logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

obnoxiousness
ನಾಮವಾಚಕ
ಹೇಸಿಕೆ ಹುಟ್ಟಿಸುವಂತಿರುವುದು; ಜುಗುಪ್ಸೆ, ಜಿಹಾಸೆ–ಹುಟ್ಟಿಸುವಂತಿರುವುದು; ಹೇವರಿಕೆ ಬರಿಸುವಂತಿರುವುದು; ಅಸಹ್ಯಕರತೆ.

oboe
ನಾಮವಾಚಕ
  • (ಸಂಗೀತ) ಓಬೋ (ವಾದ್ಯ); ಮರದಿಂದ ಮಾಡಿದ, ವಾದ್ಯಮೇಳದಲ್ಲಿ ಬಳಸುವ, ಒಂದು ಬಗೆಯ ಊದುವ ವಾದ್ಯ. Figure: oboe-1
  • ಓಬೋ ವಾದಕ; ಓಬೋ ವಾದ್ಯವನ್ನು ಊದುವವನು.
  • (ಸಂಗೀತ) ಓಬೋ ವಾದ್ಯವನ್ನನುಕರಿಸಿ ಮಾಡಿದ, ಆರ್ಗನ್‍ ವಾದ್ಯದ ಪಿಳ್ಳಂಗೋವಿಯಂಥ ಭಾಗ; ಆರ್ಗನ್‍ ವಾದ್ಯದ (ಊದು) ಕೊಳಲು.

  • oboist
    ನಾಮವಾಚಕ
    (ಸಂಗೀತ) ಓಬೋವಾದಕ, ವಾದನಕಾರ.

    obol
    ನಾಮವಾಚಕ
    ಆಬಲ್‍; ಡ್ರ್ಯಾಕ್ಮದ ಆರನೇ ಒಂದು ಭಾಗಕ್ಕೆ ಸಮನಾಗಿರುವ; ಪುರಾತನ ಗ್ರೀಕ್‍ (ಬೆಳ್ಳಿಯ) ನಾಣ್ಯ.

    obovate
    ಗುಣವಾಚಕ
    (ಜೀವವಿಜ್ಞಾನ) (ಎಲೆಯ ವಿಷಯದಲ್ಲಿ) ತಳಭಾಗದ ತುದಿ ಚೂಪಾಗಿದ್ದು, ಅಂಡಾಕಾರದಲ್ಲಿರುವ.

    obscene
    ಗುಣವಾಚಕ
  • ಪುಂಡ; ಬಂಡು; ಅಶ್ಲೀಲ; ಭಂಡ; ಮುಖ್ಯವಾಗಿ ಜನಸಮ್ಮತವಾದ ನೈತಿಕ ಲೈಂಗಿಕ ಭಾವನೆಗೆ ವಿರುದ್ಧವಾದ.
  • (ಆಡುಮಾತು) ಹೇಸಿಕೆ, ಹೇವರಿಕೆ–ಹುಟ್ಟಿಸುವ; ಜುಗುಪ್ಸೆ ಉಂಟು ಮಾಡುವ; ಅಸಹ್ಯಕರವಾದ; ಹೊಲಸಾದ: an obscene accumulation of wealth ಜುಗುಪ್ಸೆ ಹುಟ್ಟಿಸುವ ಧನಸಂಗ್ರಹ.
  • (ಬ್ರಿಟಿಷ್‍ ಪ್ರಯೋಗ) (ನ್ಯಾಯಶಾಸ್ತ್ರ) (ಪ್ರಕಟಣೆಯೊಂದರ ವಿಷಯದಲ್ಲಿ) ಅಶ್ಲೀಲ; ನೀತಿಗೆಡಿಸುವ ಯಾ ಭ್ರಷ್ಟಗೊಳಿಸುವ.

  • obscenely
    ಕ್ರಿಯಾವಿಶೇಷಣ
  • ಪುಂಡುಪುಂಡಾಗಿ; ಬಂಡುಬಂಡಾಗಿ; ಅಶ್ಲೀಲವಾಗಿ
  • ಹೇಸಿಕೆ ಹುಟ್ಟಿಸುವಂತೆ; ಜುಗುಪ್ಸೆ ಉಂಟು ಮಾಡುವಂತೆ; ಅಸಹ್ಯಕರವಾಗಿ; ಹೊಲಸಾಗಿ.

  • obsceneness
    ನಾಮವಾಚಕ
  • ಅಶ್ಲೀಲತೆ; ಬಂಡುತನ.
  • ಹೇಸಿಕೆ ಹುಟ್ಟಿಸುವಂತಿರುವಿಕೆ; ಜುಗುಪ್ಸಾವಹತೆ.

  • obscenity
    ನಾಮವಾಚಕ
  • ಹೇಸಿಗೆ, ಹೇವರಿಕೆ–ಹುಟ್ಟಿಸುವಂತಿರುವುದು; ಜುಗುಪ್ಸೆ ಉಂಟುಮಾಡುವಂತಿರುವುದು; ಅಸಹ್ಯಕರವಾಗಿರುವಿಕೆ; ಹೊಲಸುತನ.
  • (ಕ್ರಿಯೆ, ಮಾತು, ಮೊದಲಾದವುಗಳಲ್ಲಿ) ಅಶ್ಲೀಲತೆ; ಪುಂಡು ಪುಂಡಾಗಿರುವುದು.

  • obscurant
    ನಾಮವಾಚಕ
  • ಗೊಡ್ಡು; ಅಂಧಶ್ರದ್ಧಾಳು; ಪ್ರಗತಿ ವಿರೋಧಿ; ಸುಧಾರಣಾ ವಿರೋಧಿ; ಗೊಡ್ಡು ಸಂಪ್ರದಾಯಶರಣ; ವಿಚಾರಶೀಲತೆ, ಜಿಜ್ಞಾಸೆ, ನೂತನ ಜ್ಞಾನ, ಸುಧಾರಣೆಗಳನ್ನು–ಹಳಿಯುವವನು ಯಾ ವಿರೋಧಿಸುವವನು.
  • ಅಸ್ಪಷ್ಟವಾದಿ; ಬುದ್ಧಿಪೂರ್ವಕವಾಗಿ ಸ್ಪಷ್ಟವಾಗಿರದ ಯಾ ವಿವರಣೆ ನೀಡದ ವ್ಯಕ್ತಿ.


  • logo