logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

infarction
ನಾಮವಾಚಕ
(ರೋಗಶಾಸ್ತ್ರ) ಊತಕ – ಸಾವು, ಮೃತಿ, ಮರಣ; ರಕ್ತದ ಪೂರೈಕೆಯಾಗದಿರುವುದರಿಂದ ದೇಹದ ಒಂದು ಭಾಗದ ಊತಕ ಸತ್ತುಹೋಗುವುದು.

infatuate
ಸಕರ್ಮಕ ಕ್ರಿಯಾಪದ ಪದಗುಚ್ಛ
infatuated with (ಯಾವುದೇ ಒಂದರ ಬಗ್ಗೆ ಅತಿಯಾದ, ಅವಿವೇಕದ) ವ್ಯಾಮೋಹ, ಪ್ರೀತಿ ಹೊಂದಿರು.
  • (ಒಬ್ಬನ) ವಿವೇಕಗೆಡಿಸು; ಮತಿಗೆಡಿಸು; (ಒಬ್ಬನಲ್ಲಿ) ಅತಿ ಅವಿವೇಕ ಹುಟ್ಟುವಂತೆ ಮಾಡು; (ಒಬ್ಬನು) ತಿಳಿಗೇಡಿ; ಮತಿಗೇಡಿ – ಆಗುವಂತೆ ಮಾಡು.
  • (ಮಿತಿಈರಿದ) ರಾಗಾವೇಶ ಹುಟ್ಟಿಸು; ರಾಗೋದ್ರೇಕವುಂಟುಮಾಡು; ಮೋಹಪರವಶಗೊಳಿಸು; ರಾಗೋನ್ಮತ್ತಗೊಳಿಸು; ವ್ಯಾಮೋಹವುಂಟು ಮಾಡು; ಮೋಹಾಂಧತೆ ಉಂಟುಮಾಡು: (ಮುಖ್ಯವಾಗಿ ಕಾಮದ) ಆವೇಶ ಹುಟ್ಟಿಸು.

  • infatuatedly
    ಕ್ರಿಯಾವಿಶೇಷಣ
  • ತಿಳಿಗೇಡಿಯಾಗಿ; ಮತಿಗೇಡಿತನದಿಂದ; ತೀರ ಅವಿವೇಕದಿಂದ.
  • (ಮಿತಿಈರಿದ) ರಾಗೋದ್ರೇಕದಿಂದ; ಮೋಹಪರವಶನಾಗಿ; ರಾಗೋನ್ಮತ್ತನಾಗಿ.

  • infatuation
    ನಾಮವಾಚಕ
  • ಅತಿ ಅವಿವೇಕ; ತಿಳಿಗೇಡಿತನ; ಮತಿಗೇಡಿತನ.
  • (ಮಿತಿಈರಿದ) ರಾಗೋದ್ರೇಕ; ವ್ಯಾಮೋಹ; ಮೋಹ ಪರವಶತೆ; ರಾಗೋನ್ಮತ್ತತೆ.

  • infauna
    ನಾಮವಾಚಕ
    ಸಮುದ್ರತಲ ಜೀವಿ; ಸಮುದ್ರದ ತಲದ ಮೇಲ್ಮೈ ಕೆಳಗೇ ವಾಸಿಸುವ ಪ್ರಾಣಿಗಳು.

    infect
    ಸಕರ್ಮಕ ಕ್ರಿಯಾಪದ
  • (ಗಾಳಿ, ನೀರು, ಮೊದಲಾದವನ್ನು) ಕಲುಷಿತಗೊಳಿಸು; ಮಲಿನಗೊಳಿಸು; ಹಾನಿಕರ ಕಶ್ಮಲದಿಂದ ಯಾ ರೋಗಾಣುಗಳಿಂದ ತುಂಬು.
  • (ರೂಪಕವಾಗಿ ಸಹ) (ಮನುಷ್ಯ, ದೇಹ, ಮನಸ್ಸು, ಮೊದಲಾದವುಗಳಿಗೆ) ರೋಗ ಹತ್ತಿಸು; ಜಾಡ್ಯ ಹತ್ತಿಸು; ಸೋಂಕು ಉಂಟುಮಾಡು.
  • (ಅಭಿಪ್ರಾಯ ಮೊದಲಾದವನ್ನು) ತುಂಬು; ತಲೆಗೆ ಹತ್ತಿಸು.

  • infection
    ನಾಮವಾಚಕ
  • ಸೋಂಕು; ಅಂಟು; ಸಾಮಾನ್ಯವಾಗಿ ಗಾಳಿ ಯಾ ನೀರಿನ ಮೂಲಕ ರೋಗ ಇನ್ನೊಬ್ಬನಿಗೆ ತಗಲುವುದು.
  • ನೀತಿ ಭ್ರಷ್ಟತೆ; ನೈತಿಕ ಕಲುಷತೆ; ನೀತಿಗೆಟ್ಟತನ; ನೈತಿಕ ಕಲಂಕ.
  • (ಮೇಲ್ಪಂಕ್ತಿ, ಸಹಾನುಭೂತಿ, ಮೊದಲಾದವುಗಳ) ವ್ಯಾಪನ; ಹರಡುವಿಕೆ; ಹರಡುವುದರಿಂದಾಗುವ ಪ್ರಭಾವ.

  • infectious
    ಗುಣವಾಚಕ
  • ಸಾಂಕ್ರಾಮಿಕ; ಸೋಂಕನ್ನು ಹರಡುವ ಯಾ ಹರಡಬಲ್ಲ.
  • (ರೋಗದ ವಿಷಯದಲ್ಲಿ) ಸಾಂಕ್ರಾಮಿಕ; ಸೋಂಕಿನಿಂದ ಬರುವ; ಗಾಳಿ, ನೀರು, ಮೊದಲಾದವುಗಳಿಂದ ಹರಡುವ.
  • (ಭಾವಗಳು ಮೊದಲಾದವುಗಳ ವಿಷಯದಲ್ಲಿ) (ಒಬ್ಬರಿಂದೊಬ್ಬರಿಗೆ) ವ್ಯಾಪಿಸುವ; ಹರಡುವ ಪ್ರವೃತ್ತಿಯುಳ್ಳ; ತಗುಲುವ ಗುಣದ; ಹಬ್ಬುವ ಸ್ವಭಾವದ.

  • infectiously
    ಕ್ರಿಯಾವಿಶೇಷಣ
  • ಸಾಂಕ್ರಾಮಿಕವಾಗಿ; ಸೋಂಕನ್ನು ಹರಡುವಂತೆ.
  • (ಭಾವ ಮೊದಲಾದವುಗಳ ವಿಷಯದಲ್ಲಿ) (ಒಬ್ಬರಿಂದೊಬ್ಬರಿಗೆ) ಹರಡುವಂತೆ; ವ್ಯಾಪಿಸುವಂತೆ.

  • infectiousness
    ನಾಮವಾಚಕ
  • ಸಾಂಕ್ರಾಮಿಕತೆ; ಸೋಂಕನ್ನು ಹರಡುವ ಗುಣ, ಸ್ವಭಾವ.
  • ವ್ಯಾಪನ; ಒಬ್ಬರಿಂದೊಬ್ಬರಿಗೆ ಹರಡುವಿಕೆ.


  • logo