logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

infraction
ನಾಮವಾಚಕ
(ಮುಖ್ಯವಾಗಿ ನ್ಯಾಯಶಾಸ್ತ್ರ) ಮುರಿತ; ಮುರಿಯುವುದು; ಉಲ್ಲಂಘನೆ; ಅತಿಕ್ರಮ; ಭಂಗ: infraction of her right ಅವಳ ಹಕ್ಕಿನ ಭಂಗ.

infralapsarian
ನಾಮವಾಚಕ
ಅಧಃಪತನ ಸಿದ್ಧಾಂತಿ; ದೇವರು ಕೆಲವು ವ್ಯಕ್ತಿಗಳನ್ನು ಅಮರತ್ವಕ್ಕೆ ಆಯ್ಕೆ ಮಾಡಿದ್ದು ದೇವರ ಪೂರ್ವಜ್ಞತೆಯ ಕುರುಹೆಂದೂ, ಮಾನವನ ಭಾವೀಪತನವನ್ನು ನಿರೀಕ್ಷಿಸಿಯೇ ದೇವರು ಈ ಆಯ್ಕೆ ಮಾಡಿದನೆಂದೂ, ಇದು ಪತಿತ ಮಾನವನ ಪುನರುದ್ಧಾರಕ್ಕಾಗಿಯೇ ಕೈಗೊಂಡ ಕಾರ್ಯವೆಂದೂ, ವಾದಿಸಿದ ಕ್ಯಾಲ್ವಿನಿಸ್ಟ್‍ ಪಂಥದ ವಾದಿ, ಸಿದ್ಧಾಂತಿ, ಅನುಯಾಯಿ.

infralapsarian
ಗುಣವಾಚಕ
ಅಧಃಪತನ ಸಿದ್ಧಾಂತದ ಯಾ ಅದನ್ನು ಎತ್ತಿ ಹಿಡಿಯುವ.

infralapsarianism
ನಾಮವಾಚಕ
ಅಧಃಪತನ ಸಿದ್ಧಾಂತ.

infrangible
ಗುಣವಾಚಕ
  • ಮುರಿಯದ; ಒಡೆಯದ.
  • ಅನುಲ್ಲಂಘ್ಯ; ಅನತಿಕ್ರಮ್ಯ; ಉಲ್ಲಂಘಿಸಕೂಡದ.

  • infrared
    ಗುಣವಾಚಕ
    (ಭೌತವಿಜ್ಞಾನ) ಅವರಕ್ತ; ಅವರೋಹಿತ; ಅಧೋಲೋಹಿತ:
  • ರೋಹಿತದಲ್ಲಿ ಕೆಂಪುಬಣ್ಣಕ್ಕಿಂತ ಕೆಳಗಿನ ತರಂಗದೂರವಿರುವ.
  • ಇಂಥ ವಿಕಿರಣದ ಯಾ ಅದನ್ನು ಬಳಸುವ.

  • infrarenal
    ಗುಣವಾಚಕ
    ಮೂತ್ರಪಿಂಡಾಧದ; ಮೂತ್ರಪಿಂಡದ ಕೆಳಗಿನ.

    infrascapular
    ಗುಣವಾಚಕ
    ಭುಜದೆಲುಬಿನ, ಭುಜಾಸ್ಥಿಯ – ಕೆಳಗಿನ.

    infrasonic
    ಗುಣವಾಚಕ
    ಅವಶ್ರವ್ಯ; ಮನುಷ್ಯನ ಕಿವಿಗೆ ಕೇಳಿಸದಷ್ಟು ಕೆಳ ಆವರ್ತನದ ಧ್ವನಿತರಂಗಗಳ ಯಾ ಅವಕ್ಕೆ ಸಂಬಂಧಿಸಿದ.

    infrasonically
    ಕ್ರಿಯಾವಿಶೇಷಣ
    ಅವಶ್ರವ್ಯವಾಗಿ.


    logo