logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lactoprotein
ನಾಮವಾಚಕ
ಲ್ಯಾಕೊಪ್ರೋಟೀನ್‍; ಹಾಲಿನಲ್ಲಿರುವ ಆಲ್ಬುಮಿನ್‍ ಬಳಗದ ಪ್ರೋಟೀನು.

lactoscope
ನಾಮವಾಚಕ
ಕ್ಷೀರದರ್ಶಕ; ಹಾಲಿನಲ್ಲಿರುವ ಕೆನೆಯ ಪ್ರಮಾಣವನ್ನು ತೋರಿಸುವ ಸಲಕರಣೆ.

lactose
ನಾಮವಾಚಕ
(ರಸಾಯನವಿಜ್ಞಾನ) ಲ್ಯಾಕ್ಟೋಸ್‍; ಹಾಲಿನಲ್ಲಿರುವ ಗ್ಲೂಕೋಸ್‍ ಮತ್ತು ಗೆಲ್ಯಾಕ್ಟೋಸ್‍ಗಳ ಸಂಯೋಗದಿಂದ ಆದ ಒಂದು ದ್ವಿಶರ್ಕರ (ಡೈಸ್ಯಾಕರೈಡ್‍).

lacuna
ನಾಮವಾಚಕ
(ರಸಾಯನವಿಜ್ಞಾನ) (ಬಹುವಚನ lacunae ಉಚ್ಚಾರಣೆ ಲಕ್ಯೂನೀ, ಯಾ lacunas).
  • (ಮುಖ್ಯವಾಗಿ ಪುರಾತನ ಹಸ್ತಪ್ರತಿ, ಪುಸ್ತಕ, ಮೊದಲಾದವುಗಳಲ್ಲಿ) ಲುಪ್ತಭಾಗ; ತೆರಪು; ಅಂತರ; ಖಾಲಿಭಾಗ; ಬಿಡುತಿ ಭಾಗ; ಕಾಣೆಯಾಗಿರುವ, ಲೋಪವಾಗಿರುವ – ಭಾಗ.
  • (ಅಂಗರಚನಾಶಾಸ್ತ್ರ) (ಮುಖ್ಯವಾಗಿ ಮೂಳೆಯಲ್ಲಿನ) ಕುಳಿ; ಕುಹರ; ದೊಗರು; ತಗ್ಗು.

  • lacunal
    ಗುಣವಾಚಕ
  • ತೆರಪಿನ; ಬಿಡುವಿನ; ಅಂತರದ; ಲುಪ್ತಭಾಗದ; ಬಿಡುತಿಭಾಗದ; ಖಾಲಿಭಾಗದ.
  • ತೆರಪಿರುವ; ಅಂತರವಿರುವ; ಲೋಪಭಾಗವಿರುವ; ಬಿಡುತಿ ಭಾಗವುಳ್ಳ; ಖಾಲಿಭಾಗದಿಂದ ಕೂಡಿದ.
  • (ಮುಖ್ಯವಾಗಿ ಮೂಳೆಯಲ್ಲಿನ) ಕುಳಿಯ; ಕುಹರದ.

  • lacunar
    ಗುಣವಾಚಕ
    = lacunal.

    lacunary
    ಗುಣವಾಚಕ
    = lacunal.

    lacunose
    ಗುಣವಾಚಕ
  • ತೆರಪು ಭಾಗಗಳು ಹೆಚ್ಚಾಗಿರುವ; ಖಾಲಿ ಭಾಗಗಳಿಂದ ತುಂಬಿದ.
  • ಕುಳಿಗಳಿರುವ; ಕುಹರಗಳಿಂದ ಕೂಡಿದ.

  • lacustrine
    ಗುಣವಾಚಕ
    (ಔಪಚಾರಿಕ) ಸಾರಸ:
  • ಸರೋವರಗಳ ಯಾ ಅವುಗಳಿಗೆ ಸಂಬಂಧಿಸಿದ.
  • ಸರೋವರದಲ್ಲಿ ಯಾ ಅದರ ಪಕ್ಕದಲ್ಲಿ ವಾಸಿಸುವ ಯಾ ಬೆಳೆಯುವ.

  • lacustrine age
    ನಾಮವಾಚಕ
    ಸರೋಗೃಹಯುಗ; ಕೆರೆ ಮನೆಗಳ ಯುಗ; ಸರೋವರದ ನೆಲದಲ್ಲಿ ಉದ್ದದ ದಸಿಗಳನ್ನು ನೆಟ್ಟು ಅವುಗಳ ಮೇಲೆ ಮನೆಕಟ್ಟಿ ವಾಸಿಸುತ್ತಿದ್ದ ಕಾಲ.


    logo