logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

idee recue
ನಾಮವಾಚಕ
ಸಾಮಾನ್ಯವಾಗಿ ಒಪ್ಪಿದ ಭಾವನೆ ಯಾ ಅಭಿಪ್ರಾಯ; ಸಮ್ಮತಾಭಿಪ್ರಾಯ.

idem
ನಾಮವಾಚಕ
ಪೂರ್ವೋಕ್ತ; ಅದೇ; ಅದೇ ಗ್ರಂಥಕರ್ತ ಯಾ ಪದ.

idem
ಕ್ರಿಯಾವಿಶೇಷಣ
ಅಲ್ಲೇ; ಪೂರ್ವೋಕ್ತ ಕೃತಿಯಲ್ಲೇ; ಅದೇ ಗ್ರಂಥದಲ್ಲೇ, ಗ್ರಂಥಕರ್ತನಲ್ಲೇ.

identic note
ನಾಮವಾಚಕ
(ಅಂತರರಾಷ್ಟ್ರೀಯ ವ್ಯವಹಾರ) ಏಕರೂಪನಿರೂಪ; ಹಲವು ರಾಷ್ಟ್ರಗಳು ತಮ್ಮ ತಮ್ಮ ಅಭಿಪ್ರಾಯವನ್ನು ಒಂದೇ ರೀತಿಯ ಒಕ್ಕಣೆಯಲ್ಲಿ ಬರೆದು ಮತ್ತೊಂದು ರಾಷ್ಟ್ರಕ್ಕೆ ಏಕಕಾಲದಲ್ಲಿ ಕಳುಹಿಸುವ ಪತ್ರ.

identical
ಗುಣವಾಚಕ
  • (ಬೇರೆ ಬೇರೆ ಕಾಲದಲ್ಲಿ ನೋಡಿದ ಒಂದೇ ವಸ್ತುವಿನ ವಿಷಯದಲ್ಲಿ) ಅದೇ ಆದ; ಅನನ್ಯ; ಅಭಿನ್ನವಾದ.
  • (ಬೇರೆ ಬೇರೆ ವಸ್ತುಗಳ ವಿಷಯದಲ್ಲಿ) ಒಂದೇ ವಿಧವಾದ; ಸರ್ವಾಂಗಸಮ; ತದ್ರೂಪವಾದ; ತದ್ವತ್ತಾದ; ಪ್ರತಿ ವಿವರದಲ್ಲೂ ಹೊಂದಿಕೆಯುಳ್ಳ.
  • (ಅವಳಿ ಮಕ್ಕಳ ವಿಷಯದಲ್ಲಿ) ಏಕಾಂಡಜ; ಒಂದೇ ಅಂಡದಿಂದ ಹುಟ್ಟಿದ; ಒಂದೇ ಲಿಂಗದವರಾದ, ಸಾಮಾನ್ಯವಾಗಿ ಬಹಳ ಹತ್ತಿರವಾಗಿ ಹೋಲುವ.
  • (ತರ್ಕಶಾಸ್ತ್ರ, ಗಣಿತ) ಅನನ್ಯತ್ವ ಪ್ರತಿಪಾದಕ; ಏಕತ್ವವನ್ನು ಹೇಳುವ, ನಿರೂಪಿಸುವ.

  • identical proposition
    ನಾಮವಾಚಕ
    ಸಾಮ್ಯಪದ ಪ್ರತಿಜ್ಞೆ; ಸಮಾರ್ಥಕಪದ – ಪ್ರತಿಜ್ಞೆ, ವಾಕ್ಯ; ಕರ್ತೃಪದವೂ, ವಿಧೇಯಪದವೂ ಒಂದೇ ಅರ್ಥಹೊಂದಿರುವ ಪ್ರತಿಜ್ಞಾವಾಕ್ಯ: that which is mortal is not immortal ಮರ್ತ್ಯವಾದದ್ದು ಅಮರ್ತ್ಯವಲ್ಲ.

    identically
    ಕ್ರಿಯಾವಿಶೇಷಣ
  • ಅದೇ ಆಗಿರುವಂತೆ; ಅನನ್ಯವಾಗಿ.
  • ತದ್ರೂಪವಾಗಿ; ತದ್ವತ್ತಾಗಿ; ಏಕರೀತಿಯಲ್ಲಿ.

  • identifiable
    ಗುಣವಾಚಕ
    ಗುರುತಿಸಲಾಗುವ; ಗುರುತಿಸಬಹುದಾದ.

    identification
    ನಾಮವಾಚಕ ಪದಗುಚ್ಛ
    ಗುರುತು ಹಿಡಿಯುವುದು; ಗುರುತಿಸುವುದು. identification card, disc, plate, etc. ಗುರುತಿನ ಕಾರ್ಡು, ಬಿಲ್ಲೆ, ಫಲಕ, ಮೊದಲಾದವು; ಹೆಸರು, ಸಂಖ್ಯೆ, ಮೊದಲಾದ ಚಿಹ್ನೆಗಳನ್ನು ಹೊಂದಿರುವ ಕಾರ್ಡು, ಬಿಲ್ಲೆ, ಫಲಕ, ಮೊದಲಾದವು.

    identification parade
    ನಾಮವಾಚಕ
    ಪತ್ತೆ ಪೆರೇಡು; ಸಂದೇಹಾಸ್ಪದ ವ್ಯಕ್ತಿಯನ್ನು ಪತ್ತೆಹಚ್ಚಲು ಮಾಡುವ ವ್ಯಕ್ತಿಗಳ ಪ್ರದರ್ಶನ.


    logo