logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tail-off
ನಾಮವಾಚಕ
(ಮುಖ್ಯವಾಗಿ ಬೇಡಿಕೆಯಲ್ಲಿ) ಇಳಿತ; ಹ್ರಾಸ; ಕ್ರಮೇಣ ಕಡಿಮೆಯಾಗುತ್ತಾ ಹೋಗುವುದು.

tail-race
ನಾಮವಾಚಕ
ನೀರುಗಿರಣಿಚಕ್ರದ ಕೆಳಗಣ ನೀರ ಹರಿವು, ಪ್ರವಾಹ.

tail-skid
ನಾಮವಾಚಕ
(ವಿಮಾನದ) ಹಿನ್ನಾಸರೆ; ಹಿನ್ನೂರೆ; ವಿಮಾನ ನೆಲದ ಮೇಲಿರುವಾಗ ಅದರ ಹಿಂಭಾಗಕ್ಕೆ ಕೊಡುವ ಆಧಾರ, ಊರೆ.

tailback
ನಾಮವಾಚಕ
  • (ಅಡಚಣೆಯಿಂದಾಗಿ ಸುಸೂತ್ರವಾಗಿ ಚಲಿಸಲಾಗದ) ವಾಹನ ಸಾಲಿನ ಹಿಂಭಾಗ.
  • ನಿಂತಿರುವ ವಾಹನಗಳ ಉದ್ದ–ಸಾಲು, ಪಂಕ್ತಿ.

  • tailboard
    ನಾಮವಾಚಕ
    ಹಿಂಬದಿ ಹಲಗೆ; (ಸಾಮಾನು ತುಂಬಲು ಯಾ ಇಳಿಸಲು ಅನುಕೂಲವಾಗುವಂತೆ) ಲಾರಿ ಮೊದಲಾದವುಗಳ ಹಿಂಭಾಗದಲ್ಲಿ ಕೀಲಿಯಿಂದ ಸೇರಿಸಿದ ಯಾ ಕಳಚಿ ಹಾಕಬಹುದಾದ ಹಲಗೆ.

    tailcoat
    ನಾಮವಾಚಕ
    ಬಾಲದ ಕೋಟು; ಗಂಡಸರು ಬೆಳಿಗ್ಗೆ ಯಾ ಸಂಜೆ ಧರಿಸುವ ಕೋಟು; ಹಿಂಭಾಗದಲ್ಲಿ ಸೀಳುಗಳಾಗಿ ವಿಭಜಿಸಿದ, ಮುಂದೆ ಲಂಗದಂತೆ ಇರುವ ನೀಳಂಗಿ.

    tailed
    ಗುಣವಾಚಕ
    (ಸಂಯುಕ್ತಪದಗಳಲ್ಲಿ ಸಹ ಪ್ರಯೋಗ) ಬಾಲವುಳ್ಳ ಯಾ ಬಾಲ ಕಟ್ಟಿದ; ಸಪುಚ್ಫ.

    tailgate
    ನಾಮವಾಚಕ
  • ನೀರಿನ ಮಟ್ಟ ಬದಲಾವಣೆ ಕಟ್ಟೆಯ ಕೆಳ–ಬಾಗಿಲು, ತೂಬಉ.
  • (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ)
    1. = tailboard.
    2. ಎಸ್ಟೇಟ್‍ ಕಾರಿನ ಹಿಂಬಾಗಿಲು; ಸಾಮಾನು ಇಳಿಸುವ ಹಿಂಭಾಗದ ಬಾಗಿಲು.

  • tailgate
    ಅಕರ್ಮಕ ಕ್ರಿಯಾಪದ
    (ಅಮೆರಿಕನ್‍ ಪ್ರಯೋಗ, ಆಡುಮಾತು)
  • ಇನ್ನೊಂದು ವಾಹನದ ಹಿಂದೆ, ಅದಕ್ಕೆ ಡಿಕ್ಕಿ ಹೊಡೆಯುವಷ್ಟು ಸಮೀಪದಲ್ಲಿ ಕಾರನ್ನು ನಡೆಸು ( ಸಕರ್ಮಕ ಕ್ರಿಯಾಪದ ಸಹ).
  • (ವಾಹನವನ್ನು) ಬಹಳ ಹತ್ತಿರದಲ್ಲಿ, ಬಾಲದಂತೆ–ಹಿಂಬಾಲಿಸು.

  • tailgater
    ನಾಮವಾಚಕ
    ವಾಹನವನ್ನು ಬಹಳ ಹತ್ತಿರದಲ್ಲಿ ಹಿಂಬಾಲಿಸುವವನು.


    logo