(ಕುಸ್ತಿಯಲ್ಲಿ) ಚಿತ್ತು; ಪೀಟು; ಮಟ್ಟಿಬೆನ್ನು; ಬೆನ್ನು ನೆಲ ತಾಗುವುದು.
backfire
ಅಕರ್ಮಕ ಕ್ರಿಯಾಪದ
ಮುನ್‍ಸಿಡಿ; ಅಂತರ್ದಹನ ಯಂತ್ರದ ಉರುಳೆಯಲ್ಲಿ ಇಂಧನವು ಮುಂಚೆಯೇ ಹೊತ್ತಿಕೊಂಡು ಸಿಡಿ.
ಮಾರುರಿ ಇಡು; ಪ್ರತಿಬೆಂಕಿ ಹಚ್ಚಿಸು; ಕಾಳ್ಗಿಚ್ಚು ತಡೆಯಲು ಮುಂಭಾಗದಲ್ಲಿ ಮೊದಲೇ ಬೆಂಕಿ ಹಬ್ಬಿಸಿ ಬರಡು ಪ್ರದೇಶವನ್ನುಂಟು ಮಾಡು.
(ಬಂದೂಕಿನ ವಿಷಯದಲ್ಲಿ) ಹಿಂಹೊಡೆ; ಹಿಂಹಾರು; ಹಿಂದಕ್ಕೆ ಹೊಡೆ; ಗುಂಡು ನಳಿಗೆಯಿಂದ ಮುಂದಕ್ಕೆ ಹಾರುವ ಬದಲು ಹಿಡಿಯ ಕಡೆಗೆ ಹಾರು.
(ಯೋಜನೆ ಮೊದಲಾದವುಗಳ ವಿಷಯದಲ್ಲಿ, ಯೋಜಿಸಿದವನಿಗೇ) ತಿರುಗುಬಾಣವಾಗು; ತನ್ನ ಮೇಲೆಯೇ ತಿರುಗಿಬೀಳು; ನಿರೀಕ್ಷಿಸಿದ, ಉದ್ದೇಶಿಸಿದ ಪರಿಣಾಮಕ್ಕೆ ವಿರುದ್ಧವಾದ ಪರಿಣಾಮವಾಗು.
backfire
ನಾಮವಾಚಕ
(ಅಂತರ್ದಹನ ಯಂತ್ರದಲ್ಲಿ ಯಾ ವಾಹನದ ನಿಷ್ಕಾಸ ಕೊಳವೆಯಲ್ಲಿ) ಮುನ್‍ಸಿಡಿತ; ಮುನ್‍ಸ್ಫೋಟ.
(ಕಾಳ್ಗಿಚ್ಚಿಗೆ ವಿರುದ್ಧವಾದ) ಮಾರುರಿ; ಪ್ರತಿಬೆಂಕಿ.
(ಬಂದೂಕಿನ ವಿಷಯದಲ್ಲಿ, ಗೋಲಿಯ) ಹಿಂಹೊಡೆತ.
(ಯೋಜನೆ ಮೊದಲಾದವುಗಳ) ತಿರುಗುಬಾಣ; ವಿರುದ್ಧ ಪರಿಣಾಮ.
backgammon
ನಾಮವಾಚಕ
ಬ್ಯಾಕ್‍ಗ್ಯಾಮನ್; ಒಂದು ಬಗೆಯ ಪಗಡೆ ಆಟ; ಜೊತೆಗೂಡಿಸಿದ ಎರಡು ಹಾಸುಮಣೆಗಳ ಮೇಲೆ ಕಾಯಿಗಳನ್ನಿಟ್ಟುಕೊಂಡು, ದಾಳಗಳಿಂದ ಇಬ್ಬರು ಆಡುವ ಪಂದ್ಯ.
ಆ ಆಟದಲ್ಲಿನ ಮುಮ್ಮಡಿ ಜಯ, ಪೂರ್ಣ ಗೆಲುವು.
backgammon
ಅಕರ್ಮಕ ಕ್ರಿಯಾಪದ
(ಬ್ಯಾಕ್‍ಗ್ಯಾಮನ್ ಆಟದಲ್ಲಿ) ಪೂರ್ಣ ಗೆಲ್ಲು; ಮುಮ್ಮಡಿ ಜಯ ಹೊಂದು.
background
ನಾಮವಾಚಕ
(ದೃಶ್ಯ, ಚಿತ್ರ ಯಾ ವಿವರಣೆಗಳಿಂದ ಕೂಡಿದ) ಹಿನ್ನೆಲೆ.
ಹಿಂಭಾಗ; ಮರೆ; ಅಜ್ಞಾತ ಸ್ಥಿತಿ; ಅಮುಖ್ಯ ಸ್ಥಾನ: he was pushed into the background by the brilliance of his rival ಅವನ ಎದುರಾಳಿಯ ಪ್ರತಿಭೆಯಿಂದ ಅವನು ಮರೆಗೆ, ಅಜ್ಞಾತ ಸ್ಥಿತಿಗೆ ನೂಕಲ್ಪಟ್ಟನು.
(ರೂಪಕವಾಗಿ) ಸಾಂಸ್ಕೃತಿಕ ಹಿನ್ನೆಲೆ; (ಪೂರ್ವ) ಸಂಸ್ಕಾರ; ಯಾವುದೇ ವ್ಯಕ್ತಿಯ ಈಗಿನ ಸ್ಥಾನಮಾನಕ್ಕೆ, ನಡತೆಗೆ ಕಾರಣವಾದ ಹುಟ್ಟು, ವಿದ್ಯಾಭ್ಯಾಸ, ಸಂಸ್ಕೃತಿ, ಅನುಭವ ಮೊದಲಾದವು.
(ಭೌತವಿಜ್ಞಾನ) ಆಚ್ಛಾದಕ; ಯಾವುದೇ ಘಟನೆಯನ್ನು ಗುರುತಿಸಲು ಅಡಚಣೆ ಒಡ್ಡುವ ವಿದ್ಯಮಾನಗಳು.
(ಭೌತವಿಜ್ಞಾನ) ಹಿನ್ನೆಲೆ (ವಿಕಿರಣ); ಕಾಸ್ಮಿಕ್ ಕಿರಣಗಳು ಮತ್ತು ಸ್ವಾಭಾವಿಕ ಮೂಲಗಳಿಂದ ಹೊಮ್ಮುತ್ತಿರುವ, ಹೆಚ್ಚು ಕಡಮೆ ಸ್ಥಿರವಾಗಿರುವ ವಿಕಿರಣ.
(ರೇಡಿಯೋ) ಹಿಂಬದಿ ಸಂಕೇತ; ರೇಡಿಯೋ ಗ್ರಹಣ, ಮುದ್ರಣ, ಮೊದಲಾದವುಗಳಲ್ಲಿ ಮಧ್ಯೆ ಬಂದು ಇಲೆಕ್ಟ್ರಾನಿಕ್ ಸಂಕೇತಗಳನ್ನು ವಿರೂಪಗೊಳಿಸುವ ಯಾ ಅಸ್ತವ್ಯಸ್ತಗೊಳಿಸುವ ಅನಿರೀಕ್ಷಿತ ಸಂಕೇತಗಳು.
= background music.
background heating
ನಾಮವಾಚಕ
ಹಿನ್ನೆಲೆ ತಾಪನ; ಕೋಣೆಯು ಬೆಚ್ಚಗಿರುವಂತೆ ಹಿನ್ನೆಲೆಯಲ್ಲಿರುವ ತಾಪಕವು ನಿರಂತರವಾಗಿ ಶಾಖವನ್ನು ಒದಗಿಸುವುದು.
background music
ನಾಮವಾಚಕ
ಹಿನ್ನೆಲೆಸಂಗೀತ:
ಸಿನಿಮಾ, ರೇಡಿಯೋ, ದೂರದರ್ಶನ, ನಾಟಕ, ಮೊದಲಾದವುಗಳಲ್ಲಿ ನರ್ತನ ಹಾಡುಗಳನ್ನು ಬಿಟ್ಟು ಯಾವುದೇ ಕ್ರಿಯೆ ಯಾ ಸಂಭಾಷಣೆ ನಡೆಯುವಾಗ, ಆ ಸನ್ನಿವೇಶದ ಭಾವವನ್ನು ಹೆಚ್ಚಿಸಲು, ವಿಶೇಷವಾಗಿ ಅದಕ್ಕಾಗಿಯೇ ರಚಿಸಿದ ಸಂಗೀತ.
ರೈಲ್ವೆ ಸ್ಟೇಷನ್, ಹೋಟೆಲ್, ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿ ಹಿತವಾದ ಹಿನ್ನೆಲೆಯನ್ನೊದಗಿಸಲು ಧ್ವನಿವರ್ಧಕಗಳ ಮೂಲಕ ನೀಡುವ, ಸಾಮಾನ್ಯವಾಗಿ ರೆಕಾರ್ಡ್ ಮಾಡಿದ, ಸಂಗೀತ.