logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

a fortiori
ಗುಣವಾಚಕ
ದೃಢತರದ; ಮತ್ತಷ್ಟು ನಿಶ್ಚಯವಾದ; ಇನ್ನೂ ನಿರ್ಣಾಯಕವಾದ; ಬಲವತ್ತರವಾದ: a fortiori proof ದೃಢತರವಾದ ಪ್ರಮಾಣ.

a huis clos
ಕ್ರಿಯಾವಿಶೇಷಣ
ಕದ ಮುಚ್ಚಿ; ಏಕಾಂತವಾಗಿ.

a la
ಉಪಸರ್ಗ
French ಅಂತೆ; ಆ ರೀತಿಯಲ್ಲಿ; ಆ ನಮೂನೆಯಾಗಿ: a la russe ರಷ್ಯನ್‍ ಶೈಲಿಯಲ್ಲಿ; ರಷ್ಯದ ಮಾದರಿಯಲ್ಲಿ.

a la carte
ಕ್ರಿಯಾವಿಶೇಷಣ
(ಖಾದ್ಯ) ಪಟ್ಟಿಯ ಪ್ರಕಾರದಂತೆ; ನಿಗದಿಯಾದ ಬೆಲೆಯ ಒಟ್ಟು ಊಟವನ್ನು ತರಿಸಿಕೊಳ್ಳದೆ, ತಿನಿಸುಗಳ ಪಟ್ಟಿಯನ್ನು ನೋಡಿ ಬೇಕಾದ ಪದಾರ್ಥಗಳನ್ನು ಒಂದೊಂದಾಗಿ ತರಿಸಿಕೊಳ್ಳುತ್ತ.

a la carte
ಗುಣವಾಚಕ
(ಖಾದ್ಯ, ತಿಂಡಿ) ಪಟ್ಟಿಯ ಪ್ರಕಾರದ; ಒಟ್ಟು ಊಟವನ್ನು ತರಿಸಿಕೊಳ್ಳದೆ, ತಿಂಡಿ ಪಟ್ಟಿಯಲ್ಲಿರುವ ಬೆಲೆಯಂತೆ ಒಂದೊಂದಾಗಿ ತರಿಸಿಕೊಳ್ಳುವ.

a la mode
ಗುಣವಾಚಕ
  • (ಒಬ್ಬನ, ಒಂದರ, ಒಂದು ಕಾಲದ) ಶೈಲಿಯಲ್ಲಿನ; ರೀತಿಗನುಗುಣವಾದ; ರೀತಿನೀತಿಗಳನ್ನು ಅನುಸರಿಸುವ.
  • ನಯನಾಜೂಕಿನ; ನವನಾಗರಿಕವಾಗಿರುವ; ಅಲಂಪುಗಾರಿಕೆಯಿಂದ ಕೂಡಿದ.
  • (ಆಹಾರದ ವಿಷಯದಲ್ಲಿ) ಐಸ್‍ಕ್ರೀಂ ಹಾಕಿದ; ಐಸ್‍ಕ್ರೀಂ ಹಾಕಿ ಬಡಿಸಿದ.
  • (ದನದ ಮಾಂಸದ ವಿಷಯದಲ್ಲಿ) ವೈನ್‍ ಮದ್ಯದಲ್ಲಿ ಬೇಯಿಸಿದ.

  • a la mode
    ಕ್ರಿಯಾವಿಶೇಷಣ
  • (ಒಬ್ಬನ, ಒಂದರ, ಒಂದು ಕಾಲದ) ಶೈಲಿಯಲ್ಲಿ; ರೀತಿಯಂತೆ; ರೀತಿನೀತಿಗಳಿಗನುಗುಣವಾಗಿ.
  • ನಯನಾಜೂಕಾಗಿ.
  • (ಆಹಾರದ ವಿಷಯದಲ್ಲಿ) ಐಸ್‍ಕ್ರೀಂ–ಹಾಕಿ, ಸೇರಿಸಿ.
  • (ದನದ ಮಾಂಸದ ವಿಷಯದಲ್ಲಿ) ವೈನ್‍ ಮದ್ಯದಲ್ಲಿ ಬೇಯಿಸಿ.

  • a la mort
    ಕ್ರಿಯಾವಿಶೇಷಣ French
  • ಸತ್ತರೂ ಸರಿಯೆ; ಆಮರಣಾಂತ; ಸತ್ತುಹೋಗುವವರೆಗೂ.
  • ಮೃತ್ಯುಮುಖದಲ್ಲಿ; ಸಾವು ಸನಿಹವಾಗಿರುವಾಗ.

  • a la mort
    ಗುಣವಾಚಕ
  • ಮರಣಾಂತಿಕ ಕಾಯಿಲೆಯ; ಸಾಯುವಷ್ಟು ಅಸ್ವಸ್ಥತೆ ಹೊಂದಿದ.
  • ಧೈರ್ಯಗುಂದಿದ; ನಿರುತ್ಸಾಹದಲ್ಲಿ ಬಿದ್ದ ; ಸಾಯುವಷ್ಟು ಬೇಸರ ಹಿಡಿದ.

  • a la page
    ಕ್ರಿಯಾವಿಶೇಷಣ
    ಇಂದಿನದಾಗಿ; ಅದ್ಯತನವಾಗಿ; ಸಮಕಾಲೀನವಾಗಿ; ಸದ್ಯದ ಶೈಲಿಯಲ್ಲಿ; ಇತ್ತೀಚಿನ ರೀತಿಯಲ್ಲಿ.


    logo