logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ingravescence
ನಾಮವಾಚಕ
(ರೋಗ ಮೊದಲಾದವುಗಳ ವಿಷಯದಲ್ಲಿ) ವೃದ್ಧಿ; ತೀವ್ರವಾಗುತ್ತಿರುವಿಕೆ; ಉಲ್ಬಣವಾಗುತ್ತಿರುವಿಕೆ.

ingravescent
ಗುಣವಾಚಕ
(ರೋಗ ಮೊದಲಾದವುಗಳ ವಿಷಯದಲ್ಲಿ) ಉಲ್ಬಣವಾಗುತ್ತಿರುವ; ಉಲ್ಬಣಿಸುತ್ತಿರುವ; ವರ್ಧಿಸುತ್ತಿರುವ; ತೀವ್ರವಾಗುತ್ತಿರುವ.

ingredient
ನಾಮವಾಚಕ
(ಒಂದು ಮಿಶ್ರಣದ ಯಾ ಸಂಯುಕ್ತದ) ಅಂಶ; ಘಟಕ; ಘಟಕಾಂಶ.

ingress
ನಾಮವಾಚಕ
  • ಹೊಗುವುದು; ಪ್ರವೇಶ; ಒಳಕ್ಕೆ ಹೋಗುವುದು.
  • ಪ್ರವೇಶಾಧಿಕಾರ; ಒಳಹೋಗುವ ಹಕ್ಕು.
  • (ಖಗೋಳ ವಿಜ್ಞಾನ) ಗ್ರಹಣದ ಯಾ ಸಂಕ್ರಮಣದ (transit) ಆರಂಭ.

  • ingrowing
    ನಾಮವಾಚಕ
  • (ಮುಖ್ಯವಾಗಿ ಉಗುರಿನ ವಿಷಯದಲ್ಲಿ) ಒಳಬೆಳೆವ; ಅಂತಾರೋಹ; ಅಂತರ್ವರ್ಧಕ; ಒಳಗಡೆಗೆ, ಮಾಂಸದೊಳಕ್ಕೆ ಬೆಳೆಯುತ್ತ ಹೋಗುವ.
  • (ಮರಗಳ ವಿಷಯದಲ್ಲಿ) ಒಳಕ್ಕೆ ಬೆಳೆಯುತ್ತ ಹೋಗುವ.

  • ingrown
    ಗುಣವಾಚಕ
  • ಮಾಂಸಖಂಡದೊಳಗೆ ಬೆಳೆದ, ಬೆಳೆದುಕೊಂಡ: an ingrown toenail ಮಾಂಸಖಂಡದೊಳಗೆ ಬೆಳೆದುಕೊಂಡ ಕಾಲುಗುರು.
  • ಒಳಬೆಳೆದ; ಅಂತರ್ವರ್ಧಿತ; ಒಳಗಡೆ ಯಾ ಒಳಗಡೆಗೆ – ಬೆಳೆದುಕೊಂಡ.

  • ingrowth
    ನಾಮವಾಚಕ
    ಒಳಬೆಳೆತ; ಒಳಬೆಳವಣಿಗೆ; ಅಂತಾರೋಹ; ಅಂತರ್ವರ್ಧನೆ; ಅಂತರ್ವೃದ್ಧಿ; ಒಳಗಡೆಗೇ ಬೆಳೆದುಕೊಳ್ಳುವುದು.

    inguinal
    ಗುಣವಾಚಕ
    ಗೆಜ್ಜೆಯ; ಊರು ಸಂಧಿಯ; ತೊಡೆಯ – ಸಂದಿನ, ಸಂದಿನಲ್ಲಿರುವ; ಕಿಬ್ಬೊಟ್ಟೆಯ ತಳಭಾಗಕ್ಕೂ ತೊಡೆಗೂ ನಡುವಣ ಸಂದಿನ.

    ingulf
    ಸಕರ್ಮಕ ಕ್ರಿಯಾಪದ
    engulf ಪದದ ರೂಪಾಂತರ.

    ingurgitate
    ಸಕರ್ಮಕ ಕ್ರಿಯಾಪದ
  • ಗಬಗಬನೆ ನುಂಗು; ಅತ್ಯಾಶೆಯಿಂದ ಕಬಳಿಸು.
  • (ರೂಪಕವಾಗಿ) ನುಂಗಿಬಿಡು; ನುಂಗಿಹಾಕು; ಕಬಳಿಸು.


  • logo