logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

magic
ಗುಣವಾಚಕ
  • ಮಾಂತ್ರಿಕ; ಮಾಟದ; ವಾಮಾಚಾರದ; ಆಭಿಚಾರಿಕ; ಮಂತ್ರವಿದ್ಯೆಯ.
  • ಮ್ಯಾಜಿಕ್ಕಿನ; ಯಕ್ಷಿಣಿಯ; ಐಂದ್ರಜಾಲಿಕ; ಮೋಡಿ, ಮಾಟ, ಇಂದ್ರಜಾಲ, ಯಕ್ಷಿಣಿ, ಗಾರುಡಿ ವಿದ್ಯೆ, ಅಭಿಚಾರ, ಮೊದಲಾದವುಗಳ ಯಾ ಅವುಗಳಿಗೆ ಸಂಬಂಧಿಸಿದ.
  • ಅದ್ಭುತವಾದ; ಅದ್ಭುತ ಪರಿಣಾಮದ.
  • ಮನಮೋಹಕ; ಚೇತೋಹಾರಿ: it was the most magic moment of the day ದಿನದ ಅತ್ಯಂತ ಮನಮೋಹಕ ಗಳಿಗೆ ಅದು.
  • ಮಾಟದಂಥ; ಮಂತ್ರ ಹಾಕುವಂಥ; ಮಂತ್ರ ಸದೃಶವಾದ.

  • magic
    ಸಕರ್ಮಕ ಕ್ರಿಯಾಪದ ಪದಗುಚ್ಛ
    ಮ್ಯಾಜಿಕ್‍ ಮಾಡು; ಯಕ್ಷಿಣಿ ಮಾಡು: magic away ಮಾಟದಿಂದಲೋ ಎಂಬಂತೆ – ಅದೃಶ್ಯವಾಗಿಸು, ಕಾಣಿಸದಂತೆ ಮಾಡು, ಇಲ್ಲದಂತಾಗಿಸು.
  • ಮಂತ್ರವಿದ್ಯೆಯಿಂದ ಯಾ ಯಕ್ಷಿಣಿಯಿಂದ ಬದಲಾಯಿಸು ಯಾ ಸೃಷ್ಟಿಸು.
  • ಮಂತ್ರವಿದ್ಯೆಯಿಂದಲೋ ಎಂಬಂತೆ ಯಾ ಯಕ್ಷಿಣಿಯಿಂದಲೋ ಎಂಬಂತೆ – ಬದಲಾಯಿಸು ಯಾ ಸೃಷ್ಟಿಸು.

  • magic carpet
    ನಾಮವಾಚಕ
    ಮಾಯಾ – ಹಾಸು, ಜಮಖಾನೆ; ಅದರ ಮೇಲೆ ಕುಳಿತವನನ್ನು ಅವನಿಗೆ ಬೇಕಾದಲ್ಲಿಗೆ ಒಯ್ಯಬಲ್ಲದೆಂದು ನಂಬಲಾದ ಕಾಲ್ಪನಿಕ ಜಮಖಾನೆ.

    magic eye
    ನಾಮವಾಚಕ
    ಮಾಯಾನೇತ್ರ; ಮಾಯಾಕ್ಷಿ:
  • ರೇಡಿಯೋ ಶ್ರುತಿ ಮಾಡುವಾಗ ಅತ್ಯುತ್ಕೃಷ್ಟ ಪ್ರತಿಕ್ರಿಯೆ ಸೂಚಿಸಲು ಬಳಸುವ ಕ್ಯಾತೋಡ್‍ ಕಿರಣದ ನಳಿಕೆ.
  • ಪತ್ತೆ ಹಚ್ಚುವುದು, ಅಳತೆ ಮಾಡುವುದು, ಮೊದಲಾದ ಉಪಕರಣಗಳಲ್ಲಿ ಬಳಸುವ ದ್ಯುತಿ ವಿದ್ಯುತ್‍ ಸಾಧನ.

  • magic lantern
    ನಾಮವಾಚಕ
    ಮಾಯಾ – ಲಾಂದ್ರ ಯಾ ದೀಪ; ಪಾರದರ್ಶಕ ಸ್ಲೈಡುಗಳಲ್ಲಿರುವ ಚಿತ್ರಗಳನ್ನು ತೆರೆಯ ಮೇಲೆ ಬೀಳಿಸುವ ಒಂದು ಪ್ರೊಜೆಕ್ಟರು, ಪ್ರಕ್ಷೇಪಕ.

    magic mirror
    ನಾಮವಾಚಕ
    ಮಾಯಾದರ್ಪಣ, ಜಾದೂ ಕನ್ನಡಿ; ಭವಿಷ್ಯದ ಯಾ ದೂರದ ದೃಶ್ಯಗಳನ್ನು ಪ್ರೇಕ್ಷಕನು ನೋಡಹುದೆನ್ನಲಾದ ಕನ್ನಡಿ.

    magic mushroom
    ನಾಮವಾಚಕ
    ಮಾಯಾ ಅಣಬೆ; ಸಿಲಸೈಬಿನ್‍ (psilocybin) ಎಂಬ ಆಲ್ಕಲಾಯ್ಡನ್ನು ಕೊಡುವ ಒಂದು ಬಗೆಯ ಅಣಬೆ.

    magic square
    ನಾಮವಾಚಕ
    ಮಾಯಾಚೌಕ; ಉದ್ದ ಸಾಲಿನ, ಲಂಬಸಾಲಿನ ಯಾ ಮೂಲೆಯಿಂದ ಮೂಲೆಯ ಸಂಖ್ಯೆಗಳನ್ನು ಹೇಗೆ ಕೂಡಿದರೂ ಒಂದೇ ಮೊತ್ತವಾಗುವಂತೆ ಪ್ರತಿ ಸಣ್ಣ ಚೌಕದಲ್ಲೂ ಒಂದೊಂದು ಸಂಖ್ಯೆ ಬರೆದಿರುವ ಒಂದು ದೊಡ್ಡ ಚೌಕ.

    magical
    ಗುಣವಾಚಕ
  • = 2magic.
  • (ಮುಖ್ಯವಾಗಿ) ಅದ್ಭುತವಾದ; ಮೋಡಿ ಹಾಕುವಂಥ; ಮರಳುಗೊಳಿಸುವಂಥ; ಮಾಟ ಬೀರಿ ಸೆಳೆಯುವ: a magical voice ಮೋಡಿ ದನಿ; ಮೋಹಕ ಕಂಠ.

  • magically
    ಕ್ರಿಯಾವಿಶೇಷಣ
  • ಮಾಂತ್ರಿಕವಾಗಿ; ಮಂತ್ರವಿದ್ಯೆಯಿಂದ; ಆಭಿಚಾರಿಕವಾಗಿ; ವಾಮಾಚಾರದಿಂದ.
  • ಮೋಡಿಯಿಂದ; ಗಾರುಡಿತನದಿಂದ.
  • ಅದ್ಭುತವಾಗಿ; ಅದ್ಭುತ ಶಕ್ತಿಯಿಂದ.
  • ಮನಮೋಹಕವಾಗಿ; ಚಿತ್ತಾಕರ್ಷಕವಾದ ರೀತಿಯಲ್ಲಿ.
  • ಮಾಟ ಬೀರುವಂತೆ; ಮಾಂತ್ರಿಕವೋ ಎನ್ನುವಂತೆ; ಮರಳುಗೊಳಿಸುವಂತೆ.


  • logo