(ರಸಾಯನವಿಜ್ಞಾನ) ಕ್ಯಾಡ್ಮಿಯಂ; ಮಿಶ್ರಲೋಹಗಳನ್ನು ತಯಾರಿಸಲು, ಹೊಳಪುಕೊಡಲು, ಮುಖ್ಯವಾಗಿ ಕಬ್ಬಿಣ, ಸ್ಟೀಲ್‍ಗಳಿಗೆ ವಿದ್ಯುಲ್ಲೇಪನವನ್ನು ಮಾಡಲು ಬಳಸುವ, ನೋಡಲು ತವರವನ್ನು ಹೋಲುವ, ಮೆತುವಾದ, ವಿಷಪೂರಿತ, ದ್ವಿವೇಲನ್ಸೀಯ, ಪರಮಾಣ್ವಂಕ 48 ಹಾಗೂ ಪರಮಾಣುತೂಕ $112.4$ ಇರುವ, ನೀಲಿ ಬಿಳಿಯ ಲೋಹಧಾತು; ಸಂಕೇತ Cd.
cadmium cell
ನಾಮವಾಚಕ
ಕ್ಯಾಡ್ಮಿಯಮ್ ಕೋಶ; ವಿದ್ಯುತ್ಕೋಶಗಳ ವಿದ್ಯುಚ್ಚಾಲಕಬಲಗಳನ್ನು ಅಳೆಯಲು ಪ್ರಮಾಣಕವಾಗಿ ಬಳಸುವ ವಿದ್ಯುತ್ಕೋಶ.
cadmium yellow
ನಾಮವಾಚಕ
ಕ್ಯಾಡ್ಮಿಯಂ ಹಳದಿ; ಕ್ಯಾಡ್ಮಿಯಂ ಸಲೆಡ್ ಉಳ್ಳ, ವರ್ಣಚಿತ್ರಣದಲ್ಲಿ ಬಳಸುವ, ಕಡು ಹಳದಿ ವರ್ಣದ್ರವ್ಯ.
cadre
ನಾಮವಾಚಕ
ಚೌಕಟ್ಟು; ರೂಪರೇಖೆ; ವಿನ್ಯಾಸ; ರಚನೆ; ಯೋಜನೆ: he gave the cadre of the project ಅವನು ಯೋಜನೆಯ ರೂಪುರೇಖೆಯನ್ನು ಕೊಟ್ಟ.
(ಸೈನ್ಯ ಮೊದಲಾದವು) (ಬೇಕಾದಾಗ ಹೆಚ್ಚಿಸಿಕೊಳ್ಳಬಹುದಾದ, ಕಾಯಂ ಆದ) ಮೂಲಪಡೆ; ಮೂಲಚಮು.
ಕಮ್ಯುನಿಸ್ಟ್ ಪಕ್ಷದ ಹಿತಾಸಕ್ತಿಗಳ ಅಭಿವೃದ್ಧಿಗಾಗಿ ಶ್ರಮಿಸುವ ಕಾರ್ಯಕರ್ತರ ಗುಂಪು ಯಾ ಆ ಗುಂಪಿನ ಸದಸ್ಯ.
ಶಿಕ್ಷಿತವರ್ಗ; ನುರಿತ ತಂಡ; ಧಾರ್ಮಿಕ ಯಾ ರಾಜಕೀಯ ಪಕ್ಷ ಯಾ ಕುಶಲ ಕೆಲಸಗಾರರ ತಂಡ ಮೊದಲಾದ ವ್ಯಾಪಕವಾದ ಸಂಸ್ಥೆಯನ್ನು ರೂಪಿಸಲು, ಯಾ ಅದಕ್ಕಾಗಿ ಶಿಕ್ಷಣ ಕೊಡಲು, ಯಾ ಅದರ ಮುಂದಾಳತ್ವ ವಹಿಸಲು ಬೇಕಾದ ತರಪೇತಿ, ಶಿಕ್ಷಣ ಯಾ ಅರ್ಹತೆ ಪಡೆದಿರುವ—ಗುಂಪು, ವರ್ಗ, ತಂಡ.
caduceus
ನಾಮವಾಚಕ
ದೂತದಂಡ; ಪುರಾತನ ಗ್ರೀಕ್, ರೋಮನ್ ದೂತರು–ಮುಖ್ಯವಾಗಿ ದೇವದೂತರಾದ ಹರ್ಮಿಸ್ ಯಾ ಮರ್ಕ್ಯುರಿ–ಹಿಡಿದಿರುವ, ಎರಡು ಸರ್ಪಗಳು ಸುತ್ತಿಕೊಂಡಿರುವ, ಮೇಲೆ ರೆಕ್ಕೆಗಳಂಥ ಕೆತ್ತನೆಯಿರುವ ದಂಡ.
ವೈದ್ಯವೃತ್ತಿಯ ಯಾ ಅಮೆರಿಕನ್ ಸೈನ್ಯದ ವೈದ್ಯಕೀಯ ಪಡೆಯ ಸಂಕೇತ ಯಾ ಲಾಂಛನವಾಗಿ ಬಳಸಿಕೊಂಡಿರುವ ಈ ದಂಡ.
caducity
ನಾಮವಾಚಕ
ಭಂಗುರತೆ; ಕ್ಷಣಿಕತೆ; ಅಸ್ಥಿರತೆ: the caducity of life ಜೀವನದ ಕ್ಷಣಿಕತೆ.
(ಜೀವವಿಜ್ಞಾನ) ಅಂಗನಾಶ; ಅಂಗಪಾತ; ಅಂಗಗಳು; ಅಂಗಭಾಗಗಳು ಕಾರ್ಯನಿರ್ವಹಣೆಯ ಅನಂತರ ಬಿದ್ದು ಹೋಗುವಿಕೆ.