ಯಾ ಒಂದೇ ಕಾಲದಲ್ಲಿ ವಿವಿಧ ಎಡೆಗಳಲ್ಲಿ ಇರುವ: ubiquitous fog ಸರ್ವತ್ರ ಹರಡಿದ ಮಂಜು.
  • ಪದೇಪದೇ ಯಾ ಅನೇಕವೇಳೆ – ಸಿಗುವ, ಗೋಚರಿಸುವ, ಸಂಧಿಸಬಹುದಾದ.

  • ubiquitously
    ಕ್ರಿಯಾವಿಶೇಷಣ
  • ಸರ್ವತ್ರ ಸಿದ್ಧವಾಗಿ; ಎಲ್ಲೆಡೆ ಯಾ ಒಂದೇ ಕಾಲದಲ್ಲಿ ವಿವಿಧೆಡೆಗಳಲ್ಲಿ ಇರುವಂತೆ.
  • ಪದೇಪದೇ ಯಾ ಅನೇಕ ವೇಳೆ ಸಿಗುವಂತೆ, ಗೋಚರವಾಗುವಂತೆ.

  • ubiquitousness
    ನಾಮವಾಚಕ
    = ubiquity.

    ubiquity
    ನಾಮವಾಚಕ ಪದಗುಚ್ಛ
    ubiquity of the king (ಬ್ರಿಟಿಷ್‍ ಪ್ರಯೋಗ) (ನ್ಯಾಯಶಾಸ್ತ್ರ) ರಾಜನ ಸರ್ವಾಂತರ್ಯಾಮಿತ್ವ; ರಾಜನು ಎಲ್ಲಾ ನ್ಯಾಯಾಲಯಗಳಲ್ಲೂ ನ್ಯಾಯಾಧೀಶರುಗಳಲ್ಲೂ ಮೂರ್ತಿಮತ್ತಾಗಿರುವುದು; ನ್ಯಾಯಾಧೀಶರ ರೂಪದಲ್ಲಿ ಅಧಿಕೃತವಾಗಿ ಇರುವುದು.
  • ಸರ್ವತ್ರ ಪ್ರತ್ಯಕ್ಷತೆ; ಸರ್ವತ್ರ ಅಸ್ತಿತ್ವ; ಸರ್ವಗತ್ವ; ಒಂದೇ ಕಾಲದಲ್ಲಿ ಅನೇಕ ಸ್ಥಳಗಳಲ್ಲಿರುವಿಕೆ.
  • (ಹಾಸ್ಯ ಪ್ರಯೋಗ) (ವ್ಯಕ್ತಿಯ ವಿಷಯದಲ್ಲಿ) ಪದೇಪದೇ ಸಿಗುವಿಕೆ.


  • logo