logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ingenuousness
ನಾಮವಾಚಕ
  • ಬಿಚ್ಚು ಮನಸ್ಸು; ಮುಚ್ಚುಮರೆಯಿಲ್ಲದಿರುವಿಕೆ.
  • ಮುಗ್ಧತೆ; ನಿಷ್ಕಪಟತೆ.

  • ingest
    ಸಕರ್ಮಕ ಕ್ರಿಯಾಪದ
  • (ನುಂಗುವುದರ ಯಾ ಅರಗಿಸಿಕೊಳ್ಳುವುದರ ಮೂಲಕ ಆಹಾರವನ್ನು) ಸೇವಿಸು; ತೆಗೆದುಕೊ; ಹೊಟ್ಟೆಯೊಳಕ್ಕೆ ಹೊಗಿಸು, ಸಾಗಿಸು.
  • (ವಿಷಯ, ಜ್ಞಾನ, ಮೊದಲಾದವನ್ನು) ಅರಗಿಸಿಕೊ; ಜೀರ್ಣಮಾಡಿಕೊ.

  • ingestion
    ನಾಮವಾಚಕ
    (ಆಹಾರದ) ಸೇವನೆ; ಪ್ರಾಶನ; ಆಹಾರವನ್ನು – ಹೊಟ್ಟೆಯೊಳಕ್ಕೆ ಹೊಗಿಸುವುದು, ತೆಗೆದುಕೊಳ್ಳುವುದು (ರೂಪಕವಾಗಿ ಸಹ).

    ingestive
    ಗುಣವಾಚಕ
    (ಆಹಾರವನ್ನು) ಸೇವಿಸುವ; ತೆಗೆದುಕೊಳ್ಳುವ; ಹೊಟ್ಟೆಯೊಳಕ್ಕೆ ಹೊಗಿಸುವ.

    ingle
    ನಾಮವಾಚಕ
    ಬೆಂಕಿಗೂಡಿನಲ್ಲಿ ಉರಿಯುತ್ತಿರುವ ಬೆಂಕಿ.

    inglenook
    ನಾಮವಾಚಕ
    ಚಿಮಣಿಮೂಲೆ; ಹೊಗೆಕೊಳವೆಯ, ಗೂಡಿನ – ಮೂಲೆ.

    inglorious
    ಗುಣವಾಚಕ
  • ನಾಚಿಕೆಗೇಡಾದ; ಅಪಮಾನಕರವಾದ; ಲಜ್ಜಾಸ್ಪದವಾದ; ತಲೆ ತಗ್ಗಿಸುವಂಥ.
  • ಅಪ್ರಸಿದ್ಧ; ಹೆಸರುವಾಸಿ – ಹೊಂದಿರದ, ಇಲ್ಲದ; ಬೆಳಕಿಗೆ ಬರದ; ಖ್ಯಾತಿಗೆ ಬರದ.

  • ingloriously
    ಕ್ರಿಯಾವಿಶೇಷಣ
  • ನಾಚಿಕೆಗೇಡಾಗಿ; ಅವಮಾನಕರವಾಗಿ; ಲಜ್ಜಾಸ್ಪದವಾಗಿ; ತಲೆತಗ್ಗಿಸುವಂತೆ.
  • ಅಪ್ರಸಿದ್ಧವಾಗಿ; ಹೆಸರುವಾಸಿ ಹೊಂದದೆ; ಹೆಸರುವಾಸಿ ಇಲ್ಲದೆ; ಬೆಳಕಿಗೆ ಬರದೆ; ಖ್ಯಾತಿಗೆ ಬಾರದೆ.

  • ingoing
    ಗುಣವಾಚಕ
  • ಪ್ರವೇಶಿಸುವ; ಒಳಕ್ಕೆ ಹೋಗುವ.
  • ಆಮೂಲಾಗ್ರವಾದ; ತಳಸ್ಪರ್ಶಿಯಾದ.

  • ingot
    ನಾಮವಾಚಕ
    ಲೋಹದ – ಗಟ್ಟಿ ಇಟ್ಟಿಗೆ, ಪಾಳ; ಎರಕ ಹೊಯ್ದ ಲೋಹದ (ಸಾಮಾನ್ಯವಾಗಿಚಿನ್ನದ, ಬೆಳ್ಳಿಯ ಯಾ ಉಕ್ಕಿನ) ಇಟ್ಟಿಗೆ.


    logo