logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

zoomorphic
ಗುಣವಾಚಕ
  • ಪ್ರಾಣಿಗಳ ರೂಪಾಕಾರಗಳನ್ನು ಕುರಿತ.
  • ಪ್ರಾಣಿಗಳ ರೂಪಗಳಲ್ಲಿ, ಮೃಗಾಕೃತಿಗಳಲ್ಲಿ – ರೂಪಿಸಿದ, ಚಿತ್ರಿಸಿದ.
  • ಮೃಗರೂಪದ ದೇವತೆಗಳುಳ್ಳ.

  • zoomorphism
    ನಾಮವಾಚಕ
  • ಪ್ರಾಣಿತ್ವಾರೋಪಣ; ದೇವತೆಯೊಂದಕ್ಕೆ ಯಾ ಅತಿಮಾನವನೊಬ್ಬನಿಗೆ ಪ್ರಾಣಿಯ ರೂಪ ಯಾ ಸ್ವಭಾವವನ್ನು ಆರೋಪಿಸುವುದು.
  • ಪ್ರಾಣಿಚಿತ್ರಣ; ಮೃಗಾಲಂಕಾರ ಚಿತ್ರಣ; (ಅಲಂಕಾರ ಯಾ ಸಾಂಕೇತಿಕ ಚಿತ್ರಣದಲ್ಲಿ) ಪ್ರಾಣಿರೂಪಗಳನ್ನು ಅನುಕರಿಸುವುದು ಯಾ ಚಿತ್ರಿಸುವುದು.
  • ಪ್ರಾಣಿದೇವತಾ – ಕಲ್ಪನೆ, ಭಾವನೆ; ದೇವರುಗಳನ್ನು ಪ್ರಾಣಿಗಳ ರೂಪದಲ್ಲಿ ಭಾವಿಸುವುದು, ಕಲ್ಪಿಸುವುದು ಯಾ ಆರಾಧಿಸುವುದು.

  • zoophyte
    ನಾಮವಾಚಕ
    ಪ್ರಾಣಿಸಸ್ಯ; ಸಸ್ಯರೂಪದ ಪ್ರಾಣಿಗಳು (ಉದಾಹರಣೆಗೆ ಜೆಲ್ಲಿ ಮೀನು, ಸಮುದ್ರದ ಸ್ಪಂಜು, ಮೊದಲಾದವು).

    zoophytic
    ಗುಣವಾಚಕ
    ಪ್ರಾಣಿಸಸ್ಯದ; ಸಸ್ಯರೂಪದ ಪ್ರಾಣಿಗಳಿಗೆ ಸಂಬಂಧಿಸಿದ.

    zooplankton
    ನಾಮವಾಚಕ
    (ಸಾಗರದ ಹಲವು ಆಳಗಳಲ್ಲಿ ತೇಲುತ್ತ ಯಾ ಸಾಗಿಹೋಗುತ್ತ ಇರುವ) ಪ್ರಾಣಿ(ಜೀವ)ರಾಶಿ.

    zoospore
    ನಾಮವಾಚಕ
    (ಶಿಲೀಂಧ್ರ, ಪಾಚಿ, ಮೊದಲಾದ) ಚಲಜೀವಕಣ; ಪ್ರಾಣಿಜೀವಕಣ.

    zoosporic
    ಗುಣವಾಚಕ
    ಜಲಜೀವಕಣದ; ಪ್ರಾಣಿಜೀವಕಣಕ್ಕೆ ಸಂಬಂಧಿಸಿದ.

    zoot suit
    ನಾಮವಾಚಕ
    (ಆಡುಮಾತು) ಉದ್ದನೆಯ ದೊಗಲೆ ಜಾಕೆಟ್‍ ಮತ್ತು ಎತ್ತರ ಸೊಂಟಪಟ್ಟಿಯುಳ್ಳ, ಕ್ರಮೇಣ ತುದಿ ಚೂಪಾಗುವ ಷರಾಯಿಗಳಿರುವ ಗಂಡಸಿನ ಉಡುಪು, ಸೂಟು.

    zootomy
    ನಾಮವಾಚಕ
  • ಪ್ರಾಣ್ಯಂಗ ರಚನೆ ಯಾ ರಚನಾಶಾಸ್ತ್ರ.
  • ಪ್ರಾಣ್ಯಂಗಚ್ಫೇದ; ಪ್ರಾಣಿಚ್ಫೇದನ.

  • zori
    ನಾಮವಾಚಕ
    (ಬಹುವಚನ zoris). (ಜಪಾನೀಯರ) ಹುಲ್ಲಿನ ಪಾದರ; ಹುಲ್ಲುಕಡ್ಡಿಯಿಂದ ಯಾ ರಬ್ಬರಿನಿಂದ ಮಾಡಿದ ಮೋಜ, ಮೆಟ್ಟು, ಚಪ್ಪಲಿ.


    logo