(ಮುಖ್ಯವಾಗಿ ಸೈನ್ಯ, ರಾಜಕೀಯ – ಇವುಗಳ ವಿಷಯದಲ್ಲಿ) ಅಂತರಾಕ್ರಮಣ; ರಹಸ್ಯಾಕ್ರಮಣ; ಒಳನುಸುಳುವುದು; ಬಿಡಿಬಿಡಿ ತಂಡಗಳು ಯಾ ನೆಲಸಿಗರು ಕ್ರಮೇಣ ಅಗೋಚರವಾಗಿ ಒಂದು ಕ್ಷೇತ್ರವನ್ನು ವ್ಯಾಪಿಸಿಕೊಳ್ಳುವುದು, ಆಕ್ರಮಿಸಿಕೊಳ್ಳುವುದು.
ಒಳಹರಡುವಿಕೆ; ಅಂತರ್ವ್ಯಾಪನ; ಒಳವ್ಯಾಪಿಸುವಿಕೆ; ಸೋಸಿಕೊಂಡು ಒಳಗೆ ಹರಡುವುದು.
(ವ್ಯಾಕರಣ, ಕ್ರಿಯಾರೂಪಗಳ ವಿಷಯದಲ್ಲಿ) ಅನಿರ್ದಿಷ್ಟ; ಪುರುಷ ಮತ್ತು ವಚನಗಳಿಂದ ನಿರ್ದಿಷ್ಟವಾಗಿಲ್ಲದ, ಬದ್ಧವಾಗಿಲ್ಲದ, ಪರಿಮಿತಗೊಂಡಿಲ್ಲದ, ಉದಾಹರಣೆಗೆ ಧಾತ್ವರ್ಥವಾಚಿ, ಕೃದಂತ, ಮೊದಲಾದವು.