logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

infinity
ನಾಮವಾಚಕ
  • = infinitude.
  • (ಗಣಿತ) ಅನಂತ (ಪರಿಮಾಣ); ಯಾವ ಸಂಖ್ಯೆಯನ್ನು ಹೆಸರಿಸಿದರೂ ಅದಕ್ಕಿಂತ ದೊಡ್ಡದಾದುದು ಯಾ ಯಾವ ದೂರವನ್ನು ತೆಗೆದುಕೊಂಡರೂ ಅದಕ್ಕಿಂತ ದೂರವಾದುದು (ಸಂಕೇತ $\infty$).
  • ಅನಂತತೆ; ಅನಂತ ದೂರ.

  • infirm
    ಗುಣವಾಚಕ
  • (ಮುಖ್ಯವಾಗಿ ಮುಪ್ಪಿನಿಂದ) ನಿತ್ರಾಣವಾದ; ಅಶಕ್ತವಾದ; ಕ್ಷೀಣವಾದ; ಶಿಥಿಲವಾದ; ಜರ್ಜರಿತವಾದ; ದೇಹದ ಬಲ ಕುಗ್ಗಿದ; ದೇಹದಾರ್ಢ್ಯ ತಗ್ಗಿದ; ಶಾರೀರಕಶಕ್ತಿಯುಡುಗಿದ.
  • (ಮನುಷ್ಯ, ಮನಸ್ಸು, ನಿರ್ಣಯ ಶಕ್ತಿ, ಮೊದಲಾದವುಗಳ ವಿಷಯದಲ್ಲಿ) ದುರ್ಬಲವಾದ; ಅದೃಢ; ಅಸ್ಥಿರ; ಕ್ಷೀಣಸಂಕಲ್ಪದ: infirm of purpose ಸ್ಥಿರಸಂಕಲ್ಪವಿಲ್ಲದ; ಚಂಚಲಮನಸ್ಸಿನ; ಅಸ್ಥಿರ ಸಂಕಲ್ಪದ.

  • infirmarian
    ನಾಮವಾಚಕ
    (ಮುಖ್ಯವಾಗಿ ಕ್ರೈಸ್ತಸಂನ್ಯಾಸಿ ಮಠದ) ಚಿಕಿತ್ಸಾಲಯದ ಅಧಿಕಾರಿ.

    infirmary
    ನಾಮವಾಚಕ
  • ಚಿಕಿತ್ಸಾಲಯ; ಆಸ್ಪತ್ರೆ; ರುಗ್ಣಾಲಯ.
  • (ಶಾಲೆ, ನಿರಾಶ್ರಿತರ ಕಾರ್ಯಗೃಹ, ಮೊದಲಾದವುಗಳಲ್ಲಿ) ರೋಗಿಗಳ ಕೊಠಡಿ, ವಠಾರ.

  • infirmity
    ನಾಮವಾಚಕ
  • (ಮುಖ್ಯವಾಗಿ ಮುಪ್ಪಿನಿಂದಾದ) ದೇಹದೌರ್ಬಲ್ಯ; ದೇಹದ ಬಲ ಕುಗ್ಗಿರುವಿಕೆ; ದೇಹದಾರ್ಢ್ಯ ತಗ್ಗಿರುವಿಕೆ; ಶಾರೀರಕಶಕ್ತಿ ಉಡುಗಿರುವಿಕೆ.
  • (ಮನುಷ್ಯ, ಮನಸ್ಸು, ನಿರ್ಣಯಶಕ್ತಿ, ಮೊದಲಾದವುಗಳ ವಿಷಯದಲ್ಲಿ) ದೌರ್ಬಲ್ಯ; ಶೈಥಿಲ್ಯ; ಅದೃಢತೆ; ಅಸ್ಥಿರತೆ; ಸಂಕಲ್ಪಹೀನತೆ.

  • infirmly
    ಕ್ರಿಯಾವಿಶೇಷಣ
  • ದುರ್ಬಲವಾಗಿ; ಕ್ಷೀಣವಾಗಿ.
  • ಅದೃಢವಾಗಿ; ಅಸ್ಥಿರವಾಗಿ.

  • infix
    ಸಕರ್ಮಕ ಕ್ರಿಯಾಪದ
  • (ಒಂದು ವಸ್ತುವನ್ನು ಇನ್ನೊಂದರೊಳಗೆ ಬಿಗಿಯಾಗಿ) ಸೇರಿಸು; ಕೂರಿಸು; ಕೂಡಿಸು; ಇಡು; ಹದಿ; ಮೆಟ್ಟು; ಬಂಧಿಸು.
  • (ಸಂಗತಿ ಮೊದಲಾದವನ್ನು ಮನಸ್ಸಿನಲ್ಲಿ) ನಾಟು; ನೆಡು; ಅಚ್ಚೊತ್ತು.
  • (ವ್ಯಾಕರಣ) ಪದದ ಒಡಲಲ್ಲಿ ಪ್ರತ್ಯಯವನ್ನು ಸೇರಿಸು; ಪದಮಧ್ಯದಲ್ಲಿ ಪ್ರತ್ಯಯ ಸೇರಿಸು.

  • infix
    ನಾಮವಾಚಕ
    ಮಧ್ಯಪ್ರತ್ಯಯ; ಪದದ ಒಡಲಲ್ಲಿ ಸೇರುವ ಪ್ರತ್ಯಯ.

    infixation
    ನಾಮವಾಚಕ
    (ವ್ಯಾಕರಣ)
  • ಮಧ್ಯಪ್ರತ್ಯಯ ಸೇರಿಸುವಿಕೆ.
  • ಮಧ್ಯಪ್ರತ್ಯಯ ಸೇರಿಸಿರುವ ಸ್ಥಿತಿ.

  • inflame
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • ಉರಿ, ಜ್ವಾಲೆ – ಎಬ್ಬಿಸು; (ಉರಿ) ಹೊತ್ತಿಸು; ಕಿಚ್ಚೆಬ್ಬಿಸು.
  • (ಉರಿಯಿಂದಲೋ ಎಂಬಂತೆ) ಬೆಳಗಿಸು; ಉಜ್ವಲಿಸುವಂತೆ ಮಾಡು; ಉಜ್ವಲಗೊಳಿಸು.
  • ಕೆರಳಿಸು; ಉದ್ರೇಕಿಸು; ಉದ್ದೀಪಿಸು; ಪ್ರಚಂಡ ಭಾವೋದ್ವೇಗ ಉಂಟುಮಾಡು.
  • (ಮೈ, ರಕ್ತ, ಮೊದಲಾದವನ್ನು ಜ್ವರ ಬಂದಂತೆ) ಕಾವೇರಿಸು; ತಾಪಗೊಳಿಸು.
  • (ಉಗ್ರ ಪರಿಸ್ಥಿತಿಯನ್ನು) ಇನ್ನೂ ಉಗ್ರಗೊಳಿಸು; ಉಲ್ಬಣಗೊಳಿಸು; ಉರಿಯುವ ಬೆಂಕಿಗೆ ತುಪ್ಪ ಹೊಯ್ಯು.


  • logo