logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

infinite series
ನಾಮವಾಚಕ
(ಗಣಿತ) ಅನಂತ ಶ್ರೇಣಿ; ಒಂದು ಗಣಿತ ನಿಯಮದ ಪ್ರಕಾರ ಒಂದಾದ ಮೇಲೊಂದರಂತೆ ಕೊನೆ ಇಲ್ಲದೆ ಬರುವ ಪದಗಳ ಸರಣಿ (ಉದಾಹರಣೆಗೆ $1/2+1/4+1/8+1/16+\ldots$).

infinitely
ಕ್ರಿಯಾವಿಶೇಷಣ
ಎಲ್ಲೆಯಿಲ್ಲದೆ; ಅಪಾರವಾಗಿ; ಕೊನೆಯಿಲ್ಲದೆ.

infinitesimal
ಗುಣವಾಚಕ
ಅತ್ಯಲ್ಪ; ಅತ್ಯಂತ ಸೂಕ್ಷ್ಮ; ಅನಂತ ಸೂಕ್ಷ್ಮ; ಸೂಕ್ಷ್ಮಾತಿ ಸೂಕ್ಷ್ಮ.

infinitesimal
ನಾಮವಾಚಕ
ಅತ್ಯಲ್ಪ; ಅನಂತಸೂಕ್ಷ್ಮ; ಅತ್ಯಲ್ಪ ಮೊತ್ತ ಯಾ ಪ್ರಮಾಣ; ಸೂಕ್ಷ್ಮಾತಿಸೂಕ್ಷ್ಮವಾದದ್ದು.

infinitesimal calculus
ನಾಮವಾಚಕ
(ಗಣಿತ) ಅನಂತ ಸೂಕ್ಷ್ಮ ಕಲನಶಾಸ್ತ್ರ; ವಿಕಲನಶಾಸ್ತ್ರ ಮತ್ತು ಅನುಕಲನ ಶಾಸ್ತ್ರ.

infinitesimally
ಕ್ರಿಯಾವಿಶೇಷಣ
ಅತ್ಯಲ್ಪವಾಗಿ; ಸೂಕ್ಷ್ಮಾತಿಸೂಕ್ಷ್ಮವಾಗಿ.

infinitival
ಗುಣವಾಚಕ
(ವ್ಯಾಕರಣ) ಧಾತ್ವರ್ಥವಾಚಿಯ.

infinitive
ಗುಣವಾಚಕ
(ವ್ಯಾಕರಣ) ಧಾತ್ವರ್ಥವಾಚಿಯ; ಕರ್ತೃ, ಕಾಲ, ವಚನ – ಇವುಗಳ ಯಾವ ನಿರ್ದೇಶವೂ ಇಲ್ಲದೆ ಕೇವಲ ಕ್ರಿಯಾರ್ಥವನ್ನು ಸೂಚಿಸುವ ಧಾತುರೂಪದ.

infinitive
ನಾಮವಾಚಕ
(ವ್ಯಾಕರಣ) ಧಾತ್ವರ್ಥವಾಚಿ; ಕರ್ತೃ, ಪುರುಷ, ಕಾಲ, ವಚನ – ಇವುಗಳ ಯಾವ ನಿರ್ದೇಶವೂ ಇಲ್ಲದೆ ಕೇವಲ ಕ್ರಿಯಾರ್ಥವನ್ನು ಸೂಚಿಸುವ ಧಾತುರೂಪ, ಉದಾಹರಣೆಗೆ to see, to go.

infinitude
ನಾಮವಾಚಕ
  • ಅಪರಿಮಿತತೆ; ಅಪಾರತೆ; ಅನಂತತೆ; ಅಸೀಮತೆ; ಎಲ್ಲೆಯಿಲ್ಲದಿರುವಿಕೆ; ಕೊನೆಯಿಲ್ಲದಿರುವಿಕೆ; ಪಾರವಿಲ್ಲದಿರುವಿಕೆ.
  • ಅಪಾರ ವಿಸ್ತಾರ ಯಾ ಸಂಖ್ಯೆ.


  • logo