(ರೂಪಕವಾಗಿ) ನಿಜ ನಂಬದವ; ವಾಸ್ತವಿಕ ಸಂಗತಿಗಳನ್ನು ಒಪ್ಪಿಕೊಳ್ಳಲು ನಿರಾಕರಿಸುವವ.
ostrich-farm
ನಾಮವಾಚಕ
(ಅವುಗಳ ಅಮೂಲ್ಯ ಗರಿಗಳಿಗಾಗಿ) ಉಷ್ಟ್ರಪಕ್ಷಿಗಳನ್ನು ಸಾಕುವ ಕ್ಷೇತ್ರ; ಬೆಂಕಿಕೋಳಿ ಹಾರಂ.
ostrich-plume
ನಾಮವಾಚಕ
ಉಷ್ಟ್ರ ಪಕ್ಷಿಯ ಗರಿ ಯಾ ಗರಿಗಳ ಗೊಂಚಲು, ತುರಾಯಿ.
ostrich-tip
ನಾಮವಾಚಕ
ಉಷ್ಟ್ರಪಕ್ಷಿಯ ಗರಿಯ ತುದಿ.
Ostrogoth
ನಾಮವಾಚಕ
(ಚರಿತ್ರೆ) ಆಸ್ಟ್ರೊಗಾತ್; ಸುಮಾರು 5–6ನೆಯ ಶತಮಾನದಲ್ಲಿ ಇಟಲಿಯನ್ನು ಜಯಿಸಿದ ‘ಗಾತ್’ ಜನರ ಪೂರ್ವ ಶಾಖೆಯ ಸದಸ್ಯ.
Ostrogothic
ಗುಣವಾಚಕ
(ಚರಿತ್ರೆ) ಆಸ್ಟ್ರೊಗಾತ್‍ನ ಯಾ ಅವರಿಗೆ ಸಂಬಂಧಿಸಿದ.
OT
ಸಂಕ್ಷಿಪ್ತ
Old Testament.
otary
ನಾಮವಾಚಕ
ಕಿವಿಯುಳ್ಳ ನೀರುನಾಯಿ.
OTC
ಸಂಕ್ಷಿಪ್ತ
(United Kingdom) Officers’ Training Crops.
other
ಗುಣವಾಚಕ
ಪದಗುಚ್ಛ
ಬೇರೊಬ್ಬ ಯಾ ಬೇರೊಂದು; ಇನ್ನೊಂದು ಯಾ ಇನ್ನೊಬ್ಬ; ಮತ್ತೊಂದು ಯಾ ಮತ್ತೊಬ್ಬ; ಅನ್ಯ; ಇತರ; ಪರ; ಬೇರೆ; ಈಗಾಗಲೇ ಹೇಳಿದ್ದಲ್ಲದ ಯಾ ಸೂಚಿಸಿದ್ದಲ್ಲದ; ವ್ಯಕ್ತಿ ಯಾ ಜಾತಿಯಲ್ಲಿ ಭಿನ್ನವಾದ: other people ಬೇರೆಯವರು; ಇತರ ಜನ. other means ಬೇರೆ ಸಾಧನ; ಭಿನ್ನ ಮಾರ್ಗ. my reason is quite other ನನ್ನ ಕಾರಣ ತೀರ ಬೇರೆಯಾದುದು.
ಅಧಿಕ; ಹೆಚ್ಚಿನ; ಬೇರೆ; ಮತ್ತೆ; ಜೊತೆಗೆ: we have other evidence ನಮ್ಮಲ್ಲಿ ಬೇರೆ (ಹೆಚ್ಚಿನ) ಸಾಕ್ಷ್ಯವಿದೆ. a few other examples ಮತ್ತೆ ಕೆಲವು ಉದಾಹರಣೆಗಳು.
ಎರಡರಲ್ಲಿ ಒಂದು ಯಾ ಇಬ್ಬರಲ್ಲಿ ಒಬ್ಬ: open your other eye ನಿನ್ನ ಇನ್ನೊಂದು ಕಣ್ಣು ತೆರೆ.
(the ಒಡನೆ) ಉಳಿದ; ಮಿಕ್ಕ; ಪ್ರಸಕ್ತವಾದುದನ್ನು ಬಿಟ್ಟು ಇತರ ಎಲ್ಲವನ್ನೂ ಪರಿಗಣಿಸಿದ, ನಿರಾಕರಿಸಿದ, ಮೊದಲಾದ ತರುವಾಯ ಉಳಿಯುವ: must be in the other pocket ಇನ್ನೊಂದು ಜೀಬಿನಲ್ಲಿರಬೇಕು. where are the other two? ಉಳಿದಿಬ್ಬರು ಯಾ ಮಿಕ್ಕಿಬ್ಬರು ಎಲ್ಲಿ?
(than ಜೊತೆಗೆ) ವಿನಾ; ಬಿಟ್ಟು; ಹೊರತು; ಉಳಿದು: any person other than you ನಿನ್ನನ್ನು ಬಿಟ್ಟು ಯಾವನಾದರೂ.