(ಮುದ್ರಣ) ಅಕ್ಷರದಡಿಯ; ಅಕ್ಷರಾಧದ; ಅಕ್ಷರಗಳ ಕೆಳಗಡೆ ಯಾ ಸಾಲಿನ ಕೆಳಗೆ ಅಚ್ಚು ಮಾಡಿದ, ಉದಾಹರಣೆಗೆ ${\rm H}_2, {\rm C}_{\rm n}$, ಮೊದಲಾದವು.
inferior
ನಾಮವಾಚಕ
(ಮುಖ್ಯವಾಗಿ ದರ್ಜೆಯಲ್ಲಿ) ಕೆಳಗಿನವನು; ಅವರ; ಕಡಮೆ ಅಂತಸ್ತಿನವನು: kind to inferiors ಕೆಳಗಿನವರ ವಿಷಯದಲ್ಲಿ ದಯಾಳುವಾದ.
(ಮುದ್ರಣ) ಕೆಳಗಿನ ಅಕ್ಷರ ಯಾ ಸಂಖ್ಯೆ; ಸಾಲಿನ ಕೆಳಗಣ ಅಕ್ಷರ ಯಾ ಸಂಖ್ಯೆ.
inferiority
ನಾಮವಾಚಕ
(ಗುಣ ಯಾ ಸ್ಥಿತಿಯಲ್ಲಿ)
ಕಡಮೆಯಾಗಿರುವಿಕೆ; ಕೆಳಮಟ್ಟದ್ದಾಗಿರುವಿಕೆ.
ಕೀಳಾಗಿರುವಿಕೆ; ಕೀಳುಮಟ್ಟದ್ದಾಗಿರುವಿಕೆ; ನಿಕೃಷ್ಟತೆ.
inferiority complex
ನಾಮವಾಚಕ
ಕೀಳರಿಮೆ; ನೈಚ್ಯಭಾವ; ಹೀನಂಮನ್ಯತೆ; ಸ್ವಹೀನತಾ ವಿಕಾರ; ನೀಚೋಹಂ ಭಾವನೆ; ತಾನು ಕೀಳು ಎಂಬ ಭಾವನೆಯನ್ನು ಅದುಮಿಟ್ಟಿದ್ದರಿಂದ ಉಂಟಾಗುವ ಆತ್ಮಸಮರ್ಥನ, ಸ್ವಗುಣದ ಯಾ ಸ್ವಮಹಿಮೆಯ ಕಥನ, ಮೊದಲಾದ ಅಸಹಜ ಪ್ರತಿಕ್ರಿಯೆಗಳು.
inferiorly
ಕ್ರಿಯಾವಿಶೇಷಣ
(ದರ್ಜೆ, ಅಂತಸ್ತು, ಮೊದಲಾದವುಗಳಲ್ಲಿ) ಕೆಳಗೆ.
ಕೆಟ್ಟದಾಗಿ; ಉನ್ನತ ಮಟ್ಟದಲ್ಲಿಲ್ಲದೆ; ನಿಕೃಷ್ಟವಾಗಿ.
infernal
ಗುಣವಾಚಕ
ಪದಗುಚ್ಛ
infernal machine (ಪ್ರಾಚೀನ ಪ್ರಯೋಗ) ವಿಧ್ವಂಸಕ (ಯಂತ್ರ); ಸಿಡಿದು ಜೀವ, ಆಸ್ತಿಪಾಸ್ತಿ, ಮೊದಲಾದವನ್ನು ನಾಶಮಾಡಲು ನಿರ್ಮಿಸಿದ (ಸಾಮಾನ್ಯವಾಗಿ ಅದರ ಸ್ವರೂಪ ಮರೆಮಾಡಿದ) ಸಲಕರಣೆ, ಸಾಧನ.