logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

osmund
ನಾಮವಾಚಕ
ಆಸ್ಮಂಡ್‍; ಆಸ್ಮಂಡ ಕುಲಕ್ಕೆ ಸೇರಿದ ಯಾವುದೇ ಜಾತಿಯ ಜರಿ ಗಿಡ.

osmund
ನಾಮವಾಚಕ
ಆಸ್ಮಂಡ್‍; ಬಾಣದ ತಲೆಗಳು, ಗಾಳದ ಕೊಕ್ಕೆಗಳು, ಮೊದಲಾದವನ್ನು ತಯಾರಿಸಲು ಹಿಂದೆ ಸ್ವೀಡನ್ನಿನಿಂದ ಆಮದು ಮಾಡಿಕೊಳ್ಳುತ್ತಿದ್ದ, ಉತ್ತಮ ತರದ ಕಬ್ಬಿಣ.

osmunda
ನಾಮವಾಚಕ
= 1osmund.

osone
ನಾಮವಾಚಕ
(ರಸಾಯನವಿಜ್ಞಾನ) ಓಸೋನ್‍; ಓಸಸೋನಿನ ಜಲವಿಭಜನೆಯಿಂದ ಉತ್ಪತ್ತಿಯಾಗುವ, ಅಕ್ಕಪಕ್ಕದಲ್ಲಿ ಆಲ್ಡಿಹೈಡ್‍ ಮತ್ತು ಕೀಟೋನ್‍ ಪರಮಾಣು ಪುಂಜಗಳಿರುವ ಕಾರ್ಬನಿಕ ಸಂಯುಕ್ತ.

osprey
ನಾಮವಾಚಕ
  • ಕಡಲ ಡೇಗೆ; ಮೀನು ಡೇಗೆ; ಮೇಲ್ಗಡೆ ದಟ್ಟ ಕಂದು, ಕೆಳಗಡೆ ಬಿಳಿ ಬಣ್ಣವಿರುವ, ಮೀನನ್ನು ಹಿಡಿದು ತಿನ್ನುವ, ಒಂದು ಬಗೆಯ ಡೇಗೆ. Figure: osprey-1
  • (ಆಸ್ಟ್ರೇಲಿಯ) ಹ್ಯಾಟಿನ ಮೇಲಿನ ಅಲಂಕಾರದ ಕೊಕ್ಕರೆ ಗರಿ.

  • ossein
    ನಾಮವಾಚಕ
    ಮೂಳೆಗಳಲ್ಲಿರುವ ಕಾಲಜನ್‍ (collagen).

    osseous
    ಗುಣವಾಚಕ
  • ಎಲುಬಿನ; ಮೂಳೆಯ; ಅಸ್ಥಿಯ; ಎಲುಬಿನಿಂದಾದ.
  • ಮೂಳೆಯಾಗಿರುವ; ಅಸ್ಥೀಕೃತ; ಅಸ್ಥೀಕರಿಸಿರುವ; ಎಲುಬಾಗಿ ಮಾರ್ಪಟ್ಟಿರುವ.
  • ಅಸ್ಥಿಪಂಜರವಿರುವ; ಎಲುಬುಗೂಡುಳ್ಳ.
  • ಅಸ್ಥಿಮಯ; ಎಲುಬುಗಳು ತುಂಬಿರುವ.

  • ossicle
    ನಾಮವಾಚಕ
  • ಅಸ್ಥಿಕ; ಸಣ್ಣ ಎಲುಬು ಯಾ ಮೂಳೆ.
  • ಆಸಿಕಲ್‍; ಪ್ರಾಣಿಗಳ ಅಂಗರಚನೆಯಲ್ಲಿ ಕಂಡುಬರುವ ಮೂಳೆ, ಕೈಟಿನ್‍ ಯಾ ಕ್ಯಾಲ್ಸಿಯಮ್‍ ಕಾರ್ಬೊನೇಟಿನಿಂದಾದ ಸಣ್ಣ ಗಡಸು ಭಾಗ.

  • Ossie
    ನಾಮವಾಚಕ
    = $^1$Aussie.

    Ossie
    ಗುಣವಾಚಕ
    = $^2$Aussie.


    logo