logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inflammability
ನಾಮವಾಚಕ
  • ದಹನಶೀಲತೆ; ಜ್ವಲನಶೀಲತೆ; ಸುಲಭವಾಗಿ ಹೊತ್ತಿಕೊಳ್ಳುವ, ಉರಿ ಏಳುವ – ಸ್ವಭಾವ.
  • ಕೆರಳುವ, ರೇಗಿಬೀಳುವ, ಉದ್ರೇಕಗೊಳ್ಳುವ – ಸ್ವಭಾವ.

  • inflammable
    ಗುಣವಾಚಕ
  • ಸುಲಭವಾಗಿ – ಹೊತ್ತಿಕೊಳ್ಳುವ, ಉರಿ ಏಳುವ.
  • ಸುಲಭವಾಗಿ – ಕೆರಳುವ, ಉದ್ರೇಕಗೊಳ್ಳುವ, ರೇಗಿಬೀಳುವ.

  • inflammable
    ನಾಮವಾಚಕ
    (ಸಾಮಾನ್ಯವಾಗಿ ಬಹುವಚನದಲ್ಲಿ) ಸುದಾಹ್ಯ; ಸುಲಭದಾಹ್ಯ; ದಾಹ್ಯ; ದಹನಶೀಲ; ಬಹುಬೇಗ ಹೊತ್ತಿಕೊಳ್ಳುವ, ಉರಿ ಏಳುವ – ವಸ್ತು.

    inflammableness
    ನಾಮವಾಚಕ
    = inflammability.

    inflammation
    ನಾಮವಾಚಕ
  • ಉರಿ, ಜ್ವಾಲೆ – ಎಬ್ಬಿಸುವುದು ಯಾ ಏಳುವುದು.
  • (ರೂಪಕವಾಗಿ) ಕೆರಳಿಸುವುದು; ರೇಗಿಸುವುದು; ಉದ್ರೇಕಿಸುವುದು.
  • ಕೆರಳುವುದು; ರೇಗುವುದು; ಉದ್ರೇಕಗೊಳ್ಳುವುದು.
  • (ರೋಗಶಾಸ್ತ್ರ) ಉರಿಯೂತ; ಮೈಯ ಯಾವುದೇ ಭಾಗದಲ್ಲಿ, ಮುಖ್ಯವಾಗಿ ಪೆಟ್ಟು ಯಾ ಸೋಂಕಿನಿಂದ ರಕ್ತಕಟ್ಟಿ ಅದರಿಂದಾಗುವ, ನೋವು ಉರಿಗಳಿಂದ ಕೂಡಿದ ಊತ.

  • inflammatory
    ಗುಣವಾಚಕ
  • (ಮುಖ್ಯವಾಗಿ ಭಾಷಣ, ಕರಪತ್ರ, ಮೊದಲಾದವುಗಳ ವಿಷಯದಲ್ಲಿ) ಪ್ರಚೋದಕ; (ಕೋಪ ಮೊದಲಾದವನ್ನು) ಕೆರಳಿಸುವ.
  • ಮೈಯಲ್ಲಿ ಉರಿಯೂತ ಉಂಟುಮಾಡುವ; ಮೈಯನ್ನು ಕೆರಳಿಸುವ.

  • inflatable
    ಗುಣವಾಚಕ
    ಊದಬಹುದಾದ; ಗಾಳಿ ತುಂಬಬಹುದಾದ; ಊದಿ ಉಬ್ಬಿಸಬಹುದಾದ.

    inflatable
    ನಾಮವಾಚಕ
    ಊದಿ ಉಬ್ಬಿಸಬಹುದಾದ ಪ್ಲಾಸ್ಟಿಕ್ಕಿನ ಯಾ ರಬ್ಬರಿನ ವಸ್ತು.

    inflate
    ಸಕರ್ಮಕ ಕ್ರಿಯಾಪದ
  • (ಗಾಳಿ ಯಾ ಅನಿಲ ತುಂಬಿ) (ಬಲೂನು ಮೊದಲಾದವನ್ನು) ಉಬ್ಬಿಸು; ಹಿಗ್ಗಿಸು; ಊದಿಸು.
  • (ವ್ಯಕ್ತಿಯನ್ನು, ಹೆಮ್ಮೆ ಮೊದಲಾದವುಗಳಿಂದ) ಉಬ್ಬಿಸು; ಬೀಗಿಸು.
  • (ಅರ್ಥಶಾಸ್ತ್ರ) ಹಣದುಬ್ಬರ ಉಂಟುಮಾಡು; ಹಣದ ಚಲಾವಣೆ ಹೆಚ್ಚಿಸಿ ಅದರ ಬೆಲೆ ಕುಗ್ಗಿಸು.
  • (ಅರ್ಥಶಾಸ್ತ್ರ) ಬೆಲೆಯೇರಿಸು; ಕೃತಕವಾಗಿ ವಸ್ತುಗಳ ಬೆಲೆ ಏರುವಂತೆ ಮಾಡು.

  • inflated
    ಗುಣವಾಚಕ
    (ಭಾಷೆಯ ವಿಷಯದಲ್ಲಿ) ಬೊಜ್ಜು; ಉಬ್ಬಟೆಯ; ಆಡಂಬರದ; ಆರ್ಭಟದ.


    logo