(ಬ್ರಿಟಿಷ್ ಪ್ರಯೋಗ) (ಚರಿತ್ರೆ) ಊಳಿಗಮಾನ್ಯತೆ; ಸೈನಿಕ ಸಹಾಯ ಯಾ ಬೇರೆ ಸಹಾಯ ಒದಗಿಸುವ ಷರತ್ತಿನ ಮೇಲೆ (ಒಬ್ಬನಿಗೆ) ಉಂಬಳಿ, ಮಾನ್ಯ, ಮೊದಲಾದವನ್ನು ಕೊಡುವುದು. infeudation of tithes (ಕ್ರೈಸ್ತ ಪಾದ್ರಿಗಳಲ್ಲದ) ಲೌಕಿಕರಿಗೆ ದಶಾಂಶ ತೆರಿಗೆಯ ಹಕ್ಕು ಕೊಡುವುದು.
infidel
ನಾಮವಾಚಕ
ನಾಸ್ತಿಕ; ಧರ್ಮದಲ್ಲಿ ನಂಬಿಕೆ ಇಲ್ಲದವನು.
(ಚರಿತ್ರೆ) ವಿಧರ್ಮಿ; ಕ್ರೈಸ್ತಮತಕ್ಕೆ ವಿರುದ್ಧವಾದ ಮತದವನು (ಮುಖ್ಯವಾಗಿ ಮುಸ್ಲಿಮ).
(ಯೆಹೂದ್ಯರ ಯಾ ಮುಸಲ್ಮಾನರ ದೃಷ್ಟಿಯಲ್ಲಿ) ಕಾಫಿರ; ಯೆಹೂದ್ಯರ ಯಾ ಮುಸಲ್ಮಾನರ ನಿಜವಾದ ಮತದಲ್ಲಿ ನಂಬಿಕೆಯಿಲ್ಲದವನು.
(ಸಾಮಾನ್ಯವಾಗಿ ದೇವರು, ಮತ, ತತ್ತ್ವ, ಮೊದಲಾದವುಗಳಲ್ಲಿ) ಅಶ್ರದ್ಧಾಲು; ನಂಬಿಕೆಯಿಲ್ಲದವನು; ಅವಿಶ್ವಾಸಿ; ಶ್ರದ್ಧೆಯಿಲ್ಲದವನು.
infidel
ಗುಣವಾಚಕ
ನಾಸ್ತಿಕವಾದ; ನಾಸ್ತಿಕತನದ.
ನಾಸ್ತಿಕರ.
infidelity
ನಾಮವಾಚಕ
ಪದಗುಚ್ಛ
conjugal infidelity = infidelity(3).
ನಾಸ್ತಿಕತೆ; ಕ್ರೈಸ್ತಧರ್ಮದಲ್ಲಿ ಯಾ ಇತರ ಧರ್ಮದಲ್ಲಿ ನಂಬಿಕೆ ಇಲ್ಲದಿರುವುದು.