(ರಸಾಯನವಿಜ್ಞಾನ) ಲ್ಯಾಕ್ಟಿಕ್ ಆಮ್ಲ; ದುಗ್ಧಾಮ್ಲ; ಕ್ಷೀರಾಮ್ಲ; ಹಾಲು ಹುಳಿಯಾದಾಗ ಅದರಲ್ಲಿ ರೂಪುಗೊಳ್ಳುವ ಕಾರ್ಬನಿಕ ಆಮ್ಲ, ${\rm CH}_3. {\rm CH(OH)}. {\rm COOH}$.
lactiferous
ಗುಣವಾಚಕ
ಕ್ಷೀರೋತ್ಪಾದಕ; ಕ್ಷೀರದಾಯಿ; ಹಾಲು ಯಾ ಹಾಲಿನಂಥ ದ್ರವವನ್ನು – ಕೊಡುವ, ಒಸರುವ, ಸ್ರವಿಸುವ.
lacto-
ಸಮಾಸ ಪೂರ್ವಪದ
ಕ್ಷೀರ-, ಹಾಲಿನ, ಹಾಲಿಗೆ ಸಂಬಂಧಿಸಿದ ಎಂಬರ್ಥಗಳಲ್ಲಿ ಬಳಸುವ ಸಮಾಸ ಪೂರ್ವಪದ
lactobacillus
ನಾಮವಾಚಕ
(ಬಹುವಚನ lactobacilli ಲ್ಯಾಕ್ಟೋಬಸಿಲೈ). (ಜೀವವಿಜ್ಞಾನ) ಲ್ಯಾಕ್ಟೋಬ್ಯಾಸಿಲಸ್; ಲ್ಯಾಕ್ಟಿಕ್ ಆಮ್ಲವನ್ನು ಉತ್ಪತ್ತಿ ಮಾಡುವ ಬ್ಯಾಸಿಲಸ್.
lactometer
ನಾಮವಾಚಕ
ಕ್ಷೀರಮಾಪಕ; ಹಾಲಿನ ಸಾಂದ್ರತೆಯನ್ನು ಪರೀಕ್ಷಿಸುವ ಉಪಕರಣ.
lactone
ನಾಮವಾಚಕ
(ರಸಾಯನವಿಜ್ಞಾನ) ಲ್ಯಾಕ್ಟೋನ್; ಯಾವುದೇ ಹೈಡ್ರಾಕ್ಸಿ ಆಮ್ಲದಲ್ಲಿರುವ ಕಾರ್ಬಾಕ್ಸಿಲ್ ಗುಂಪು ಅದೇ ಅಣುವಿನಲ್ಲಿರುವ ಹೈಡ್ರಾಕ್ಸಿಲ್ ಗುಂಪಿನೊಂದಿಗೆ ವರ್ತಿಸಿ ಉತ್ಪತ್ತಿಮಾಡುವ ಆಂತರಿಕ ಎಸ್ಟರ್.