logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

backblocks
ನಾಮವಾಚಕ
(ಆಸ್ಟ್ರೇಲಿಯ, ನ್ಯೂಸಿಲಂಡ್‍, ಮೊದಲಾದವುಗಳಲ್ಲಿ) (ಜನಸಂದಣಿ ಕಡಮೆಯಿರುವ) ಒಳನಾಡು ಜಮೀನು.

backboard
ನಾಮವಾಚಕ
  • ಹಿಂದಂಡೆ; ಬಂಡಿಯ ಹಿಂದೆ ಸಾಮಾನು ಬೀಳದಂತೆ ಕಟ್ಟುವ ಹಲಗೆ.
  • (ವೈದ್ಯಶಾಸ್ತ್ರ) ಬೆನ್ನು ಹಲಗೆ; ಮಗುವಿಗೆ ಬೆನ್ನು ನೆಟ್ಟಗಿರಲು ಯಾ ಬೆನ್ನಿಗೆ ಆಸರೆಯಾಗಿ ಕಟ್ಟುವ ಹಲಗೆ.
  • (ಬಾಸ್ಕೆಟ್‍ಬಾಲ್‍ ಆಟದಲ್ಲಿ) ಕಲ್ಲಿ, ಕುಕ್ಕೆ – ಹಲಗೆ; ಚೆಂಡು ತೂರಿಸುವ ಬಳೆಯನ್ನು ಸಿಕ್ಕಿಸಿರುವ ಹಲಗೆ.

  • backbone
    ನಾಮವಾಚಕ ನುಡಿಗಟ್ಟು
    to the backbone ಕೂಲಂಕಷವಾಗಿ; ಸಂಪೂರ್ಣವಾಗಿ.
  • (ಅಂಗರಚನಾಶಾಸ್ತ್ರ) ಬೆನ್ನೆಲುಬು; ಬೆನ್ನುಮೂಳೆ; ನಟ್ಟೆಲುಬು; ಕಶೇರು.
  • (ರೂಪಕವಾಗಿ) ಬೆನ್ನೆಲುಬು; ಮೂಲಾಧಾರ; ಮುಖ್ಯಾಸರೆ.
  • (ಯಾವುದೇ ದೇಶದ) ಪ್ರಧಾನ ಪರ್ವತ ಶ್ರೇಣಿ; ಮುಖ್ಯ ಬೆಟ್ಟಸಾಲು.
  • ಜಲವಿಭಾಗಸ್ಥಾನ ಯಾ ನೀರುದಿಣ್ಣೆ; ನೀರು ಬೇರೆ ಬೇರೆ ಕಡೆಗೆ ಹರಿದುಹೋಗುವಂಥ ನಡುದಿಣ್ಣೆ.
  • ಮುಖ್ಯಬಲ; ಪ್ರಧಾನಶಕ್ತಿ.
  • ಗಟ್ಟಿ ಮನಸ್ಸು; ದೃಢಸಂಕಲ್ಪ; ಮನಸ್ಥೈರ್ಯ.
  • ಬೆನ್ನುಮೂಳೆಯಂತಿರುವ ಪದಾರ್ಥ.
  • (ಅಮೆರಿಕನ್‍ ಪ್ರಯೋಗ) (ಪುಸ್ತಕದ) ಬೆನ್ನುಪಟ್ಟಿ;
  • (ನೌಕಾಯಾನ) ಮೇಲುಕಟ್ಟು; ನಡುಹಗ್ಗ; ಹಡಗಿನ – ದಕ್ಕದ ಚಾವಣಿಯ ಉದ್ದಕ್ಕೂ ಎಡಬಲಕ್ಕೆ ಬಿಗಿದಿರುವ, ಅದಕ್ಕೆ ಆಧಾರವಾಗಿದ್ದು, ಅದನ್ನು ಬಲಪಡಿಸುವ, ಹಗ್ಗ.

  • backboned
    ಗುಣವಾಚಕ
    (ಅಂಗರಚನಾಶಾಸ್ತ್ರ) ಬೆನ್ನೆಲುಬುಳ್ಳ; ಕಶೇರುಕ.

    backboneless
    ಗುಣವಾಚಕ
    (ಅಂಗರಚನಾಶಾಸ್ತ್ರ)
  • ಬೆನ್ನೆಲುಬಿಲ್ಲದ; ಅಕಶೇರುಕ.
  • (ವ್ಯಕ್ತಿಯ ವಿಷಯದಲ್ಲಿ) ಸ್ಥೈರ್ಯವಿಲ್ಲದ; ಅಸ್ಥೈರ್ಯದ.

  • backchat
    ನಾಮವಾಚಕ
    (ಆಡುಮಾತು) ಎದುರು, ಪ್ರತಿ, ಮರು – ಮಾತು; ಎದುರುತ್ತರ; ಪ್ರತ್ಯಾರೋಪ.

    backcloth
    ನಾಮವಾಚಕ
    (ಮುಖ್ಯವಾಗಿ ಬ್ರಿಟಿಷ್‍ ಪ್ರಯೋಗ) (ರಂಗಮಂದಿರ) ಹಿಂದೆರೆ; ಹಿಂಪರದೆ; ಹಿಂಗೋಡೆ ತೆರೆ; ರಂಗದ ಹಿಂಭಾಗದಲ್ಲಿರುವ ಚಿತ್ರಪರದೆ.

    backcomb
    ಸಕರ್ಮಕ ಕ್ರಿಯಾಪದ
    ಹಿಂದಕ್ಕೆ ಬಾಚು; ಒಳಗಿನ ಕೂದಲನ್ನು ಹಿಂದಕ್ಕೆ, ನೆತ್ತಿಯ ಕಡೆಗೆ ಬಾಚು.

    backdate
    ಸಕರ್ಮಕ ಕ್ರಿಯಾಪದ
  • (ರಸೀತಿ ಮೊದಲಾದವುಗಳಿಗೆ) ಹಿಂದಿನ ತಾರೀಖನ್ನು – ಹಾಕು, ನಮೂದಿಸು.
  • (ಒಪ್ಪಂದ ಮೊದಲಾದವುಗಳ ವಿಷಯದಲ್ಲಿ ಹಿಂದಿನ ಒಂದು ತಾರೀಖಿನಿಂದಲೇ) ಸಮ್ಮತವಾಗುವಂತೆ, ಕ್ರಮಬದ್ಧವಾಗುವಂತೆ – ಮಾಡು.

  • backdrop
    ನಾಮವಾಚಕ
  • = backcloth.
  • (ಕಥೆ, ಘಟನೆ, ಮೊದಲಾದವುಗಳ) ಹಿನ್ನೆಲೆ.


  • logo