logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Magellanic cloud
ನಾಮವಾಚಕ
ಮ್ಯಾಜಿಲ್ಯಾನಿಕ್‍ ಮೇಘ; ಕ್ಷೀರಪಥ ಗೆಲ್ಯಾಕ್ಸಿಗೆ ಅತ್ಯಂತ ಸಮೀಪದಲ್ಲಿ, ಖಾಗೋಳಿಕ ದಕ್ಷಿಣಧ್ರುವಕ್ಕೆ 20 ಡಿಗ್ರಿ ಕೋನದೊಳಗೆ ಇರುವ, ಬೆಳಕಿನ ಬಟ್ಟುಗಳಂತೆ ಎದ್ದುಕಾಣುವ ಎರಡು ಗೆಲ್ಯಾಕ್ಸಿಗಳಲ್ಲಿ ಒಂದು.

magenta
ನಾಮವಾಚಕ
  • ಮಜೆಂಟಾ ಬಣ್ಣ; ಕೆನ್ನೇರಿಳೆ ಬಣ್ಣ; ಇಟಲಿಯ ಮಜೆಂಟಾ ಎಂಬಲ್ಲಿ 1859ರಲ್ಲಿ ನಡೆದ ಯುದ್ಧದ ನಂತರ ಕಂಡು ಹಿಡಿಯಲಾದ, ಒಂದು ಉಜ್ವಲ ಕಡು ಕೆನ್ನೀಲಿ ವರ್ಣದ್ರವ್ಯ.
  • ಕೆನ್ನೇರಿಳೆ ಬಣ್ಣದ ಅನಿಲೀನ್‍ ರಂಗು.

  • magenta
    ಗುಣವಾಚಕ
  • ಮಜೆಂಟಾ ಬಣ್ಣದ; ಉಜ್ವಲ ಕಡು ಕೆನ್ನೀಲಿ ಬಣ್ಣದ; ಕೆನ್ನೇರಿಳೆ ಬಣ್ಣದ.
  • ಕಡುನೀಲಿ ಬಣ್ಣ ಹಾಕಿದ.

  • maggot
    ನಾಮವಾಚಕ ಪದಗುಚ್ಛ
    maggot in one’s head (ಒಬ್ಬನ) ತಲೆಯನ್ನು ಕಾಡುವ ಹುಚ್ಚು; ತಲೆ ಹೊಕ್ಕ ಗುಂಗಿ ಹುಳ; ಮನಸ್ಸನ್ನು ಕೊರೆಯುವ ಕೀಟ.
  • (ಮುಖ್ಯವಾಗಿ ಚೀಸ್‍ ನೊಣದ ಮತ್ತು ಬ್ಲೂಬಾಟಲ್‍ ಎಂಬ ನೊಣದ) ಲಾರ್ವಾ; ಮರಿಹುಳು.
  • ಚಿತ್ತಭ್ರಾಂತಿಯ ವಿಚಿತ್ರ ಕಲ್ಪನೆ; ಹುಚ್ಚು ಕಲ್ಪನೆ.

  • maggoty
    ಗುಣವಾಚಕ
  • ಹುಳು ಹಿಡಿದ; (ಲಾರ್ವಾ) ಹುಳುಗಳಿಂದ ತುಂಬಿದ: maggoty apricots ಹುಳು ಬಿದ್ದ ಏಪ್ರಿಕಾಟ್‍ ಹಣ್ಣು.
  • (ಮುಖ್ಯವಾಗಿ ಇಂಗ್ಲೆಂಡಿನಲ್ಲಿ ಪ್ರಯೋಗ) ಹುಚ್ಚು ಕಲ್ಪನೆಗೊಳಗಾದ; ಭ್ರಾಂತಿಹಿಡಿದ.

  • magi
    ನಾಮವಾಚಕ
    magus ಎಂಬ ಪದದ ಬಹುವಚನ.

    magian
    ಗುಣವಾಚಕ
    ‘ಮೇಜಿ’ಗಳ; (ಶಿಶು ಯೇಸು ಕ್ರಿಸ್ತನಿಗೆ ಕಾಣಿಕೆ ತಂದು ಒಪ್ಪಿಸಿದ) ಪೂರ್ವ ದೇಶದ ಮೂವರು ಜ್ಞಾನಿಗಳಿಗೆ ಸಂಬಂಧಿಸಿದ.

    magian
    ನಾಮವಾಚಕ
  • ‘ಮೇಜಿ’; (ಶಿಶು ಯೇಸು ಕ್ರಿಸ್ತನಿಗೆ ಕಾಣಿಕೆ ತಂದು ಒಪ್ಪಿಸಿದ) ಪೂರ್ವದೇಶದ ಮೂವರು ಜ್ಞಾನಿಗಳಲ್ಲೊಬ್ಬ.
  • = magician.

  • magianism
    ನಾಮವಾಚಕ
    ಮೇಜಿಗಳ ಮತ, ತತ್ತ್ವ.

    magic
    ನಾಮವಾಚಕ ಪದಗುಚ್ಛ
  • ಮಂತ್ರವಿದ್ಯೆ; ಮೋಡಿ; ಮಾಟ; ಅಭಿಚಾರ; ಬೇಳುವೆ; ಭೂತ, ಪ್ರೇತ, ಮೊದಲಾದ ಆಧಿಭೌತಿಕ ಶಕ್ತಿಗಳನ್ನು ಬಳಸಿ ಘಟನೆಗಳನ್ನು ನಿಯಂತ್ರಿಸುವ ವಿದ್ಯೆ, ಕಲೆ.
  • ಮ್ಯಾಜಿಕ್ಕು; ಕಣ್ಣುಕಟ್ಟು; ಯಕ್ಷಿಣಿ; ಜಾದೂ; ಇಂದ್ರಜಾಲ; ಗಾರುಡಿ ವಿದ್ಯೆ; ಕೈಚಳಕ ಮೊದಲಾದವುಗಳಿಂದ ವಿಚಿತ್ರವಾದ ಕಾರ್ಯಗಳನ್ನು ಮಾಡುವ ಕಲೆ.
  • ಮೋಡಿ; ಅದ್ಭುತ ಪರಿಣಾಮ; ಅನಿರ್ವಚನೀಯ ಮೋಹಕತೆ; ಆಶ್ಚರ್ಯಕರವಾದ ಫಲಕೊಡುವ, ವಿವರಿಸಲಸಾಧ್ಯವಾದ ಯಾ ಗಮನ ಸೆಳೆಯುವ ಗುಣ, ಪ್ರಭಾವ: the magic of Kumaravyasa’s poetry ಕುಮಾರವ್ಯಾಸನ ಕಾವ್ಯದ ಮೋಡಿ.


  • logo