logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

eavesdrop
ಅಕರ್ಮಕ ಕ್ರಿಯಾಪದ
  • (ಹಿಂದೆ) ಸೂರಿನ ಕೆಳಗೆ ನಿಂತು (ಗುಟ್ಟು ಮಾತನ್ನು) ಕದ್ದು ಕೇಳು.
  • (ರೂಪಕವಾಗಿ) ಸೂರಾಲಿಸು; ಹೊಂಚು ಕೇಳು; ಗುಟ್ಟಿನ ಮಾತುಕತೆಯನ್ನು ಕದ್ದು ಕೇಳು.

  • eavesdropper
    ನಾಮವಾಚಕ
    (ಸಾಮಾನ್ಯವಾಗಿ ರೂಪಕವಾಗಿ) ಸೂರಾಲಿಸುವವನು; ಕದ್ದು ಕೇಳುವವನು; ಗುಟ್ಟು ಮಾತನ್ನು ಹೊಂಚಿಕೇಳುವವ.

    ebb
    ನಾಮವಾಚಕ ಪದಗುಚ್ಛ
    ebb and flow ಉಬ್ಬರವಿಳಿತ; ಏರಿಳಿತ; ಭರತ ಇಳಿತ.
  • (ಸಮುದ್ರದ) ಉಬ್ಬರದ ನೀರಿನ ಇಳಿತ.
  • ಇಳಿತ; ಇಳಿಗಾಲ; ಕ್ಷೀಣಗತಿ; ಅವನತಿ: at a low ebb ತುಂಬಾ ಹೀನ ಸ್ಥಿತಿಯಲ್ಲಿ; ಇಳಿಗಾಲದಲ್ಲಿ.

  • ebb
    ಅಕರ್ಮಕ ಕ್ರಿಯಾಪದ
  • (ಉಬ್ಬರದ ನೀರು) ಹಿಂದೆ ಸರಿ; ಇಳಿ.
  • ಕುಗ್ಗು; ಕ್ಷಯಿಸು; ಕ್ಷೀಣಿಸು.

  • ebb-tide
    ನಾಮವಾಚಕ
  • ಇಳಿಪ್ರವಾಹ; ಇಳಿತದ ಪ್ರವಾಹ.
  • ಇಳಿಗಾಲ; ಅವನತಿ; ಕ್ಷೀಣಗತಿ; ಕ್ಷಯ.

  • ebon
    ಗುಣವಾಚಕ
  • ಕರಿಮರದಿಂದ, ಎಬನಿಯಿಂದ — ಮಾಡಿದ.
  • ಎಬನಿಯಷ್ಟು ಕಪ್ಪಾದ; ಕಡುಗಪ್ಪಾದ.

  • ebonite
    ನಾಮವಾಚಕ
    ಗಂಧಕ ರಬ್ಬರು; ಗಂಧಕೀಕರಣ ಮಾಡಿದ ಗಡಸು ರಬ್ಬರು.

    ebonize
    ಸಕರ್ಮಕ ಕ್ರಿಯಾಪದ
    ಎಬನಿಮರದಂಥ ಕಪ್ಪು ಬಣ್ಣ ಹಾಕು; ಕರಿ ಬಣ್ಣವೂರಿಸು; ಕಪ್ಪು ಮೆರಗು ಕೊಡು.

    ebony
    ನಾಮವಾಚಕ
  • ಎಬನಿ; ಕರಿಮರ; ಉಷ್ಣವಲಯದ, ಮುಖ್ಯವಾಗಿ ಡಯಸ್ಪೈರಸ್‍ ಕುಲದ, ಮರ.
  • ಇಂಥ ದಾರನ್ನು ಕೊಡುವ ಯಾವುದೇ ಮರ.
  • ಇದನ್ನೇ ಹೋಲುವ ಇತರ ಮರಗಳು ಯಾ ಅವುಗಳ ದಾರುಗಳು.
  • ಕಡುಗಪ್ಪುಬಣ್ಣ; ಗಾಢ ಷ್ಣವರ್ಣ; ಹೊಳೆಯುವ ಕಡು ಕಪ್ಪು ಬಣ್ಣ.

  • ebony
    ಗುಣವಾಚಕ
    = ebon.


    logo