logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

osteomalacia
ನಾಮವಾಚಕ
ಅಸ್ಥಿ ಮಾರ್ದವ; ಅಸ್ಥಿಮೃದುತ್ವ; ಆಹಾರದಲ್ಲಿ ಖನಿಜಾಂಶಗಳ ಕೊರತೆಯಿಂದಾಗಿ ಮಕ್ಕಳಿಗೆ ರಿಕೆಟ್ಸ್‍ ಬರುವಂತೆ ದೊಡ್ಡವರಿಗೆ ಬರುವ, ಮೂಳೆ ಮೆತ್ತಗಾಗುವ ಒಂದು ರೋಗ.

osteomalacic
ಗುಣವಾಚಕ
ಅಸ್ಥಿ ಮೃದತ್ವದ ಯಾ ಅದಕ್ಕೆ ಸಂಬಂಧಿಸಿದ.

osteometry
ನಾಮವಾಚಕ
ಅಸ್ಥಿಮಾಪನ; ಮೂಳೆಅಳೆತ; ಮಾನವಶಾಸ್ತ್ರದ ಅಧ್ಯಯನದ ಅಂಗವಾಗಿ ಮೂಳೆಗಳನ್ನು ಅಳೆಯುವುದು.

osteomyelitis
ನಾಮವಾಚಕ
ಮೂಳೆ ಉರಿಯೂತ; ಎಲುಬಿನಲ್ಲಿ, ಮುಖ್ಯವಾಗಿ ಎಲುಬಿನ ಮಜ್ಜೆಯಲ್ಲಿ, ಉರಿಯೂತ ಕಾಣಿಸಿಕೊಳ್ಳುವ ಒಂದು ಬಗೆಯ ಸೋಂಕು ರೋಗ.

osteopath
ನಾಮವಾಚಕ
ಆಸ್ಟಿಯೋಪತಿ ವೈದ್ಯ; ಅಸ್ಥಿಭಿಷಜ; ಮೂಳೆ ವೈದ್ಯ; ಆಸ್ಟಿಯೋಪತಿ ವೈದ್ಯ ಪದ್ಧತಿಯ ಅನುಯಾಯಿ.

osteopathic
ಗುಣವಾಚಕ
ಆಸ್ಟಿಯೋಪತಿ ವೈದ್ಯದ ಯಾ ಅದಕ್ಕೆ ಸಂಬಂಧಿಸಿದ.

osteopathist
ನಾಮವಾಚಕ
= osteopath.

osteopathy
ನಾಮವಾಚಕ
ಆಸ್ಟಿಯೋಪತಿ; ಮೂಳೆವೈದ್ಯಪದ್ಧತಿ; ಅಸ್ಥಿಭೈಷಜ್ಯ; ವ್ಯಾಧಿಗಳಿಗೆ ಮುಖ್ಯಕಾರಣ ಮೂಳೆಗಳಲ್ಲಾಗುವ ದೋಷಗಳೇ ಎಂದೂ ಔಷಧಿಗಳ ನೆರವಿನಿಂದ ಅವನ್ನು ಸರಿಪಡಿಸಿ ಅನೇಕ ರೋಗಗಳನ್ನು ಗುಣಪಡಿಸಬಹುದೆಂದೂ ನಂಬುವ ಒಂದು ವೈದ್ಯ ಪದ್ಧತಿ.

osteopetrosis
ನಾಮವಾಚಕ
ಅಸ್ಥ್ಯಶ್ಮರಿ ವ್ಯಾಧಿ; ಮೂಳೆಗಡಸುರೋಗ; ಅಸ್ಥಿಕಾಠಿನ್ಯ ವ್ಯಾಧಿ; ಮೂಳೆಗಳು ಅತ್ಯಂತ ಸಾಂದ್ರವೂ ಗಡಸೂ ಆಗುವ ಒಂದು ವ್ಯಾಧಿ.

osteophyte
ನಾಮವಾಚಕ
ದುರ್ಮೂಳೆ; ಎಲುಬು ಅತಿಯಾಗಿ ಬೆಳೆದಿರುವುದು.


logo