logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-English-Kannada)
A B C D E F G H I J K L M N O P Q R S T U V W X Y Z

China ware
Porcelain articles
ಚೀನಾ ಪಿಂಗಾಣಿ

Chuck
A shaped object for holding leather hard pots while they are being turned. They can be made in a clay, wood metal or plaster.
ಇಲಕಿ ಹಸಿ ಮಡಕೆಗಳನ್ನು ಬೀಲದಂತೆ ಭದ್ರವಾಗಿ ಹಿಡಿದುಕೊಳ್ಳುವ ಸಾಧನ, ತಿಗುರಿಯಿಂದ ಗೇಯ್ದ ಮಣ್ಣಿನ ವಸ್ತುಗಳನ್ನು ಬೀಳದಂತೆ ಇಡಲು, ಮಣ್ಣು ಕಟ್ಟಿಗೆ ಲೋಹದಿಂದ ಮಾಡಿದ ಸಾಧನ ಕುಂಬಾರರು ಸಾಮಾನ್ಯವಾಗಿ, ದೊಡ್ಡದಾದ ಮುಕ್ಕಾದ ಮಡಕೆಗಳನ್ನು ಸೊಂಟಕ್ಕೆ ಸರಿಯಾಗಿ ಒಡೆದು ಬಾಯಿ ಕೆಳಗೆ ಮಾಡಿ ಇಡುವರು. ಇದನ್ನು ಇಲಕಿ ಎನ್ನುವರು ಇದರಲ್ಲಿ ಹಸಿಮಡಿಕೆ ಇಡುವರು. ಒಂದು ಸಾರೆ ತಟ್ಟಿದ ಮಡಕೆಗಳನ್ನು ಕೂಡ ಇಲಕಿಯಲ್ಲಿಡುವರು.

Clay
A type of heavy soil that becomes hard when dry, used for making clay pots and bricks “which is the more important the potter or the clay. All of us are vital to gods great master plan” (William Arthur ward)
ಜಿಗಟ್ಟು ಮಣ್ಣು ಕುಂಬಾರಿಕೆಯ ಮಣ್ಣು ಇದು ಅಲ್ಯೂಮಿನಾ ಮತ್ತು ಸಿಲಿಕೇಟ್ ಗಳನ್ನು ಒಳಗೊಂಡಿರುತ್ತದೆ.

Clay body
A general term to indicate a mixture of clays and minerals used for building pots
ಬೇರೆ ಬೇರೆ ವಿಧದ ಮಣ್ಣು ಮತ್ತು ಖನಿಜಗಳ ಮಿಶ್ರಣದಿಂದ ಒಟ್ಟುಗೂಡಿದ ಮಣ್ಣು ಮಡಕೆ ಮಾಡಲು ಬಳಸುವರು.

Claypit
Pit from which clay is dug.
ಮಣ್ಣು ಗುಂಡಿ, ಕುಂಬಾರರು ಮಡಕೆ ಮಾಡಲು ಮಣ್ಣು ತರುವ ಸ್ಥಳ.

Clay stone
A natural rock stone formed from partly decomposed granite with high content of feldspar. It is an essential ingredient of porcelain bona china.
ಸ್ವಾಭಾವಿಕ ಶಿಲೆಯಿಂದ ಉಂಟಾದ ಮಣ್ಣು ಭಾಗಶಃ ಬೋನಾಚೈನಾ ಪಿಂಗಾಣಿ ತಯಾರಿಸುವ ಮಣ್ಣಿನಲ್ಲಿ ಇದು ಮುಖ್ಯ ಘಟಕ.

Clay plate
Lid , mouth covering plate.
ಮುಚ್ಚಳ, ಮಡಕೆಯ ಬಾಯಿಗೆ ತಕ್ಕುದಾದ ಬೇರೆ ಬೇರೆ ಅಳತೆಯ ಮುಚ್ಚಳವನ್ನು ಕುಂಬಾರರು ಮಾಡುವರು ಸಾಮಾನ್ಯವಾಗಿ ಕುಂಬಾರಗಿತ್ತಯರು ಕೈಯಿಂದಲೇ ಮುಚ್ಚಳಮಾಡುವರು.

Clay pipe
A tobacco pipe made of clay
ತಂಬಾಕು ಸೇದುವ ಮಣ್ಣಿನ ಚಿಲುಮೆ.

Clay ware
Clay pot, vessel
ಮಣ್ಣಿನ ಗಡಿಗೆ ಪಾತ್ರೆ.

Coiling
A means of building by hand, a pot using ropes of clay laid on top or each other and smoothed together.
ಕೈಯಿಂದ ಮಡಕೆ ಮಾಡುವ ಸುರುಳಿ ವಿಧಾನ. ಮಣ್ಣಿನ್ನು ಹಗ್ಗದಂತೆ ಹೊಸೆದು ಸಿಂಬಿಗಳನ್ನಾಗಿ ಮಾಡಿ ಒಂದರ ಮೇಲೊಂದಿಟ್ಟು ಬೇಕಾದ ಆಕೃತಿಯ ಮಡಕೆಯನ್ನು ಕೈಯಿಂದ ರೂಪುಗೊಳಿಸುವುದು. ಈ ವಿಧಾನ ಬಹು ಪ್ರಾಚೀನದಿಂದಲೂ ರೂಢಿಯಲ್ಲಿದೆ.


logo