logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inextensible
ಗುಣವಾಚಕ
  • ವಿಸ್ತರಿಸಲಾಗದ; ಹಿಗ್ಗಿಸಲಾಗದ; ಅವಿಸ್ತರಣೀಯ; ಅವಿಸ್ತಾರ್ಯ.
  • ಲಂಬಿಸಲಾಗದ; ಅವಿತಾನ್ಯ; ಉದ್ದವಾಗಿ ಎಳೆಯಲಾಗದ.

  • inextinguishable
    ಗುಣವಾಚಕ
    (ಬೆಂಕಿ ಮೊದಲಾದವುಗಳ ವಿಷಯದಲ್ಲಿ) ನಂದಿಸಲಾಗದ; ಆರಿಸಲಾಗದ; ಅಶಾಮ್ಯ (ರೂಪಕವಾಗಿ ಸಹ).

    inextricable
    ಗುಣವಾಚಕ
  • (ಸ್ಥಾನ, ಸ್ಥಿತಿ, ಮೊದಲಾದವುಗಳ ವಿಷಯದಲ್ಲಿ) ಬಿಡಿಸಿಕೊಳ್ಳಲಾಗದ; ಪಾರಾಗಲಾಗದ.
  • (ಕುಣಿಕೆ, ಸಮಸ್ಯೆ, ಮೊದಲಾದವುಗಳ ವಿಷಯದಲ್ಲಿ) ಬಿಡಿಸಲಾಗದ; ಅವಿಮೋಚನೀಯ; ಅಪರಿಹಾರ್ಯ.
  • ಸಂಕೀರ್ಣವಾದ; ಗೋಜಲಾದ; ಜಟಿಲವಾದ.

  • inextricably
    ಕ್ರಿಯಾವಿಶೇಷಣ
  • (ಸ್ಥಾನ, ಸ್ಥಿತಿ, ಮೊದಲಾದವುಗಳ ವಿಷಯದಲ್ಲಿ) ಬಿಡಿಸಿಕೊಳ್ಳಲಾಗದೆ; ತಪ್ಪಿಸಿಕೊಳ್ಳಲಾಗದೆ; ಪಾರಾಗಲಾಗದೆ.
  • (ಕುಣಿಕೆ, ಸಮಸ್ಯೆ, ಮೊದಲಾದವುಗಳ ವಿಷಯದಲ್ಲಿ) ಬಿಡಿಸಿಕೊಳ್ಳಲಾಗದಂತೆ; ಅಪರಿಹಾರ್ಯವಾಗಿ.
  • ಸಂಕೀರ್ಣವಾಗಿ; ಜಟಿಲವಾಗಿ; ಗೋಜಲುಗೋಜಲಾಗಿ.

  • infallibilism
    ನಾಮವಾಚಕ
  • (ರೋಮನ್‍ ಕ್ಯಾಥೊಲಿಕ್‍) ದೋಷಾತೀತತ್ವ; ಅಸ್ಖಲಿತತ್ವ; ಅಪ್ರಮಾದತ್ವ; ನಿರ್ದೋಷತ್ವ; ಪೋಪ್‍ನಲ್ಲಿದೆಯೆಂದು ನಂಬಲಾದ ತಪ್ಪೇ ಮಾಡದಂಥ ಲಕ್ಷಣ, ಮಹಿಮೆ.
  • ಅವ್ಯತ್ಯಸನೀಯತ್ವ; ನಿಯತತ್ವ; ವೈಜ್ಞಾನಿಕ ನಿಯಮಗಳು ಬದಲಾವಣೆಗೆ ಒಳಪಡತಕ್ಕವಲ್ಲ ಎಂಬ ನಂಬಿಕೆ.

  • infallibilist
    ನಾಮವಾಚಕ
  • ನಿರ್ದೋಷತ್ವವಾದಿ; ನಿರ್ದೋಷತ್ವವಾದದಲ್ಲಿ ನಂಬಿಕೆಯುಳ್ಳವನು; ಮುಖ್ಯವಾಗಿ ಪೋಪ್‍ನಿಂದ ತಪ್ಪಾಗುವುದು ಸಾಧ್ಯವೇ ಇಲ್ಲವೆಂದು ನಂಬುವವನು.
  • ನಿಯತತ್ವವಾದಿ; ವೈಜ್ಞಾನಿಕ ನಿಯಮಗಳು ಬದಲಾವಣೆಗೆ ಒಳಪಡತಕ್ಕವಲ್ಲ ಎಂಬ ನಂಬಿಕೆಯುಳ್ಳವನು.

  • infallibility
    ನಾಮವಾಚಕ
  • (ಪೋಪನ್ನು ಕುರಿತು ಅಧಿಕೃತವಾಗಿ ಮಾತನಾಡುವಾಗ) = infallibilism(1).
  • ಅಸ್ಖಲಿತತ್ವ; ತಪ್ಪೇ ಮಾಡದಂಥ ಯಾ ಆಗದಂಥ ಲಕ್ಷಣ.

  • infallible
    ಗುಣವಾಚಕ
  • ತಪ್ಪೇ ಮಾಡದ; ದೋಷಾತೀತ; ಅಪ್ರಮಾದಿ; ತಪ್ಪೇ ಮಾಡದಂಥ ಲಕ್ಷಣವುಳ್ಳ.
  • (ವಿಧಾನ, ಪರೀಕ್ಷೆ, ರುಜುವಾತು, ಮೊದಲಾದವುಗಳ ವಿಷಯದಲ್ಲಿ) ತಪ್ಪೇ ಆಗದ; ಅಮೋಘ; ಅಸ್ಖಲಿತ; ವಿಫಲವೇ ಆಗದ; ತಪ್ಪಾಗುವುದು ಸಾಧ್ಯವೇ ಇಲ್ಲದ.

  • infallibly
    ಕ್ರಿಯಾವಿಶೇಷಣ
  • ಖಂಡಿತವಾಗಿ; ನಿಸ್ಸಂದೇಹವಾಗಿ; ಸುಳ್ಳಾಗುವ ಸಂಭವವೇ ಇಲ್ಲದಂತೆ.
  • ತಪ್ಪಾಗದೆಯೇ; ತಪ್ಪು ಮಾಡದೆಯೇ; ತಪ್ಪು ಮಾಡುವ ಸಾಧ್ಯತೆಯೇ ಇಲ್ಲದೆ; ತಪ್ಪಿಗೊಳಪಡುವ ಸಂಭವವೇ ಇಲ್ಲದೆ.

  • infamise
    ಸಕರ್ಮಕ ಕ್ರಿಯಾಪದ
    = infamize.


    logo