logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inflater
ನಾಮವಾಚಕ
= inflator.

inflation
ನಾಮವಾಚಕ
  • (ಗಾಳಿ ಯಾ ಅನಿಲ ತುಂಬಿ) ಉಬ್ಬಿಸುವುದು; ಉಬ್ಬಿಸಿಕೆ; ಹಿಗ್ಗಿಸುವುದು; ಊದಿಸುವುದು.
  • (ಗಾಳಿ ಯಾ ಅನಿಲ ತುಂಬಿ) ಉಬ್ಬಿದ ಸ್ಥಿತಿ.
  • (ವ್ಯಕ್ತಿಯನ್ನು, ಹೆಮ್ಮೆ ಮೊದಲಾದವುಗಳಿಂದ) ಉಬ್ಬಿಸುವುದು; ಬೀಗಿಸುವುದು.
  • (ಅರ್ಥಶಾಸ್ತ್ರ) ಹಣದುಬ್ಬರ:
    1. ಪದಾರ್ಥಗಳ ಬೆಲೆ ಏರಿ, ಹಣದ ಕೊಳ್ಳುವ ಮೌಲ್ಯ ಕುಸಿಯುವುದು.
    2. ಹಣದ ಅತಿ ಪ್ರಸರಣ; ಹಣದ ಕೊಳ್ಳುವ ಮೌಲ್ಯ ಕುಸಿಯುವಂತೆ ಲಭ್ಯವಾಗಿರುವ ಹಣದ ಪ್ರಮಾಣ, ಮೊತ್ತ ಹೆಚ್ಚುವುದು.

  • inflationary
    ಗುಣವಾಚಕ
    ಹಣದುಬ್ಬರದ; ಅತಿಪ್ರಸರಣದ.

    inflator
    ನಾಮವಾಚಕ
    ವಾಯುಪೂರಕ; ಗಾಳಿ ಗಿಡಕ.

    inflect
    ಸಕರ್ಮಕ ಕ್ರಿಯಾಪದ
  • ಒಳಗಡೆಗೆ – ಬಾಗಿಸು, ಕೊಂಕಿಸು.
  • (ವ್ಯಾಕರಣ) (ವ್ಯಾಕರಣದ ಸಂಬಂಧವನ್ನು ತೋರಿಸಲು ವಿಭಕ್ತಿ ಇಲ್ಲವೆ ಆಖ್ಯಾತ ಪ್ರತ್ಯಯಗಳನ್ನು ಹಚ್ಚಿ) ರೂಪನಿಷ್ಪತ್ತಿಮಾಡು; ವಿಭಕ್ತಿ ಇಲ್ಲವೆ ಆಖ್ಯಾತ ರೂಪಗಳನ್ನು ನಡೆಸು.
  • (ಸಂಗೀತ) (ಸ್ವರವನ್ನು) ತಗ್ಗಿಸು ಯಾ ಏರಿಸು; ಸ್ಥಾಯಿ ಬದಲಾಯಿಸು.

  • inflection
    ನಾಮವಾಚಕ
    = inflexion.

    inflective
    ಗುಣವಾಚಕ
    (ವ್ಯಾಕರಣ) ರೂಪ ನಿಷ್ಪತ್ತಿಯ.

    inflexibility
    ನಾಮವಾಚಕ
  • ಅನಮ್ಯತೆ; ಬಗ್ಗಿಸಲಾಗದ ಸ್ವಭಾವ.
  • (ರೂಪಕವಾಗಿ) ಅನಮ್ಯತೆ, ಬಗ್ಗದ, ಜಗ್ಗದ, ಸಗ್ಗದ – ಸ್ವಭಾವ.

  • inflexible
    ಗುಣವಾಚಕ
  • ಅನಮ್ಯ; ಬಗ್ಗಿಸಲಾಗದ.
  • (ರೂಪಕವಾಗಿ) ಬಗ್ಗದ; ಜಗ್ಗದ; ಸಗ್ಗದ; ಅನಮ್ಯ; ಹಟಮಾರಿತನದ: old and inflexible in his attitudes ವಯಸ್ಸಾಗಿ, ಹಟಮಾರಿ ಧೋರಣೆಯಿರುವ.
  • ಬದಲಾಯಿಸಲಾಗದ.

  • inflexibly
    ಕ್ರಿಯಾವಿಶೇಷಣ
  • ಬಾಗದಂತೆ; ಅನಮ್ಯವಾಗಿ.
  • (ರೂಪಕವಾಗಿ) ಬಗ್ಗದಂತೆ; ಜಗ್ಗದಂತೆ; ಸಗ್ಗದಂತೆ; ಅನಮ್ಯವಾಗಿ.


  • logo