logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

infamize
ಸಕರ್ಮಕ ಕ್ರಿಯಾಪದ
ಹೆಸರು ಕೆಡಿಸು; ಕೆಟ್ಟ ಹೆಸರು ತರು; ಅಪಖ್ಯಾತಿ ಬರಿಸು; ಅಪಕೀರ್ತಿ ಉಂಟುಮಾಡು; ಕುಖ್ಯಾತಿಗೊಳಿಸು.

infamous
ಗುಣವಾಚಕ
  • ಕೆಟ್ಟ ಹೆಸರಿನ; ಹೆಸರು ಕೆಟ್ಟ; ಕುಖ್ಯಾತ; ಕುಪ್ರಸಿದ್ಧ; ಅಪಕೀರ್ತಿ ಬರುವಷ್ಟು – ದುಷ್ಟನಾದ, ನೀಚನಾದ.
  • (ನ್ಯಾಯಶಾಸ್ತ್ರ) ಪೌರತ್ವಚ್ಯುತ; ಪೌರತ್ವಹೃತ; ಪೌರತ್ವ ತಪ್ಪಿಸಲ್ಪಟ್ಟ; (ಹೇಯವಾದ ಅಪರಾಧ ಮಾಡಿದ್ದರಿಂದ) ಪೌರಹಕ್ಕುಗಳನ್ನು ಕಳೆದುಕೊಂಡ.
  • ಹೇಯವಾದ; ನೀಚ; ಅಪಮಾನಕರ; ಹೇವರಿಕೆ ಹುಟ್ಟಿಸುವ.

  • infamously
    ಕ್ರಿಯಾವಿಶೇಷಣ
  • ಹೆಸರು ಕೆಡುವಂತೆ; ಕೆಟ್ಟ ಹೆಸರು ಬರುವಂತೆ; ಅಪಕೀರ್ತಿ, ಅಪಖ್ಯಾತಿ – ಉಂಟಾಗುವಂತೆ.
  • ಹೇಯವಾಗಿ; ನೀಚವಾಗಿ; ಅಪಮಾನಕರವಾಗಿ; ಹೇವರಿಕೆ ಹುಟ್ಟಿಸುವಂತೆ.

  • infamy
    ನಾಮವಾಚಕ
    ಕೆಟ್ಟ ಹೆಸರು; ಅಪಕೀರ್ತಿ; ಕುಖ್ಯಾತಿ; ಕುಪ್ರಸಿದ್ಧಿ.

    infancy
    ನಾಮವಾಚಕ
  • ಮಗುತನ; ಕೂಸುತನ; ಹಸುಳೆತನ; ಶಿಶುತ್ವ; ಶೈಶವ.
  • (ನ್ಯಾಯಶಾಸ್ತ್ರ) ಅಪ್ರಾಪ್ತ ವಯಸ್ಕ; 21 ವರ್ಷ ತುಂಬದ ವ್ಯಕ್ತಿ; ಹರೆಯ ಮುಟ್ಟದವನು.
  • ಎಳೆತನ; ಶೈಶವಾವಸ್ಥೆ; ಅಪ್ರೌಢಾವಸ್ಥೆ; ಬೆಳವಣಿಗೆಯ ಆದಿ ದಶೆ, ಆರಂಭ ದಶೆ, ಮೊದಲ ಹಂತ.

  • infant
    ನಾಮವಾಚಕ
  • ಎಳೆಮಗು; ಹಸುಗೂಸು; ಹಸುಳೆ; ಶಿಶು.
  • ಇನ್ನೂ ಏಳುವರ್ಷ ತುಂಬದ ಮಗು.
  • (ನ್ಯಾಯಶಾಸ್ತ್ರ) ಅಪ್ರಾಪ್ರ ವಯಸ್ಕ; 21 ವರ್ಷಕ್ಕಿಂತ ಕಡಮೆ ವಯಸ್ಸಿನ ವ್ಯಕ್ತಿ.
  • (ಮುಖ್ಯವಾಗಿ ವಿಶೇಷವಾಗಿ) ಶಿಶು; ಬೆಳವಣಿಗೆಯ ಪ್ರಾರಂಭಾವಸ್ಥೆಯಲ್ಲಿರುವ ವಸ್ತು.

  • infant mortality
    ನಾಮವಾಚಕ
    ಕೂಸು ಸಾವು; ಶಿಶು ಮರಣ:
  • ಮಕ್ಕಳು ಒಂದು ವರ್ಷದೊಳಗೆ ಸಾಯುವುದು.
  • ಮಕ್ಕಳ ಸಾವಿನ ದರ; ಶಿಶು ಮರಣ ದರ.

  • infant prodigy
    ನಾಮವಾಚಕ
    ಅಚ್ಚರಿ ಕೂಸು; ಪ್ರಚಂಡ ಶಿಶು; ಅದ್ಭುತ ಶಿಶು; ಅತಿ ಚಿಕ್ಕವಯಸ್ಸಿನಲ್ಲಿ ತುಂಬ ಯಾ ಪ್ರಚಂಡ ಬುದ್ಧಿಶಕ್ತಿ ಮೊದಲಾದವನ್ನು ಪಡೆದಿರುವ ಮಗು.

    infant school
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) (ಸಾಮಾನ್ಯವಾಗಿ ಏಳು ವರ್ಷ ವಯಸ್ಸಿನೊಳಗಿನ) ಎಳೆಮಕ್ಕಳ ಶಾಲೆ; ಶಿಶುಶಾಲೆ.

    infanta
    ನಾಮವಾಚಕ
    (ಚರಿತ್ರೆ) (ಸ್ಪೇನ್‍ ಯಾ ಪೋರ್ಚುಗಲ್‍ ದೇಶದ) (ಸಾಮಾನ್ಯವಾಗಿ ರಾಜ್ಯಕ್ಕೆ ವಾರಸುದಾರಳಲ್ಲದ) ಹಿರಿಯ ರಾಜಕುಮಾರಿ, ಅರಸುಕುವರಿ.


    logo