logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ossific
ಗುಣವಾಚಕ
  • ಅಸ್ಥೀಕರಣಶೀಲ; ಎಲುಬಾಗಿಸುವ ಪ್ರವೃತ್ತಿಯ.
  • ಅಸ್ಥೀಭವನ ಶೀಲ; ಎಲುಬಾಗುವ ಪ್ರವೃತ್ತಿಯ.
  • ಜಡ್ಡುಗಟ್ಟುವ ಯಾ ಜಡ್ಡುಗಟ್ಟಿಸುವ ಪ್ರವೃತ್ತಿಯ.

  • ossification
    ನಾಮವಾಚಕ
  • ಅಸ್ಥೀಭವನ; ಜೈವಿಕ ಬದಲಾವಣೆಗಳಿಂದ ಊತಕಗಳು ಎಲುಬಾಗಿ ಪರಿವರ್ತನೆ ಹೊಂದುವುದು.
  • ಅಸ್ಥೀಭೂತ, ಅಸ್ಥೀಕೃತ–ವಸ್ತು; ಮೂಳೆಯಾಗಿ, ಎಲುಬಾಗಿ ಆದ ಪದಾರ್ಥ: ossification on the walls of the aorta ಆಯೋರ್ಟ ಒಳಮೈ ಮೇಲಿನ ಮೂಳೆಯಾದ, ಅಸ್ಥೀಭೂತ ವಸ್ತುಗಳು.
  • (ರೂಪಕವಾಗಿ) ಜಡ್ಡುಗಟ್ಟುವಿಕೆ; ಮರಗಟ್ಟುವುದು; ಇನ್ನೊಬ್ಬರ ಕಷ್ಟಸುಖಗಳ ಬಗ್ಗೆ ಮನಸ್ಸು ಗಡಸಾಗುವುದು.

  • ossified
    ಗುಣವಾಚಕ
  • ಅಸ್ಥೀಕೃತ; ಅಸ್ಥೀಭೂತ; ಎಲುಬಾದ; ಎಲುಬಾಗಿ ಪರಿವರ್ತನೆ ಹೊಂದಿದ.
  • (ರೂಪಕವಾಗಿ) ಜಡ್ಡುಗಟ್ಟಿದ; ಮರಗಟ್ಟಿದ.

  • ossify
    ಕ್ರಿಯಾಪದ ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • ಅಸ್ಥೀಕರಿಸು; ಎಲುಬಾಗಿಸು; ಮೂಳೆಯಾಗಿಸು.
  • ಗಡುಸಾಗಿಸು.
  • ಜಡ್ಡುಗಟ್ಟಿಸು; ಮರಗಟ್ಟಿಸು.

  • osso bucco
    ನಾಮವಾಚಕ
    ತರಕಾರಿಗಳೊಡನೆ ‘ವೈನ್‍’ನಲ್ಲಿ ಬೇಯಿಸಿದ ಕರುವಿನ ಮೊಣಕಾಲಿನ ಮಜ್ಜೆಯುಳ್ಳ ಮೂಳೆ.

    ossuary
    ನಾಮವಾಚಕ
  • ಅಸ್ಥಿಪಾತ್ರೆ; ಅಸ್ಥಿಕುಂಭ; ಮೂಳೆ ಮಡಕೆ; ಸತ್ತವರ ಮೂಳೆಗಳನ್ನಿಡುವ ಪಾತ್ರೆ.
  • ಹೆಣಮಾಳಿಗೆ; ಶವದ ಮನೆ.
  • ಮೂಳೆ ಗುಹೆ; ಪ್ರಾಚೀನಾಸ್ಥಿ ಗುಹೆ; ಪುರಾತನ ಮೂಳೆಗಳು ಸಿಕ್ಕುವ ಗುಹೆ.

  • osteitis
    ನಾಮವಾಚಕ
    ಮೂಳೆಯ ಉರಿಯೂತ; ಮೂಳೆಯ ವಸ್ತುವಿನ ಉರಿಯುತ.

    ostensible
    ಗುಣವಾಚಕ
    ಪ್ರಕಟ; ಮೇಲ್ನೋಟದ; ಹೊರ ತೋರಿಕೆಯ; ಕೇವಲ ತೋರಿಕೆಯ; ನಿಜವಾದುದನ್ನು ಮರೆಮಾಚಲು ಹೇಳಿಕೊಳ್ಳುವ: his ostensible purpose was ಮೇಲೆ ಕಾಣುವ ಅವನ ಉದ್ದೇಶ, ಅವನ ಪ್ರಕಟ ಗುರಿ.

    ostensibly
    ಕ್ರಿಯಾವಿಶೇಷಣ
    ಪ್ರಕಟವಾಗಿ; ಕೇವಲ ತೋರಿಕೆಗಾಗಿ; ಮೇಲೆ ಕಾಣಿಸುವಂತೆ: he was ostensibly harsh ತೋರಿಕೆಗಾಗಿ ಅವನು ಬಿರುಸಾಗಿದ್ದ.

    ostensive
    ಗುಣವಾಚಕ
  • ನೇರವಾಗಿ ಪ್ರದರ್ಶಿಸುವ.
  • (ಲಕ್ಷಣದ ವಿಷಯದಲ್ಲಿ) ನಿರ್ದೇಶಕ; ಪದವೊಂದರ ಅರ್ಥವನ್ನು ನೇರವಾಗಿ ನಿರ್ದೇಶಿಸುವ, ತೋರಿಸಿ ಹೇಳುವ, ಪ್ರತ್ಯಕ್ಷವಾಗಿ ತೋರಿಸಿ ಸೂಚಿಸುವ.


  • logo